Advertisement

ಹಕ್ಕಿ ಹಬ್ಬಕ್ಕೆ ಚಾಲನೆ; ಪರಿಸರ ಜಾಥಾ

01:45 PM Feb 10, 2018 | Team Udayavani |

ಮಹಾನಗರ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಮಂಗಳೂರಿನಲ್ಲಿ ಮೂರು ದಿನ ಆಯೋಜಿ ಸಲಾದ ರಾಜ್ಯ ಮಟ್ಟದ ‘4ನೇ ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಚಾಲನೆ ದೊರಕಿದೆ.

Advertisement

ರವಿವಾರದವರೆಗೆ ಹಕ್ಕಿ ಹಬ್ಬ ಸಂಘಟಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯದ ಹಲವು ಮಂದಿ ಹಕ್ಕಿ ಪ್ರಿಯರು, ಬರ್ಡ್‌ ಫೋಟೋಗ್ರಾಫರ್ ಹಕ್ಕಿಹಬ್ಬದಲ್ಲಿ ಭಾಗವಹಿಸಿದ್ದಾರೆ. ಪುರಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಪುರಭವನದ ಮುಂಭಾಗ ಪರಿಸರ ಜಾಥಾ ನೆರವೇರಿತು. ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಹಕ್ಕಿಗಳ ಕಲರವ ಇನ್ನಷ್ಟು ಕೇಳುವಂತಾಗಲು ಹಕ್ಕಿಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸುವಂತೆ ಫಲಕ ಪ್ರದರ್ಶಿಸಲಾಯಿತು. ವಿವಿಧ ಛಾಯಾಚಿತ್ರಗಾರರು ಸೆರೆಹಿಡಿದ ಹಕ್ಕಿಗಳ ವಿಭಿನ್ನ ಫೋಟೋಗಳನ್ನು ಮಂಗಳೂರು ಪುರಭವನದ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.

ಫೆ. 10 ಹಾಗೂ 11ರಂದು ಪಿಲಿಕುಳದಲ್ಲಿ ಉಪನ್ಯಾಸ, ವ್ಯಂಗ್ಯಚಿತ್ರ ಕಾರ್ಯಾಗಾರ, ರಸಪ್ರಶ್ನೆ ನಡೆಯಲಿದೆ. ಅಲ್ಲದೆ ಸಸಿಹಿತ್ಲು, ಮಂಜಲ್ಪಾದೆ ಸಹಿತ ಮಂಗಳೂರು ಜೌಗು ಪ್ರದೇಶ ಹಾಗೂ ಮಂಗಳೂರು ವಿ.ವಿ.ಗಳಲ್ಲಿ ಪಕ್ಷಿ ಪ್ರವಾಸೋದ್ಯಮ ಏರ್ಪಡಿಸಲಾಗಿದೆ. ಫೆ. 11ರಂದು ಸಮುದ್ರಕ್ಕೆ ಬೋಟಿನಲ್ಲಿ ತೆರಳಿ ಅಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next