Advertisement

ನೂತನ ತನಿಷ್ಕ ಮಳಿಗೆಗೆ ಚಾಲನೆ

11:43 AM Mar 24, 2018 | |

ಬೆಂಗಳೂರು: ಭಾರತದ ಪ್ರತಿಷ್ಠಿತ ಚಿನ್ನ ಹಾಗೂ ವಜ್ರಾಭರಣ ಸಂಸ್ಥೆ ತನಿಷ್ಕ ತನ್ನ ನೂತನ ಮಳಿಗೆಯನ್ನು ಮಾರತಹಳ್ಳಿಯಲ್ಲಿ ಶುಕ್ರವಾರ ಆರಂಭಿಸಿದೆ. ಟೈಟಾನ್‌ ಕಂಪನಿ ಲಿಮಿಟೆಡ್‌ನ‌ ಜ್ಯುವೆಲ್ಲರಿ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೆ.ವೆಂಕಟರಾಮನ್‌ ಹಾಗೂ ತನಿಷ್ಕ ದಕ್ಷಿಣ-2 ವಿಭಾಗದ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಶ್ರೀಕಾಂತ್‌ ಸುದರ್ಶನ್‌ ನೂತನ ಮಳಿಗೆ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಸಿ.ಕೆ.ವೆಂಕಟರಾಮನ್‌ ಅವರು, ಕಳೆದ 22 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸ ಹಾಗೂ ಗುಣಮಟ್ಟದ ಆಭರಣಗಳನ್ನು ಪೂರೈಸುವ ಮೂಲಕ ಅವರ ವಿಶ್ವಾಸ ಗಳಿಸಿದ್ದೇವೆ. ಜಾಗತಿಕ ಮಟ್ಟದ ವಿನ್ಯಾಸಗಳು ಹಾಗೂ ಶ್ರೇಷ್ಠ ಗುಣಮಟ್ಟದ ಸಾಂಪ್ರದಾಯಿಕ ಹಾಗೂ ಸಮಕಾಲೀನ ಆಭರಣಗಳನ್ನು ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ತನಿಷ್ಕನ 9ನೇ ಮಳಿಗೆ ಆರಂಭಿಸಲಾಗಿದೆ. ಈ ಮೂಲಕ 157 ನಗರದಲ್ಲಿ 249 ಮಳಿಗೆಗಳನ್ನು ಹೊಂದಿದ ಕೀರ್ತಿ ಸಂಸ್ಥೆಯದ್ದಾಗಿದೆ ಎಂದರು. 

ಉತ್ಕೃಷ್ಟ ಕಲೆಗಾರಿಕೆಯ 5 ಸಾವಿರಕ್ಕೂ ಹೆಚ್ಚು ಆಭರಣ ವಿನ್ಯಾಸಗಳನ್ನು ತನಿಷ್ಕ ಹೊಂದಿದೆ. ಇದರೊಂದಿಗೆ ಚಿನ್ನದ ಗುಣಮಟ್ಟ ತಿಳಿಸಲು ಮಳಿಗೆಯಲ್ಲಿ ಕ್ಯಾರೆಟ್‌ ಮೀಟರ್‌ ಇದ್ದು, ಟೈಟಾನ್‌ ಹಾಲ್‌ಮಾರ್ಕ್‌ ಹಾಗೂ ಟಾಟಾ ಸಮೂಹದ ಸಹಕಾರದೊಂದಿಗೆ ಅತ್ಯುತ್ತಮ ದರ್ಜೆಯ ಆಭರಣಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಅಗ್ರಸ್ಥಾನದಲ್ಲಿದ್ದೇವೆ ಎಂದು ಹೇಳಿದರು. 

ತನಿಷ್ಕನಲ್ಲಿ ಆರಂಭಿಸಿರುವ “ಗೋಲ್ಡ್‌ ಹಾರ್ವೆಸ್ಟ್‌’ ಯೋಜನೆ ಅಡಿ ಸಾಕಷ್ಟು ಗ್ರಾಹಕರು ತಮ್ಮ ಇಷ್ಟದ ಆಭರಣಗಳನ್ನು ಖರೀದಿಸಿದ್ದಾರೆ. ಗ್ರಾಹಕರು ಕಂತುಗಳಲ್ಲಿ ಹಣ ಪಾವತಿಸಲಿದ್ದು, ಯೋಜನೆಯ ಕೊನೆಯಲ್ಲಿ ಹೆಚ್ಚುವರಿ ಕೊಡುಗೆಯೊಂದಿಗೆ ಅವರಿಗೆ ಆಭರಣಗಳನ್ನು ನೀಡಲಾಗುತ್ತಿದೆ. ಮಾರತಹಳ್ಳಿ ಮಳಿಗೆಯಲ್ಲೂ “ಗೋಲ್ಡ್‌ ಹಾರ್ವೆಸ್ಟ್‌’ ಯೋಜನೆ ಲಭ್ಯವಿದೆ ಎಂದು ವೆಂಕಟರಾಮನ್‌ ತಿಳಿಸಿದರು. 

ಮಳಿಗೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡಿ ಚಿನ್ನ ಹಾಗೂ ವಜ್ರಾಭರಣಗಳ ವೀಕ್ಷಣೆ, ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಸಂಸ್ಥೆಯ ನಂದ ಕಿಶೋರ್‌, ಬಿಜು ಅಲೆಕ್ಸಾಂಡರ್‌, ಮನೋಜ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next