Advertisement

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು

04:59 PM Sep 14, 2020 | sudhir |

ರಾಂಪುರ: ಗ್ರಾಮೀಣ ಪ್ರದೇಶಗಳಲ್ಲಿನ ಅಶುದ್ಧ ಹಾಗೂ ಪ್ಲೋರೈಡ್‌ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿ ಈ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಸರಕಾರದ ಯೋಜನೆ ಸಾಕಷ್ಟು ಅನುಕೂಲ ಕಲ್ಪಿಸಿದೆ, ಆದರೆ, ಆ
ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪರಿಣಾಮ ಬಹುತೇಕ ಕಡೆಗಳಲ್ಲಿ ನೆಪಕ್ಕೆ ಮಾತ್ರ ಎನ್ನುವಂತಾಗಿದೆ.

Advertisement

ಸಮೀಪದ ಬೆನಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ನೀರಿನ ಘಟಕಗಳಿದ್ದು, ಅದರಲ್ಲಿ 3 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಬಹುತೇಕ ಘಟಕಗಳು ಹೆಸರಿಗೆ ಮಾತ್ರ ಇದ್ದು ಜನರಿಗೆ ಉಪಯೋಗವಿಲ್ಲದಂತಾಗಿದೆ.

ಹಲವೆಡೆ ಬಾಗಿಲು ಮುಚ್ಚಿದ ಘಟಕಗಳು: ಬೋಡನಾಯಕದಿನ್ನಿ, ಚಿಕ್ಕಗುಳಬಾಳ, ಹಿರೇಗುಳಬಾಳ, ಮನ್ನಿಕಟ್ಟಿ, ಭಗವತಿ,
ಮಗಳೊಳ್ಳಿ, ಅಚನೂರ, ರಾಂಪುರ, ಸಂಗಾಪುರ, ಹಳ್ಳೂರ, ಬೇವೂರ, ಚವಡಾಪುರ, ದೇವಲಾಪುರ, ಚಿಟಗಿನಕೊಪ್ಪ, ನಾಯನೇಗಲಿ, ಗ್ರಾಮ ಸೇರಿದಂತೆ ಒಟ್ಟು 18 ಘಟಕಗಳಿವೆ. ಇದರಲ್ಲಿ ಘಟಕ ಪ್ರಾರಂಭವಾದ ದಿನದಿಂದಲೇ ಕೀಲಿ ಹಾಕಲಾಗಿದೆ. ಹೀಗಾಗಿ ಸುಮಾರು ವರ್ಷಗಳಿಂದ ತುಕ್ಕು ಹಿಡಿಯುತ್ತಾ ಕುಳಿತಿವೆ.

ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆ: ಗ್ರಾಮೀಣ ಜನರಿಗೆ ಶುದ್ಧ ನೀರು ಮತ್ತೇ ಮರಿಚಿಕೆಯಾಗಿದ್ದು, ಘಟಕಗಳು
ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಾ ಹಾಗೂ ಹೀಗೂ ಕೆಲವು ತಿಂಗಳ ಕಾಲ ಕಾರ್ಯನಿರ್ವಹಿಸಿದ ಈ
ಘಟಕಗಳು ಮತ್ತೆ ನಿಂತು ಹೋಗಿವೆ. ಒಟ್ಟಿನಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಎನ್ನುವಂತಾಗಿದ್ದು, ಜನರಿಗೆ
ಇದರ ಉಪಯೋಗವಾಗುವಂತೆ ಪಂಚಾಯತ್‌ ನವರು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕೈಗೊಳ್ಳುವಂತೆ ಸಂಬಂಧಿಸಿದ ಖಾಸಗಿ ಕಂಪನಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅಗತ್ಯ ಕ್ರಮ ಕೈಗೊಂಡು ಬೇಗನೆ ದುರಸ್ತಿ ಮಾಡುತ್ತೇವೆ.
– ಎಸ್‌.ಎಚ್‌ ಕಾಳಗಿ, ಪಿಡಿಒ, ಬೆನಕಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next