Advertisement
ಬಳಿಕ ಮಾತನಾಡಿದ ಅವರು ಜಾಗತಿಕ ಬ್ಯಾಂಕ್ ಶೇ. 75, ರಾಜ್ಯ ಸರಕಾರ ಶೇ. 25ರಷ್ಟು ಅನುದಾನದಲ್ಲಿ ಈ ತುರ್ತು ಭವನ ನಿರ್ಮಾಣವಾಗುತ್ತಿದೆ. ಇದರ ಸದುಪಯೋಗವನ್ನು ಹೊಸಬೆಟ್ಟು ಮೊಗವೀರ ಸಂಘವು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಇಂತಹ ಉತ್ತಮ ಯೋಜನೆಗೆ ಹೊಸಬೆಟ್ಟು ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸಬೆಟ್ಟು ಮೊಗವೀರ ಸಂಘದ ನಿಕಟಪೂರ್ವ ಅಧ್ಯಕ್ಷ ಗಂಗಾಧರಎಚ್., ಭವನದ ನಿರ್ಮಾಣಕ್ಕೆ ಮೂರು ವರ್ಷಗಳಲ್ಲಿ ಹಲವಾರು ಅಡೆತಡೆಗಳು ಎದುರಾದವು. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಲ್ಲಿ ನಿರಂತರವಾಗಿ ನಾನು ಒತ್ತಡ ಹಾಕಿದ ಮೇರೆಗೆ ಅಧಿಕಾರಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಇದನ್ನು ತುರ್ತು ಸಂದರ್ಭದಲ್ಲಿ ಹಾಗೂ ಸ್ಥಳೀಯ ಮೊಗವೀರರ ಕಾರ್ಯಕ್ರಮ ಗಳಿಗೂ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು. ಲೋಕೋಪಯೋಗಿ ಇಲಾಖಾ ಅಧಿಕಾರಿ ರವಿಕುಮಾರ್, ರತ್ನಾಕರ್ ಚೌಟ, ಗುತ್ತಿಗೆದಾರ ಅವಿನಾಶ್, ಶಂಕರ ವಿ. ಸಾಲ್ಯಾನ್, ಬಾಲಕೃಷ್ಣ ಗುರಿಕಾರ, ಭಜನ ಮಂದಿರದ ಅಧ್ಯಕ್ಷ ಉಮೇಶ್ ಎನ್. ಕಾಂಚನ್, ಲೀಲಾವತಿ ಉಪಸ್ಥಿತರಿದ್ದರು. ಜಗದೀಶ್ ವಂದಿಸಿದರು.
Related Articles
ಕಾರ್ಪೊರೇಟರ್ ಅಶೋಕ್ ಶೆಟ್ಟಿ ಮಾತನಾಡಿ, ಮೂರು ವರ್ಷಗಳಲ್ಲಿ ಈ ಯೋಜನೆಯ ಬಗ್ಗೆ ಪ್ರಯತ್ನ ಮಾಡಲಾಗಿದೆ. ಇದೀಗ ಬ್ಯಾಂಕ್‌ನ ಅನುಮತಿ ದೊರಕಿದ್ದು ಸಂಘಕ್ಕೊಂದು ಇದು ಬಹು ದೊಡ್ಡ ಕೊಡುಗೆಯಾಗಲಿದೆ. ಇದರ ಸದುಪಯೋಗವಾಗಲಿ ಎಂದರು.
Advertisement