Advertisement

ನೀರಿಲ್ಲದೇ ಹಾಹಾಕಾರ: ಶಾಶ್ವತ ಪರಿಹಾರಕ್ಕೆ ಇಲಾಖೆಗೆ ಮೊರೆ

06:30 AM Mar 23, 2018 | Team Udayavani |

ಕೊಲ್ಲೂರು: ಬೇಸಗೆ ಬೇಗೆ ತೀವ್ರವಾಗುತ್ತಿದ್ದಂತೆಯೇ, ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನ ಪರದಾಡ ತೊಡಗಿದ್ದಾರೆ. ಸಮಸ್ಯೆ ನಿಭಾಯಿಸಲು ಇದೀಗ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಮೊರೆ ಹೋಗಲಾಗಿದೆ.

Advertisement

ವಂಡ್ಸೆಯಲ್ಲಿ ನೀರಿಲ್ಲ. 
ವಂಡ್ಸೆಯಲ್ಲಿ  2,751 ಜನರು ವಾಸವಾಗಿದ್ದು ಈ ಭಾಗದ ಮೂಕಾಂಬಿಕಾ ಜನತಾ ಕಾಲನಿ, ವಂಡ್ಸೆ ಪೇಟೆ, ಮಾವಿನಕಟ್ಟೆ, ಉದ್ದಿನಬೆಟ್ಟು, ಆತ್ರಾಡಿ, ಬಳಿಗೇರಿ, ಹೆಸಿನಗದ್ದೆ, ಹರವರಿ, ಅಬ್ಬಿ ಮುಂತಾದೆಡೆ ಜಲಮೂಲಗಳು ಬತ್ತಿ ಹೋಗಿವೆ. ಪೇಟೆ ಸನಿಹದಲ್ಲಿ ಹರಿಯುತ್ತಿರುವ ಚಕ್ರಾ ನದಿ ನೀರು ಉಪ್ಪು ಮಿಶ್ರಿತವಾಗಿರುವುದರಿಂದ ಸಮಸ್ಯೆಯಾಗಿದೆ. ಕಳೆದ ಹಲವು ವರ್ಷಗಳಿಂದ ಬೇಸಿಗೆಯಲ್ಲಿ ಇಲ್ಲಿ ನೀರಿನ ಕೊರೆತೆಯಿದ್ದರೂ ಆಡಳಿತ ಕ್ರಮಕ್ಕೆ ಮುಂದಾಗಿಲ್ಲ.  ಕೊಳವೆ ಬಾವಿ ತೋಡಿ ನೀರು ಸರಬರಾಜು ಮಾಡುವ ಯೋಜನೆ ಇದ್ದರೂ ಅದಕ್ಕೆ ಇಲಾಖೆ ಗ್ರೀನ್‌ ಸಿಗ್ನಲ್‌ ನೀಡಿಲ್ಲ. 

ನೀರಿನ ಬರ
ಹೊಸ ಇಡೂರು-ಕುಂಜ್ಞಾಡಿ ಗ್ರಾ.ಪಂ.  ವ್ಯಾಪ್ತಿಯಲ್ಲಿ ನೀರಿಗೆ ಅಭಾವವಿದೆ. 4,500 ಗ್ರಾಮಸ್ಥರಿರುವ ಇಲ್ಲಿ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಂಡಿಲ್ಲ. ಇದಕ್ಕಾಗಿ ಟಾಸ್ಕ್ ಶರಣು ಹೋಗಿದ್ದಾರೆ.  ಸರಕಾರ ಬಾವಿ ತೋಡಿಸಿ ಪೈಪ್‌ಲೈನ್‌ ಒದಗಿಸಿ ನೀರು ನೀಡುವ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ವರುಷಗಳಲ್ಲಿ ಈ ಭಾಗಗಳಲ್ಲಿ  ನೀರಿನ ಬರಗಾಲ ಕಂಡುಬರುವ ಸಾಧ್ಯತೆ ಇದೆ. 

3,150 ನಿವಾಸಿಗಳಿಗೆ ಒಂದೇ ಟ್ಯಾಂಕ್‌! ಚಿತ್ತೂರು ಗ್ರಾ.ಪಂ.ನ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಪರಿಣಾಮ ಇಲ್ಲಿನ 3,150 ನಿವಾಸಿಗಳು ಬವಣೆ ಪಡುವಂತಾಗಿದೆ. ಹಿಜಾಣ, ಮಾರಣಕಟ್ಟೆ, ಹಾರ್ಮಣ್ಣು, ನೈಕಂಬ್ಳಿ, ತೆಂಕೂರು, ಗುಡ್ಡಿ, ಚಿತ್ತೂರು ಪರಿಸರದಲ್ಲಿ ನೀರಿನ ûಾಮ ಕಂಡುಬಂದಿದೆ.

19 ಕೊಳವೆ ಬಾವಿ 
ವಂಡ್ಸೆ ವ್ಯಾಪ್ತಿಯಲ್ಲಿ 19 ಕೊಳವೆ ಬಾವಿ ನಿರ್ಮಿಸಲಾಗಿದ್ದು ಅನೇಕ ಕಡೆ ಅವುಗಳನ್ನು ಬಳಸಲಾಗುತ್ತಿದೆ. ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. 
– ಶಂಕರ ಆಚಾರ್ಯ, ವಂಡ್ಸೆ ಪಿಡಿಒ

Advertisement

ನೀರನ್ನು ಒದಗಿಸುವುದು ಕಷ್ಟ
1 ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ಇದೆ. ಆದರೆ, ಗ್ರಾಮದ ಎಲ್ಲ ಭಾಗಗಳಿಗೆ ಅದರಲ್ಲಿ ನೀರು ಒದಗಿಸುವುದು ಕಷ್ಟವಾಗಿದೆ. 
– ಸಂದೇಶ್‌ ಶೆಟ್ಟಿ, ಚಿತ್ತೂರು ಪಿಡಿಒ  

ಬಾವಿ ಬತ್ತಿದೆ
ಗ್ರಾಮಕ್ಕೆ ನೀರುಣಿಸುತ್ತಿದ್ದ ಬಾವಿ ಬತ್ತಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಅನುಮತಿಗಾಗಿ ಕಾಯುತ್ತಿದ್ದೇವೆ.
– ಹರೀಶ್‌, ಇಡೂರು-ಕುಂಜ್ಞಾಡಿ ಗ್ರಾ.ಪಂ. ಪಿಡಿಒ

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next