Advertisement
ನಗರದಲ್ಲಿಯೂ ಅನೇಕ ಕಡೆಗಳಲ್ಲಿ ಕುಡಿಯುವ ನೀರು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಚರಂಡಿ ಪಾಲಾಗುತ್ತಿದೆ. ಅದಕ್ಕೆ ಉದಾಹರಣೆಯಂತೆ ಒಂದು ವರ್ಷಗಳಿಂದ ನಗರದ ಅನೇಕ ಕಡೆಗಳಲ್ಲಿ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವುದು ಗಮನಕ್ಕೂ ಬಂದರೂ ಸಂಬಂಧಪಟ್ಟವರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ.
ಮೂವತ್ತು ವರ್ಷಗಳ ಹಳೆಯ ಕಬ್ಬಿಣದ ಪೈಪ್ ಇದಾಗಿದ್ದು, ಸುಮಾರು 10 ಇಂಚು ಗಾತ್ರವಿದೆ. ಪೈಪ್ ಪೂರ್ತಿ ತುಕ್ಕು ಹಿಡಿದಿದ್ದು, ಇದೇ ಕಾರಣಕ್ಕೆ ಅಲ್ಲಲ್ಲಿ ತೂತು ಬೀಳುತ್ತಿದೆ. ಪೈಪ್‌ನಿಂದ ಪೋಲಾದ ನೀರು ಅಲ್ಲೇ ಪಕ್ಕದಲ್ಲಿರುವ ತೋಡಿನಲ್ಲಿ ಹರಿಯುವ ಕಾರಣ ಸುತ್ತಮುತ್ತಲಿನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Related Articles
ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದರೆ ಸಂಬಂಧಪಟ್ಟ ಇಲಾಖೆ ಅಸಮರ್ಪಕ ಕಾಮಗಾರಿ ನಡೆಸುತ್ತದೆ. ಪೈಪ್‌ಲೈನ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅರೆಬರೆ ಕಾಮಗಾರಿ ನಡೆಸುತ್ತಿದೆ. ಇದಾದ ಕೆಲವೇ ದಿನಗಳ ಬಳಿಕ ಪಕ್ಕದಲ್ಲಿಯೇ ಮತ್ತೂಂದು ತೂತಾಗಿ ನೀರು ಪೋಲಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು. ಸದ್ಯ ನೀರು ಪೋಲಾಗುತ್ತಿರುವ ಸ್ಥಳದ ಪಕ್ಕದಲ್ಲಿಯೇ ಪೈಪ್‌ಲೈನ್‌ನ ಧಾರಣಾ ಸಾಮರ್ಥ್ಯ ಕುಂಠಿತವಾದ ಕಾರಣದಿಂದ ಸೆ.10ರಂದು ಸಂಜೆ 4.15ರ ವೇಳೆಗೆ ಪೈಪ್‌ಲೈನ್ ಎರಡು ಭಾಗದಲ್ಲಿ ಒಡೆದು, ನೀರು ಹೊರಕ್ಕೆ ಚಿಮ್ಮಿದ ರಭಸಕ್ಕೆ ಕಾಂಕ್ರೀಟ್ ರಸ್ತೆಯ ಪಕ್ಕದ ಪಾದಾಚಾರಿ ಮಾರ್ಗಕ್ಕೆ ಹಾನಿಯಾಗಿತ್ತು. ಜತೆಗೆ ಹತ್ತಿರದಲ್ಲಿರುವ ಫ್ಲ್ಯಾಟ್‌ನ ಒಳಗೆ ನೀರು ನುಗ್ಗಿದ ಘಟನೆ ನಡೆದಿತ್ತು.
Advertisement
30 ವರ್ಷದ ಹಿಂದಿನ ಪೈಪ್ಲೈನ್ಸಾರ್ವಜನಿಕರು ಹೇಳುವ ಪ್ರಕಾರ ಇದು ಸುಮಾರು 30 ವರ್ಷಗಳ ಹಿಂದಿನ ಪೈಪ್ ಲೈನ್. ಈವರೆಗೆ ಯಾವುದೇ ಹೊಸ ಪೈಪ್ ಸಂಪರ್ಕವನ್ನು ಅಳವಡಿಸಲಿಲ್ಲ. ಇದೇ ಕಾರಣ ಪೈಪ್ ತುಕ್ಕು ಹಿಡಿದು ತೂತಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅನೇಕ ಕಡೆ ಇದೇ ಸಮಸ್ಯೆ
ಪಾಲಿಕೆಯು ಸಾರ್ವಜನಿಕರ ಉಪಯೋಗಕ್ಕೆ ಪೈಪ್ ಮೂಲಕ ನೀರು ಬಿಡುವ ಸಮಯದಲ್ಲಿ ವಿವಿಧೆಡೆ ಪೋಲಾಗುತ್ತಿದೆ. ಚಿಲಿಂಬಿ ಬಳಿ ಎರಡು ವಾರದಿಂದ ಮುಂಜಾನೆ ಹೊತ್ತು ಗೇಟ್‌ವಾಲ್ ಓಪನ್ ಮಾಡುವ ಸಮಯದಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದರೂ ಇಲ್ಲಿಯವರೆಗೂ ಅದನ್ನು ಸರಿಪಡಿಸಿಲ್ಲ. ಇಲ್ಲಿಯೂ ಬೆಳಗ್ಗಿನ ಜಾವ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಹರಿದು ಚರಂಡಿ ಸೇರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ‘ಸುದಿನ’ಕ್ಕೆ ತಿಳಿಸಿದ್ದಾರೆ. ತತ್‌ಕ್ಷಣ ಪರಿಹಾರ
ಲೋವರ್ ಬೆಂದೂರ್ ವೆಲ್ ಪ್ರದೇಶದಲ್ಲಿ ನೀರು ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತತ್‌ಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಲ್ಪಿಸುತ್ತೇವೆ.
– ಭಾಸ್ಕರ್ ಕೆ.,ಮೇಯರ್ ಹೊಸ ಪೈಪ್ ಅಳವಡಿಕೆ
ಮೂವತ್ತು ವರ್ಷಗಳ ಹಿಂದಿನ ಪೈಪ್ ಆದ್ದರಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಹೊಸ ಪೈಪ್ ಅಳವಡಿಸಲಾಗುವುದು.
– ನವೀನ್ ಡಿ’ಸೋಜಾ, ಸ್ಥಳೀಯ
ಕಾರ್ಪೋರೇಟರ್ ದಿನಕ್ಕೆ ಐದು ಟ್ಯಾಂಕರ್ ನೀರು ಪೋಲು
ಒಂದು ವರ್ಷಗಳಿಂದ ಈ ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ. ಪಾಲಿಕೆ ತಾತ್ಕಾಲಿಕ ಕಾಮಗಾರಿ ನಡೆಸಿದ ಒಂದು ವಾರದೊಳಗೆ ಪುನಃ ಈ ಸಮಸ್ಯೆ ಮರುಕಳಿಸುತ್ತದೆ. ದಿನಕ್ಕೆ ಸುಮಾರು 5-6 ಟ್ಯಾಂಕರ್ ನೀರು ಪೋಲಾಗುತ್ತಿದ್ದು, ಪಾಲಿಕೆ ಈ ಬಗ್ಗೆ ಗಮನಹರಿಸಬೇಕಿದೆ.
- ರಾಕೇಶ್ ಬೋಳಾರ್, ಸ್ಥಳೀಯ ನಿವಾಸಿ ನವೀನ್ ಭಟ್ ಇಳಂತಿಲ