Advertisement

Drinking Water; ದ.ಕ., ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸ್ಥಿತಿಗತಿ

01:10 AM Feb 24, 2024 | Team Udayavani |

ಉಡುಪಿ: ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಬೇಕಾದ ಗ್ರಾಮಗಳ ಮಾಹಿತಿಯನ್ನು ಗ್ರಾ.ಪಂ.ಗಳಿಂದ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಎಲ್ಲಿಯೂ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ.

Advertisement

ನಗರ ಸಭೆ ಸೇರಿದಂತೆ ಕಾರ್ಕಳ, ಕಾಪು, ಕುಂದಾಪುರ ಪುರಸಭೆ, ಬೈಂದೂರು ಹಾಗೂ ಸಾಲಿಗ್ರಾಮ ಪ.ಪಂ. ಮತ್ತು 155 ಗ್ರಾ.ಪಂ.ಗಳಿಂದಲೂ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಮಾಹಿತಿ ಯನ್ನು ಜಿಲ್ಲಾಡಳಿತ ಹಾಗೂ ಜಿ.ಪಂ. ಪಡೆಯುತ್ತಿದೆ.

ಜಿಲ್ಲೆಯಲ್ಲಿ ಸದ್ಯ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಆಗುತ್ತಿಲ್ಲ. ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣ ನದಿಯ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ 6.10 ಮೀಟರ್‌ ನಷ್ಟಿದೆ. ಜಿಲ್ಲೆಯ ವಾರಾಹಿ, ಸೀತಾ, ಸ್ವರ್ಣ, ಸೌಪರ್ಣಿಕಾ, ಪಾಪನಾಶಿನಿ, ಕುಬ್ಜ, ಚಕ್ರ, ಎಡಮಾವಿನ ಹೊಳೆ, ಮಡಿಸಾಲು ಹೊಳೆ ಸಹಿತ ಪ್ರಮುಖ ನದಿಗಳು, ಕೆರೆ, ಬಾವಿಗಳ ನೀರು ದಿನೇ ದಿನೇ ಬತ್ತುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಶೇ.25ರಷ್ಟು ಮಳೆ ಕೊರತೆಯಾಗಿರುವುದರಿಂದ ಅಂತರ್ಜಲ ಮಟ್ಟವೂ ದಾಖಲೆ ಪ್ರಮಾಣದಲ್ಲಿ ಕುಸಿದಿದೆ.

2023ರ ಮೇ ಅಂತ್ಯದಲ್ಲಿ ಉಡುಪಿ ತಾಲೂಕಿನ 17, ಬೈಂದೂರಿನ 14, ಕಾಪುವಿನ 7, ಕಾರ್ಕಳದ 14, ಕುಂದಾಪುರದ 22, ಬ್ರಹ್ಮಾವರದ 15 ಹಾಗೂ ಹೆಬ್ರಿಯ 10 ಸೇರಿ 99 ಗ್ರಾಮ ಗಳಿಗೆ ಟ್ಯಾಂಕರ್‌ ಮೂಲಕ ನೀರು ಪುರೈಸಲಾಗಿತ್ತು. 9,939 ಕುಟುಂಬಗಳ 45,545 ಜನರಿಗೆ ಟ್ಯಾಂಕರ್‌ ನೀರು ಕಳೆದ ವರ್ಷ ನೆರವಾಗಿತ್ತು. ಇದಕ್ಕಾಗಿ 56.90 ಲಕ್ಷ ರೂ.ಗಳನ್ನು ವ್ಯಯಿಸಲಾಗಿತ್ತು.

Advertisement

ಈ ಬಾರಿ ಮಳೆ ಕಡಿಮೆ ಇರುವು ದರಿಂದ ಇನ್ನಷ್ಟು ಗ್ರಾಮಗಳಿಗೆ ಬೇಸಗೆ ಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಸುವ ಪರಿಸ್ಥಿತಿ ಬರಬಹದು.

ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆಗೆ ಸರಕಾರಿ ವ್ಯವಸ್ಥೆಯಡಿ ಟೆಂಡರ್‌ ಪಡೆದು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಯಾಗಿ ಟ್ಯಾಂಕರ್‌ ನೀರು ಪೂರೈಸಿದರೆ ಹೆಚ್ಚು ಟ್ರಿಪ್‌ ಮಾಡಬಹುದು. ಸರಕಾರಿ ಟೆಂಡರ್‌ ಪಡೆದರೆ ನಗರ ಅಥವಾ ಗ್ರಾಮದ ಜನವಸತಿ ಪ್ರದೇಶಕ್ಕೆ ಹೋಗಿ ಜನರು ನೀರು ಕೊಂಡೊಯ್ಯುವ ತನಕವೂ ಕಾಯಬೇಕು ಎಂಬ ಧೋರ ಣೆಯಿದೆ. ಸರಕಾರಿ ಟೆಂಡರ್‌ ದರವೂ ಕಡಿಮೆ ಇರಲಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಹೀಗಾಗಿ ಕಳೆದ ವರ್ಷ 10 ಪಂಚಾಯತ್‌ಗಳು ಕಸ ಸಾಗಿಸುವ ವಾಹನದಲ್ಲಿ ನೀರಿನ ಟ್ಯಾಂಕ್‌ ಇಟ್ಟು ನೀರು ಸರಬರಾಜು ಮಾಡಿವೆ.

ಜಿಲ್ಲಾಧಿಕಾರಿ ಸಭೆ
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿ ಕಾರದ ಸಭೆ ನಡೆಸಿ, ತಹಶೀಲ್ದಾರರು, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕುಡಿಯುವ ನೀರಿನ ಸಮರ್ಥ ನಿರ್ವಹಣೆ ಬಗ್ಗೆ ನಿರ್ದೇಶನ ನೀಡಿದ್ದಾರೆ.

ಸಭೆಯಲ್ಲಿ ನೀಡಿದ ಪ್ರಮುಖ ಸೂಚನೆ
ಗ್ರಾ.ಪಂ.ಗಳ ಕಿಂಡಿಆಣೆಕಟ್ಟುಗಳಿಗೆ ತತ್‌ಕ್ಷಣವೇ ಹಲಗೆ ಅಳವಡಿಸಬೇಕು.

ಬೇಸಗೆಯಲ್ಲಿ ಜನ ಸಾಮಾನ್ಯರಿಗೆ ಕುಡಿಯುವ ನೀರು ಒದಗಿಸಲು ನೀರು ಲಭ್ಯವಿರುವ ಖಾಸಗಿ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು, ಅಗತ್ಯ ಕಂಡುಬಂದಲ್ಲಿ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು.

ತಾಲೂಕು ಹಂತದ ಕಾರ್ಯಪಡೆ ಸಮಿತಿ ನಿರಂತರ ಸಭೆ ಮಾಡಬೇಕು.

ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿ, ಬಾವಿ, ಓವರ್‌ಹೆಡ್‌ ಟ್ಯಾಂಕ್‌ ಸ್ವಚ್ಛತೆ ಅಗತ್ಯವಾಗಿ ಮಾಡಬೇಕು.

ವಿಪತ್ತು ನಿರ್ವಹಣೆಯ ತರಬೇತಿ ಪಡೆದ 300 ಜನ ಆಪದ್‌ ಮಿತ್ರರ ಜತೆಗೆ ಇನ್ನಷ್ಟು ಸ್ವಯಂ ಸೇವಕರನ್ನು ಸಜ್ಜುಗೊಳಿಸಬೇಕು.

ಪ್ರತೀ ಕಟ್ಟಡಗಳು ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊçಲು ಅಳವಡಿಕೆಗೆ ಅರಿವು ಮೂಡಿಸಬೇಕು ಇತ್ಯಾದಿ.

ನಲ್ಲಿ ನೀರು ಬರುತ್ತಿಲ್ಲ
ಜಲಜೀವನ್‌ ಮಿಷನ್‌ ಅಡಿ ಜಿಲ್ಲೆ ಯ ಗ್ರಾಮೀಣ ಭಾಗದಲ್ಲಿ ಪೈಪ್‌ ಲೈನ್‌ ಅಳವಡಿಸುವ ಕಾರ್ಯ ಬಹ ತೇಕ ಪೂರ್ಣಗೊಳ್ಳುವ ಹಂತದ ಲ್ಲಿದ್ದರೂ ನೀರು ಪೂರೈಕೆ ಆರಂಭ ವಾಗಿಲ್ಲ. 2,47,190 ಕುಟುಂಬಕ್ಕೆ ಜೆಜೆಎಂ ಮೂಲಕ ನೀರು ಪೂರೈಕೆ ಗುರಿ ಹೊಂದಲಾಗಿದ್ದು, 1,99,933 ಕುಟುಂಬಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನೀರು ಪೂರೈಕೆಗೆ ಬೇಕಾದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ, ಸಂಪರ್ಕ ಹಾಗೂ ನೀರಿನ ಮೂಲಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜೆಜೆಎಂ ಕಾರ್ಯ 2024ರ ಅಂತ್ಯಕ್ಕೆ ಪೂರ್ಣ ಗೊಳ್ಳಲಿದೆ.

ಸದ್ಯ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
-ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

ದಕ್ಷಿಣ ಕನ್ನಡ: ಇದುವರೆಗೆ ಸಮಸ್ಯೆ ತಲೆದೋರಿಲ್ಲ
ಮಂಗಳೂರು: ಜಿಲ್ಲೆಯಲ್ಲಿ ಹಿಂದಿನ ಮಳೆ ಪ್ರಮಾಣ ಆಧರಿಸಿ ಎರಡು ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದ್ದರೂ ಇದುವರೆಗೆ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಲ್ಲ. ಮಂಗಳೂರು ಹಾಗೂ ಮೂಡು ಬಿದಿರೆ ತಾಲೂಕುಗಳು ನವೆಂಬರ್‌ನಲ್ಲಿ ಬರಪೀಡಿತ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. ಆದರೆ ಹಿಂಗಾರು ಮಳೆ ಉತ್ತಮವಾಗಿ (ವಾಡಿಕೆಗಿಂತ ಶೇ. 5 ಹೆಚ್ಚಳ)ಬಿದ್ದ ಕಾರಣ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲವಾಗಿದೆ.

ಎಲ್ಲೆಲ್ಲಿ ಸಮಸ್ಯೆಯಾಗಬಹುದು ಎನ್ನುವುದನ್ನು ಆಯಾ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯಲ್ಲೇ ಪಟ್ಟಿ ಮಾಡಿಕೊಳ್ಳಲು ಸೂಚಿಸ ಲಾಗಿದೆ. ಸಾಮಾನ್ಯವಾಗಿ ಮಂಗಳೂರು, ಬಂಟ್ವಾಳ, ಸುಳ್ಯ ಭಾಗಗಳಲ್ಲಿ ಬೇಸಗೆಯಲ್ಲಿ ಕುಡಿಯವ ನೀರಿನ ಸಮಸ್ಯೆಯಾಗುವುದು ವಾಡಿಕೆ. ಕಳೆದ ವರ್ಷ ನೇತ್ರಾವತಿ ಪೂರ್ಣ ಬತ್ತಿ ಹೋಗಿ ಸಮಸ್ಯೆಯಾಗಿತ್ತು.

ಈ ಬಾರಿ ಎಲ್ಲ ಪೂರ್ವ ಸಿದ್ಧತೆಗಳನ್ನೂ ಮಾಡಿಕೊ ಳ್ಳಲಾಗಿದ್ದು, ನೀರು ಹಾಗೂ ಜಾನುವಾರುಗಳ ಮೇವಿನ ಒದಗಣೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.
ಕುಡಿಯುವ ನೀರಿನ ಕೊರತೆ ಬರಬಹುದಾದ ಕಡೆ ಹತ್ತಿರದಲ್ಲಿನ ಸಾಕಷ್ಟು ನೀರಿರುವ ಕೊಳವೆ ಬಾವಿಗಳನ್ನು ಗುರುತಿಸಿ ನಿಯಮಾನುಸಾರ ಬಳಕಗೆ ಕರಾರು ಒಪ್ಪಂದ ಮಾಡಿಕೊಳ್ಳಲು ಸೂಚಿಸ ಲಾಗಿದೆ. ಗುಡ್ಡಗಾಡು ಪ್ರದೇಶ, ಅಂತರ್ಜಲ ಮೂಲವಿಲ್ಲದ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳ ಬೇಕು. ಇದಕ್ಕಾಗಿಯೇ ಟ್ಯಾಂಕರ್‌ ಯುಟಿಲೈಸೇಶನ್‌ ಎನ್ನುವ ಆ್ಯಪ್‌ ಬಳಸಿ ದತ್ತಾಂಶ ಸಂಗ್ರಹಿಸಬೇಕು ಎಂಬ ಸೂಚನೆ ಬಂದಿದೆ. ಬಾಡಿಗೆ ಟ್ಯಾಂಕರ್‌ ಮೂಲಕ ತುರ್ತು ಕುಡಿಯುವ ನೀರನ್ನು ಒದಗಿಸುವ ಪ್ರಕ್ರಿ ಯೆಗೆ ಕೆಟಿಪಿಪಿ ಕಾಯ್ದೆ ಯಡಿ ಪಾರದರ್ಶಕ ಟೆಂಡರ್‌ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಬಂದಿದೆ.

ಇದುವರೆಗೆ ಜಿಲ್ಲೆಯಲ್ಲಿ ಕುಡಿ ಯುವ ನೀರಿನ ಸಮಸ್ಯೆಯಾಗಿಲ್ಲ. ಎಲ್ಲ ತಾಲೂಕುಗಳಲ್ಲೂ ಟಾಸ್ಕ್ಫೋರ್ಸ್‌ ಸಭೆ ನಡೆಸಿ ಸಮಸ್ಯೆಗಳಿದ್ದರೆ ತಿಳಿಸುವಂತೆ ಸೂಚಿಸಿದೆ. ಟ್ಯಾಂಕರ್‌ಗಳ ಜತೆ ಒಪ್ಪಂದ, ಖಾಸಗಿ ಬೋರ್‌ವೆಲ್‌ ಗುರುತಿಸುವ ಕೆಲಸ ಮಾಡಲಾಗಿದೆ.
-ಮುಲ್ಲೈ ಮುಗಿಲನ್‌,
ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next