Advertisement
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ನರೇಂದ್ರಅವರ ಪ್ರಶ್ನೆಗೆಉತ್ತರಿಸಿದ ಸಚಿವಈಶ್ವರಪ್ಪ, ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 1ನೇ ಹಂತದ ಕಾಮಗಾರಿ ಆರಂಭವಾಗಿದ್ದು, 166 ಕೋಟಿವೆಚ್ಚದ ಕಾಮಗಾರಿಗೆಕರಾರು ಮಾಡಿಕೊಳ್ಳಲಾಗಿದೆ. ಈ ಪೈಕಿ ಇದೀಗ 51.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು 2ನೇ ಹಂತದ ಕುಡಿಯುವ ನೀರಿನ ಯೋಜನೆಯಕಾಮಗಾರಿಯೂ ಸಹ ಟೆಂಡರ್ ಹಂತದಲ್ಲಿದ್ದು ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರುನಿಯೋಜನೆಗೊಂಡ ಬಳಿಕ ಭೌತಿಕ ಪ್ರಗತಿಗನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಉತ್ತರಿಸಿದರು.
Related Articles
Advertisement
ಚಾಮರಾಜನಗರ ಜಿಲ್ಲೆಯಲ್ಲಿನ ಪಶು ಚಿಕಿತ್ಸಾಲಯ ಮತ್ತು ಸಿಬ್ಬಂದಿ ಕೊರೆತೆ ಬಗ್ಗೆ ಸದನದಲ್ಲಿ ಶಾಸಕ ನರೇಂದ್ರ ಅವರ ಪ್ರಶ್ನೆಗೆ ಪಶು ಸಂಗೋಪನೆ ಸಚಿವ ಪ್ರಭುಚವ್ಹಾಣ್ ಉತ್ತರಿಸಿದ್ದಾರೆ. ಜಿಲ್ಲೆಯಲ್ಲಿ 83 ಪಶು ವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ವಿವಿಧ ಹಂತಗಳ 179 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಕ್ರಮವಹಿಸಲಾಗಿದ್ದು ಆರ್ಥಿಕ ಇಲಾಖೆಯು ಸಹಮತಿ ನೀಡದ ಹಿನ್ನೆಲೆ ಹೊಸ ನೇಮಕಾತಿಗಳು ಸಾಧ್ಯವಾಗಿಲ್ಲ. ಕೆಲ ಹುದ್ದೆಗಳಿಗೆ ಮುಂಬಡ್ತಿ ಮುಖೇನ ಆದ್ಯತೆ ಮೇರೆಗೆ ಭರ್ತಿ ಮಾಡಲು ಕ್ರಮವಹಿಸಲಾಗಿದೆ.81ಡಿ ದರ್ಜೆಯ ಸಿಬ್ಬಂದಿ ಕೊರತೆಯಿದ್ದು41 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲಾಗಿದೆ ಎಂದು ಲಿಖೀತ ಉತ್ತರ ನೀಡಿದರು.