Advertisement

ರಸ್ತೆ ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಚಾಲನೆ 

11:49 AM Jul 29, 2018 | |

ಉಪ್ಪಿನಂಗಡಿ : ಸುಳ್ಯ-ಪುತ್ತೂರು ತಾಲೂಕು ವ್ಯಾಪ್ತಿಯ ಗಡಿ ಗ್ರಾಮದ ರಸ್ತೆ ಚಿಂದಿ ಚೂರಾಗಿ ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಕುರಿತಾಗಿ ‘ಸುದಿನ’ ವರದಿ ಬೆನ್ನಲ್ಲೇ ತುರ್ತು ಕಾಮಗಾರಿಗೆ ಚಾಲನೆ ದೊರೆತಿದೆ.

Advertisement

ಗೋಳಿತೊಟ್ಟು, ಮೇಲೂರು, ಶಾಂತಿನಗರದ ಮೂರು ಕಿ.ಮೀ. ರಸ್ತೆ ಸಂಪೂರ್ಣ ಕೆಟ್ಟು ಹೋಗಿ, ನಿತ್ಯ ಓಡಾಡುವ 8 ಟ್ರಿಪ್‌ ಸರಕಾರಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಮೂಡಿಬಂದಿತ್ತು. ಗ್ರಾಮಾಂತರ ಪ್ರದೇಶದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ಉಪ್ಪಿನಂಗಡಿಯನ್ನೇ ಆಶ್ರಯಿಸಬೇಕಿದ್ದು, ಅವರ ಭವಿಷ್ಯವೂ ಆತಂಕಿತವಾಗಿತ್ತು. ಸ್ಥಳೀಯರು ಜಿ.ಪಂ. ಸದಸ್ಯರ ಗಮನಕ್ಕೆ ತಂದಿದ್ದು, ಕಿರಿಯ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸಿ, ಮನವರಿಕೆ ಮಾಡಿಕೊಟ್ಟಿದ್ದರು.

ರಸ್ತೆ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ‘ಸುದಿನ’ ಜು. 28ರ ಸಂಚಿಕೆಯ ವರದಿ ಗಮನಿಸಿದ ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಪುತ್ತೂರು ಜಿ.ಪಂ. ಸಹಾಯಕ ಎಂಜಿನಿಯರ್‌ ರೋಹಿತಾಕ್ಷ ಅವರಿಗೆ ಮನವರಿಕೆ ಮಾಡಿಕೊಟ್ಟರು. ಜಲ್ಲಿಕಲ್ಲು ಹಾಕಿ ತಾತ್ಕಾಲಿಕ ಪರಿಹಾರದ ಕಾಮಗಾರಿ ಆರಂಭಿಸುವಂತೆ ಜೆಇ ಸಂದೀಪ್‌ ಗುತ್ತಿಗೆದಾರರಿಗೆ ಪಟ್ಟು ಹಿಡಿದು, ರಿಪೇರಿ ಶುರು ಮಾಡಿಸಿದ್ದಾರೆ. ಗ್ರಾ.ಪಂ. ಸದಸ್ಯರಾದ ಪುರುಷೋತ್ತಮ್‌, ಗೀತಾ ಪಿ. ರೈ, ಸ್ಥಳೀಯ ಪ್ರಮುಖರಾದ ಪ್ರತಾಪ್‌ಚಂದ್ರ ರೈ, ನಾಸಿರ್‌ ಹೊಸಮನೆ, ಸತೀಶ್‌ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next