ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು ಬಂಡೀಪುರ ಅಭಯಾರಣ್ಯಕ್ಕೆಹೊಂದಿಕೊಂಡಿದ್ದು, ಏಪ್ರಿಲ್-ಮೇನಲ್ಲಿ ಬೇಸಿಗೆಬಿಸಿ ಹೆಚ್ಚಿದೆ. ಕೆರೆಗಳಿಗೆ ನೀರು ಹರಿಸುವ ಯೋಜನೆಯಡಿ ಹಲವು ಕೆರೆಗಳು ತುಂಬಿರುವುದರಿಂದ ಜಲಮೂಲ ಹೆಚ್ಚಳವಾಗಿದೆ. ಹಂಗಳಹೋಬಳಿಯ ಹಲವು ಗ್ರಾಮಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಕಡೆ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಅಭಾವ ಉಂಟಾದರೆ ನೀರು ಪೂರೈಕೆಗೆ ತಾಲೂಕು ಆಡಳಿತದ ವತಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ.ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹಂಗಳಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳು ಒಳಪಡದಹಿನ್ನೆಲೆಯಲ್ಲಿ ಈ ಭಾಗದಲ್ಲಿನೀರಿನ ಸಮಸ್ಯೆ ಬಿಗಡಾಯಿಸಿದೆ.
ಇದನ್ನು ಅರಿತ ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜುಮಾಡುವಂತೆ ಗ್ರಾಪಂ ಪಿಡಿಒಗೆ ಸೂಚಿಸಿದೆ.ಬೇಗೂರು, ತೆರಕಣಾಂಬಿ ವ್ಯಾಪ್ತಿಯಬಹುತೇಕ ಕೆರೆಗಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಸೇರಿದೆ. ಕಳೆದ 2 ತಿಂಗಳಿನಿಂದ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಹಲವು ಕೆರೆಗಳು ಬೇಸಿಗೆಯಲ್ಲೂ ತುಂಬಿವೆ. ಇದರಿಂದ ಅಕ್ಕಪಕ್ಕದ ಪಂಪ್‌ಸೆಟ್ ಜಮೀನುಗಳಲ್ಲಿ ನೀರು ಹೆಚ್ಚಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಆದರೆ, ಹಂಗಳ ಹೋಬಳಿ ಮಾತ್ರ ಕೆರೆಗಳಿಗೆ ತುಂಬುವ ಯೋಜನೆಯಡಿ ಸೇರದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆ, ಪಂಪ್ ಸೆಟ್, ಕೈ ಬೋರ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಹಂಗಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, 8ರಿಂದ 10 ದಿನಗಳಿಗೊಮ್ಮೆನೀರು ಬಿಡಲಾಗುತ್ತಿದೆ. ಆ ನೀರನ್ನೇ ಶೇಖರಿಸಿವಾರಪೂರ್ತಿ ಕುಡಿಯುವ ಪರಿಸ್ಥಿತಿ ಇದೆ. ಈಬಗ್ಗೆ ಕ್ರಮ ವಹಿಸಿ 3 ದಿನಗಳಿಗೊಮ್ಮೆ ನೀರು ಬಿಡಲು ಕ್ರಮ ವಹಿಸಬೇಕು ಎಂದು ಹಂಗಳನಿವಾಸಿ ಸಿದ್ದು ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ಜಾನುವಾರುಗಳಿಗೆ ತೊಟ್ಟಿ ನಿರ್ಮಾ : ಬೇಸಿಗೆಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಿಸಿದ್ದು, ನಿತ್ಯ ನೀರುತುಂಬಿಸುವಂತೆ ವಾಟರ್ ಮ್ಯಾನ್‌ಗಳಿಗೆಸೂಚಿಸಲಾಗಿದೆ ಎಂದು ತಾಪಂ ಇಒ ಕಾಂತರಾಜೇ ಅರಸು ತಿಳಿಸಿದ್ದಾರೆ.
ಟ್ಯಾಂಕರ್ ನೀರು ಪೂರೈಸಲು ಕ್ರಮ: ಇಒ :
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವ ಕಡೆ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಿ ನೀರನ್ನು ಮಿತವಾಗಿಬಳಸುವಂತೆ ಸಾರ್ವಜನಿಕರಿಗೆ ಅರಿವುಮೂಡಿಬೇಕೆಂದು ತಿಳಿಸಲಾಗಿದೆ. ಸಮಸ್ಯೆ ಹೆಚ್ಚಿನರೀತಿಯಲ್ಲಿ ಬಿಗಡಾಯಿಸಿದರೆ ಟ್ಯಾಂಕರ್‌ಗಳ ಮೂಲಕನೀರು ಸರಬರಾಜು ಮಾಡಲಾಗುವುದು ಎಂದು ತಾಪಂ ಇಒ ಕಾಂತರಾಜೇ ಅರಸು ಹೇಳಿದ್ದಾರೆ.
ನೀರಿನ ಅಭಾವ ಎದುರಾದರೆ ರೀಬೋರ್: ತಹಶೀಲ್ದಾರ್ :
ತಾಲೂಕಿನಲ್ಲಿ ಏಪ್ರಿಲ್-ಮೇನಲ್ಲಿ ಬೇಸಿಗೆ ಹೆಚ್ಚಾಗಲಿದ್ದು, ಇದರಿಂದನೀರಿನ ಸಮಸ್ಯೆ ಸಹಜವಾಗಿಯೇ ತಲೆದೋರಲಿದೆ. ಈ ವೇಳೆಕುಡಿಯುವ ನೀರಿನ ಅಭಾವ ಇರುವ ಕಡೆ ಈಗಾಗಲೇಚಾಲ್ತಿಯಲ್ಲಿರುವ ಬೋರ್‌ಗಳನ್ನೇ ಇನ್ನೂ ಅಧಿಕ ಆಳಕ್ಕೆ ಕೊರೆಸಿನೀರು ಹೆಚ್ಚಿನ ರೀತಿಯಲ್ಲಿ ಬರುವಂತೆ ಕ್ರಮ ವಹಿಸಲಾಗಿದೆ. ಜೊತೆಗೆನೀರಿನ ಮಿತ ಬಳಕೆ ಮಾಡಿದರೆ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಮಾಡಬಹುದು ಎಂದು ತಹಶೀಲ್ದಾರ್ ರವಿಶಂಕರ್ ತಿಳಿಸಿದ್ದಾರೆ.
ಮೇವಿನ ಸಮಸ್ಯೆ ಇರುವ ರೈತರು ಪಶು ಸಂಗೋಪನಾ ಇಲಾಖೆ ಗಮನಕ್ಕೆತಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ತಿಳಿಸಿಮೇವು ಪೂರೈಸಲಾಗುವುದು. ಸಮಸ್ಯೆಹೆಚ್ಚಿನ ರೀತಿಯಲ್ಲಿ ಬಿಗಡಾಯಿಸಿದರೆ ಗೋ ಶಾಲೆ ತೆರೆಯಲು ಕ್ರಮ ವಹಿಸಲಾಗುವುದು.
●ಮಾದೇಶ್, ಪಶು ಸಂಗೋಪನೆ ಇಲಾಖೆ ಅಧಿಕಾರಿ
–ಬಸವರಾಜು ಎಸ್.ಹಂಗಳ