Advertisement

ಕಾಲುವೆಯಂತಾದ ಮೈಸೂರು –ಬೆಂಗಳೂರು ಹೆದ್ದಾರಿ

04:53 PM Aug 21, 2021 | Team Udayavani |

ಶ್ರೀರಂಗಪಟ್ಟಣ : ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ ಕುಡಿಯುವ ‌ ನೀರಿನ ಪೈಪ್‌ ಒಡೆದು ರಸ್ತೆ ಕಾಲುವೆಯಂತಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮ ಬಳಿ ನಡೆದಿದೆ.

Advertisement

ಬಾಬುರಾಯನಕೊಪ್ಪಲು ಗ್ರಾಮದ ಲೋಕ ಪಾವನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆದ್ದಾರಿ ಸೇತುವೆ ಬಳಿಯಲ್ಲಿನ ಮಂಡ್ಯಕ್ಕೆ ಕುಡಿಯುವ ‌ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಒಡೆದು ಸಾವಿರಾರು ಲೀಟರ್‌ ಕುಡಿಯುವ ಕಾವೇರಿ ನೀರು ಮೈಸೂರು- ಬೆಂಗಳೂರು ಹೆದ್ದಾರಿ ರಸ್ತೆಗೆ ಹರಿದಿದ್ದು, ಹೆದ್ದಾರಿ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತು ಹೆದ್ದಾರಿ ರಸ್ತೆ ಕಾಲಯವೆಯಂತಾಗಿತ್ತು. ಇದೇ ನೀರಿನ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಬೈಕ್‌ ಮತ್ತು ಸಣ್ಣಪುಟ್ಟ ವಾಹನಗಳ ಸವಾರರು ಪರದಾಟ ನಡೆಸುತ್ತಿರುವ ದೃಶ್ಯ ಕಂಡು ಬಂತು.

ಇದನ್ನೂ ಓದಿ:ಕಾಂಗ್ರೆಸ್ ಮುತ್ತಿಗೆ ಕರೆ: ಸಿ.ಟಿ.ರವಿ ಮನೆಗೆ ಬಿಜೆಪಿ ಕಾರ್ಯಕರ್ತರು, ಪೊಲೀಸರ ಸರ್ಪಗಾವಲು!

ರಸ್ತೆಗೆ ಪೈಪ್‌ ಲೈನ್‌ ನೀರು ಹರಿಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಕ್ರಮಕೈಗೊಳ್ಳಲಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಪೈಪ್‌ಲೈನ್‌ ದುರಸ್ತಿ ಮಾಡಿ ಸೇತುವೆ ಮೇಲಿನ ನೀರನ್ನು ಹೊರ ಹಾಕಿ ವಾಹನ ಸಂಚಾರನ್ನು ಸುಗಮಗೊಳಿಸಬೇಕು ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನಿಲ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next