Advertisement

3 ದಿನಗಳ ಬ್ಯಾರಿ ಮೇಳ-2019ಕ್ಕೆ ಚಾಲನೆ

12:24 AM Feb 09, 2019 | |

ಮಂಗಳೂರು: ಪ್ರತಿಯೊಬ್ಬರು ಪರಸ್ಪರ ಶಾಂತಿ-ಸೌಹಾರ್ದದಿಂದ ಬಾಳುವ ಮೂಲಕ ಸುಂದರ ಮಂಗಳೂರು ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Advertisement

ಬ್ಯಾರಿ ಚೇಂಬರ್ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ವತಿಯಿಂದ ಪುರಭವನದಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಆಯೋಜಿಸಿದ್ದ ಬ್ಯಾರಿ ಮೇಳ-2019 ಉದ್ಘಾಟಿಸಿ ಅವರು ಮಾತನಾಡಿದರು. ಬಿಸಿಸಿಐ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಬಿ. ಅಹ್ಮದ್‌ ಹಾಜಿ ಮೊಹಿಯುದ್ದೀನ್‌, ಶಿಕ್ಷಣ ರಂಗದ ಸೇವೆಗಾಗಿ ಡಾ| ಎಂ. ಅಬ್ದುಲ್‌ ರೆಹಮಾನ್‌, ವ್ಯವಹಾರ ಕ್ಷೇತ್ರದ ಅನಿವಾಸಿ ಭಾರತೀಯ ಪ್ರಶಸ್ತಿಯನ್ನು ಶೇಖ್‌ ಕರ್ನಿರೆ, ವ್ಯವಹಾರ ಸಾಧನೆಗಾಗಿ ಎ.ಕೆ. ಅಹ್ಮದ್‌ ಅವರಿಗೆ ಬ್ಯಾರಿ ಮೇಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಚಿವ ಯು.ಟಿ. ಖಾದರ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪ್ರದರ್ಶನ ಮಳಿಗೆಯನ್ನು ಯೇನ ಪೊಯ ವಿ.ವಿ.ಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ ಉದ್ಘಾಟಿಸಿದರು.

ಬಿಸಿಸಿಐ ಅಧ್ಯಕ್ಷ ಎಸ್‌.ಎಂ. ರಶೀದ್‌, ವಿ. ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಮೊದಿನ್‌ ಬಾವಾ, ಮೇಯರ್‌ ಭಾಸ್ಕರ್‌ ಕೆ., ಮೊಹಮ್ಮದ್‌ ಮಸೂದ್‌, ಯು.ಕೆ. ಮೋನು, ಇಬ್ರಾಹಿಂ, ಮೊಹಮ್ಮದ್‌ ಕರಂಬಾರು, ಅಬ್ದುಲ್‌ ಹಮೀದ್‌, ಹಿದಾಯತ್‌ ಮತ್ತಿತರರಿದ್ದರು.

ಮುಡಿಪಿನಲ್ಲಿ ಅಗ್ನಿಶಾಮಕ ಠಾಣೆ

Advertisement

ಇದೇ ವೇಳೆ ಮಾತನಾಡಿದ ಎಂ.ಬಿ. ಪಾಟೀಲ್‌, ಮುಡಿಪುವಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next