Advertisement

ಬಿಸಿನೀರು ಕುಡಿಯಿರಿ !

08:15 AM Feb 09, 2018 | |

ಎಲ್ಲ ಕಾಲಗಳಲ್ಲೂ ನೀರನ್ನು ಕುದಿಸಿ ಕುಡಿಯುವುದರಿಂದ ಆರೋಗ್ಯಪೂರ್ಣವಾಗಿರಲು ಸುಲಭ ಸಾಧ್ಯ. ನಾವು ಶುದ್ಧ ನೀರಿನ ಸೇವನೆ ಅಧಿಕ ಮಹತ್ವ ನೀಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನ ಸೇವನೆ ತಾಜಾ ಮತ್ತು ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುತ್ತದೆ. ನಿತ್ಯವೂ ಬಿಸಿನೀರನ್ನು ಕುಡಿಯುವುದರಿಂದ ಪಡೆಯಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ.

Advertisement

ಕಟ್ಟಿದ ಮೂಗು, ಗಂಟಲು ನೋವಿಗೆ 
ಬೆಳಗ್ಗೆ ಬಿಸಿ ನೀರನ್ನು ಸೇವಿಸುವುದರಿಂದ ಮೂಗು ಮತ್ತು ಗಂಟಲಿಗೆ ಆರಾಮದಾಯಕ. ಬೀಸಿನೀರಿನ ಸೇವನೆಯಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್‌ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತವೆ.

ಜೀರ್ಣಕ್ರಿಯೆಗೆ
ಊಟದ ನಂತರ ತಂಪಾದ ನೀರನ್ನು ಕುಡಿಯುವುದಕ್ಕಿಂತ ಬೆಚ್ಚಗೆ ನೀರು  ಸೇವನೆ ಹೆಚ್ಚು ಪರಿಣಾಮಕಾರಿ. ಊಟದ ನಂತರ ಒಂದು ಗ್ಲಾಸ್‌ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಸೂಕ್ತ ರೀತಿಯಲ್ಲಿ ಆಗುವುದು. ಬಿಸಿ ನೀರು ಸೇವನೆ ಜೀರ್ಣಕಾರಿ ಗ್ರಂಥಿಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಪ್ರಚೋದಿಸುತ್ತದೆ. 

ಮಲಬದ್ದತೆ ನಿವಾರಣೆಗೆ
ಆಹಾರ ಪದಾರ್ಥಗಳು ನಮ್ಮ ಕರುಳಿನಲ್ಲಿ ಸಂಗ್ರಹವಾದಾಗ, ಕರುಳಿನ ಚಲನೆ ನಿಧಾನವಾಗಿ ತಿಂದ ಆಹಾರ ಜೀರ್ಣವಾಗದೆ ಮಲಬದ್ದತೆ ಉಂಟಾಗುತ್ತದೆ. ಬೀಸಿನೀರು ಸೇವನೆಯಿಂದ ಕರುಳಿನ ಚಲನೆಯನ್ನು ಮಾಡುವ ಮೂಲಕ ಕರುಳಿಗೆ ಮೃದುವಾಗಿ ತಿಂದ ಆಹಾರವು ಬಹುಬೇಗ ಕೊಳೆಯಲು ಸಹಾಯ ಮಾಡುತ್ತದೆ. ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ.  

ಆರೋಗ್ಯಕರ ಚರ್ಮಕ್ಕಾಗಿ
ಬೆಳಗ್ಗೆ ನಿಯಮಿತವಾಗಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೀಕರಿಸುತ್ತದೆ ಮತ್ತು ಬೆಚ್ಚಗಿರುತ್ತದೆ. ಇದು ಶುಷ್ಕ ಮತ್ತು ಹೊಳಪಿನ ಚರ್ಮವನ್ನು ಪಡೆಯಲು ಅನುವುಮಾಡಿಕೊಡುವುದು. ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳನ್ನು ದೂರಮಾಡುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ. 

Advertisement

ತೂಕ ಕಡಿಮೆಮಾಡಲು
ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವುದಾದರೆ ಪ್ರತಿದಿನ ಬೆಳಗ್ಗೆ ಬಿಸಿ ನೀರನ್ನು ಕುಡಿಯಬೇಕು. ಬಿಸಿನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಉತ್ತೇಜಿಸುವುದರಿಂದ ತೂಕ ®ಇಇ‌ಷ್ಟಕ್ಕೆ ಅತ್ಯುತ್ತಮ ಪರಿಹಾರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next