Advertisement
ಸರ್ವೀಸ್ ಸೆಕ್ಟರ್‌ನಲ್ಲಿ ವಿಶ್ವವೇ ತಲೆಯೆತ್ತಿ ನೋಡುವಂತಹ ಸಾಧನೆ ಮಾಡಿದ ನಂತರ, ಸಾಫ್ಟ್ವೇರ್ ಲೋಕ ಆಕರ್ಷಣೆ ಕಳೆದು ಕೊಂಡು ಪೇಲವವಾಗುತ್ತಿದ್ದಂತೆಯೇ ಹಾರ್ಡ್‌ವೇರ್‌ನಲ್ಲಿ ಭಾರತ ಹಿಂದಿದೆ ಎಂಬ ಧ್ವನಿ ಕೇಳಲು ಶುರುವಾಗಿತ್ತು. ಆಗ ಸರಕಾರ ವೇನೋ ಎಚ್ಚೆತ್ತುಕೊಂಡು ಒಂದಷ್ಟು ನೀತಿ ನಿಯಮ ಗಳನ್ನು ತಿದ್ದುಪಡಿ ಮಾಡಿತು. ಕೆಲವು ಕ್ಷೇತ್ರಗಳಲ್ಲಿ ಇದು ವಕೌìಟ್ ಆಗಿದ್ದಂತೂ ನಿಜ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಒಂದು ಹಂತಕ್ಕೆ ಒಳ್ಳೆಯ ಬೇಡಿಕೆ ಬಂತು. ಸ್ಟೀಲ್ ಉದ್ಯಮ ಚೇತರಿಸಿಕೊಂಡಿತು. ಆದರೆ ಸ್ಮಾರ್ಟ್‌ಫೋನ್ ತಯಾರಿಕೆ ಉದ್ಯಮ ಸಮಯಕ್ಕೆ ಸರಿ ಯಾಗಿ ಭಾರತದಲ್ಲಿ ಬೇರೂರದ್ದರಿಂದ ಸಂಪೂರ್ಣ ವಿದೇಶದ ಮೇಲೆಯೇ ಅವಲಂಬಿಸುವಂತಾಯಿತು. ಈಗ ನಾವು ಹೇಗೆ ತೈಲದ ಬಹುತೇಕ ಬೇಡಿಕೆಯನ್ನು ವಿದೇಶದಿಂದ ತರುತ್ತೇವೆಯೋ ಹಾಗೆಯೇ ವಿಶ್ವದಲ್ಲೇ ಅತಿಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ದೇಶವಾಗಿರುವ ನಾವು ಬಹುತೇಕ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಬಿಡಿಭಾಗಗಳನ್ನು ವಿದೇಶದಿಂದ ತರುತ್ತೇವೆ.
Related Articles
Advertisement
ಯಾವಾಗ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ ಎಂದು ಚೀನಾ ಕಂಪನಿಗಳಿಗೆ ಅರಿವಾ ಯಿತೋ ಅವು ಹೊಸ ವಸಾಹತುಗಳನ್ನು ಹುಡುಕತೊಡಗಿದವು. ಅಂದರೆ ತಮ್ಮ ಆದಾಯವನ್ನು ಸ್ಥಿರವಾಗಿಟ್ಟುಕೊಳ್ಳಲು ಬೇರೆ ದೇಶಗಳಿಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡುವುದು ಅವರ ಅಗತ್ಯವಾಗಿತ್ತು. ಅದಕ್ಕೆ ಮೊದಲು ಅವರ ಕಣ್ಣು ಹೋಗಿದ್ದೇ ಭಾರತದ ಮೇಲೆ. ಶಿಯೋಮಿ, ಒಪ್ಪೊ, ವಿವೋ ಕಂಪನಿಗಳೆಲ್ಲ ಹಿಂದೆ ಇದೇ ಸ್ಯಾಮ್‌ಸಂಗ್ ನೋಕಿಯಾಗೆ ಬಿಡಿಭಾಗಗಳನ್ನು ತಯಾರಿಸಿಕೊಡುತ್ತಿದ್ದವು. ಅಷ್ಟೇ ಅಲ್ಲ, ಭಾರತೀಯ ಕಂಪನಿಗಳೂ ಇದೇ ಕಂಪನಿಗಳಿಂದ ಬಿಡಿಭಾಗಗಳನ್ನು ತರುತ್ತಿದ್ದವು. ಮೈಕ್ರೋ ಮ್ಯಾಕ್ಸ್‌ನಂಥ ಕಂಪನಿಗೆ ಬಿಡಿಭಾಗವನ್ನು ಮಾರಿದ್ದರಿಂದ ಭಾರತದ ಗ್ರಾಹಕರ ಬೇಡಿಕೆ ಏನು ಹಾಗೂ ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಇವರಿಗೆ ತಿಳಿದಿತ್ತು. ಹೀಗಾಗಿ ಮಾರುಕಟ್ಟೆಗೆ ಬರಲು ಹೆಚ್ಚೇನೂ ಕಾಲಾವಕಾಶ ಬೇಕಿರಲಿಲ್ಲ. ನೇರವಾಗಿ ಭಾರತದ ಮಾರುಕಟ್ಟೆಗೆ ಇಳಿದಿದ್ದೇ, ಮೈಕ್ರೋಮ್ಯಾಕ್ಸ್ ಹಾಗೂ ಇತರ ಭಾರತೀಯ ಕಂಪನಿಗಳಿಗೆ ಹೊಡೆತ ಬಿತ್ತು.
ಭಾರತೀಯ ಕಂಪನಿಗಳು ಸ್ಮಾರ್ಟ್‌ಫೋನ್‌ನಲ್ಲಿನ ಆಧುನಿಕ ತಂತ್ರಜ್ಞಾನಗಳನ್ನು ಕಂಡುಕೊಳ್ಳಲು ಸಂಶೋಧನೆಗೆ ಕೈಹಾಕಲೇ ಇಲ್ಲ. ಸದ್ಯ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಅಷ್ಟೂ ಪೇಟೆಂಟ್ ತೈವಾನ್, ಚೀನಾ ಹಾಗೂ ಯುರೋಪ್ ದೇಶಗಳಲ್ಲಿವೆ. ಸ್ಮಾರ್ಟ್ ಫೋನ್‌ನ ಹೃದಯ ಎಂದೇ ಹೇಳಲಾಗುವ ಚಿಪ್ ಕ್ವಾಲ್ ಕಾಮ್ ಪಾಲಾಗಿದೆ.
ಕ್ವಾಲ್‌ಕಾಮ್‌ನಿಂದಲೇ ಚಿಪ್‌ಗ್ಳನ್ನು ಖರೀದಿ ಸಬೇಕೆ ಹೊರತು ಅವರಿಂದ ಚಿಪ್ ತಯಾರಿಕೆಯ ತಂತ್ರಜ್ಞಾನ ಪಡೆಯ ಲಾಗದು. ಹೀಗಾಗಿ ಭಾರತದ ಒಂದು ಕಂಪನಿ ಈಗ ಭಾರತದಲ್ಲೇ ಸ್ಮಾರ್ಟ್‌ಫೋನ್‌ಅನ್ನು ಸಂಪೂರ್ಣವಾಗಿ ಉತ್ಪಾದಿ ಸುತ್ತೇನೆ ಎಂದು ಹೊರಟರೆ ಅದು ಅಸಾಧ್ಯದ ಮಾತೇ ಸರಿ. ಸ್ಮಾರ್ಟ್ ಫೋನ್‌ಗೆ ಬೇಕಿರುವ ಅತ್ಯಂತ ಉನ್ನತ ಗುಣಮಟ್ಟದ ಪ್ಲಾಸ್ಟಿಕ್ ಇಲ್ಲಿ ಲಭ್ಯವಿಲ್ಲ. ಡಿಸ್‌ಪ್ಲೇ ಟೆಕ್ನಾಲಜಿಯೂ ಭಾರತದಲ್ಲಿಲ್ಲ. ಹೀಗಾಗಿ ಎಲ್ಲ ತಂತ್ರ ಜ್ಞಾನಗಳ ಪೇಟೆಂಟ್ ತೆಗೆದುಕೊಂಡು ಬಂದು ಭಾರತದಲ್ಲಿ ಉತ್ಪಾದಿಸಲು ಹೊರಟರೆ ಸಾಮಾನ್ಯ ಸ್ಮಾರ್ಟ್‌ಫೋನಿಗೆ ಐಫೋನ್ ಬೆಲೆ ಇಟ್ಟರೂ ಕಂಪನಿ ನಷ್ಟಕ್ಕೊಳಗಾದೀತು.
ಒಂದು ವೇಳೆ ಸ್ಮಾರ್ಟ್‌ಫೋನ್ ಉತ್ಪಾದನೆಯ ಒಂದಷ್ಟಾದರೂ ತಂತ್ರಜ್ಞಾನ ಭಾರದಲ್ಲಿದ್ದಿದ್ದರೆ, ಅದು ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಕೊಡುತ್ತಿತ್ತು. ಕೋಟ್ಯಂತರ ವಿದೇಶಿ ವಿನಿಮಯವನ್ನೂ ಉಳಿಸುತ್ತಿತ್ತು. ಆದರೆ ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ ಎಂಬ ರೈಲು ತನ್ನ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗಿಯಾಗಿದೆ. ಹೀಗಾಗಿ ಸದ್ಯಕ್ಕಂತೂ ಪರಿಶುದ್ಧವಾದ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ನ ನನಸಾಗದ ಕನಸು ಕಾಣಬೇಕಷ್ಟೇ.
ದೀರ್ಘ ಬಾಳಿಕೆ ಬ್ಯಾಟರಿಯ ತೈವಾನ್‌ನ ಆಸಸ್ ಮ್ಯಾಕ್ಸ್ ಪ್ರೊ ಹಲವು ವರ್ಷಗಳ ಹಿಂದೆಯೇ ಭಾರತಕ್ಕೆ ಕಾಲಿಟ್ಟ ತೈವಾನ್ ಮೂಲದ ಆಸಸ್ ಇನ್ನೂ ಗಮನ ಸೆಳೆಯುವ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಶಕ್ತವಾಗಿಲ್ಲ. ಆದರೂ ಆಗಾಗ್ಗೆ ಹೊಸ ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೇ 5 ಸಾವಿರ ಎಂಎಎಚ್ ಬ್ಯಾಟರಿ ಹೊತ್ತು ಸದ್ದು ಮಾಡುತ್ತಲೇ ಆನ್‌ಲೈನ್ ಮಾರುಕಟ್ಟೆಗೆ ಬಂದ ಆಸಸ್ ಮ್ಯಾಕ್ಸ್ ಪ್ರೊ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ಕೊಡುತ್ತದೆ ಎಂದು ಊಹಿಸಲಾಗಿತ್ತು. ಆದರೆ ಹಾಗೇನೂ ಚಮತ್ಕಾರ ಮಾರುಕಟ್ಟೆಯಲ್ಲಿ ಆದಂತಿಲ್ಲ. ಒಟ್ಟು ಫೀಚರ್ ನೋಡಿದರೆ ಸ್ಮಾರ್ಟ್ ಫೋನ್ ಚೆನ್ನಾಗಿಯೇ ಇದೆ. ಆದರೆ ಕೊರತೆ ಇರುವುದು ಬ್ರಾಂಡ್‌ನ ವಿಶ್ವಾಸಾರ್ಹತೆಯಲ್ಲಿ. ಸ್ಮಾರ್ಟ್‌ಫೋನ್ ಕಾಲದ ಆರಂಭದ ದಿನಗಳಲ್ಲಿ ಕೆಲವು ಮಾಡೆಲ್‌ಗಳ ಪರ್ಫಾರ್ಮೆನ್ಸ್ ಕ್ಷೀಣವಾಗಿದ್ದರಿಂದ ಬ್ರಾಂಡ್ ಬಗ್ಗೆ ಜನ ಅಷ್ಟೇನೂ ವಿಶ್ವಾಸಾರ್ಹತೆ ತೋರಿಸುತ್ತಿಲ್ಲ.
ಮ್ಯಾಕ್ಸ್ ಪ್ರೊ ಎಂ1 ಹೆಸರಿನ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೊರೇಜ್ ವರ್ಷನ್‌ಗೆ 10,999 ರೂ. ಇದ್ದರೆ 4ಜಿಬಿ ರ್ಯಾಮ್ ಹಾಗೂ 64 ಜಿಬಿ ಆವೃತ್ತಿಗೆ 12,999 ರೂ. ಇದೆ. ಶಿಯೋಮಿ ಕಂಪನಿಯ ರೆಡ್ಮಿ ನೋಟ್ 5 ಹಾಗೂ ನೋಟ್ 5 ಪ್ರೊಗೆ ಇದು ನೇರ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತದೆ. ನೋಡುವುದಕ್ಕೇನೋ ಸ್ಮಾರ್ಟ್‌ಫೋನ್ ಚೆನ್ನಾಗಿದೆ. ಹೊಸ ಜನಾಂಗ ಬಯಸುವ 18:9 ರೇಶಿಯೋ ಸ್ಕ್ರೀನ್ ಇದೆ. ಸಾಕಷ್ಟು ಅಗಲವಾಗಿದ್ದರೂ ಒಂದೇ ಕೈಯಲ್ಲಿ ಆಪರೇಟ್ ಮಾಡುವುದಕ್ಕೇನೂ ಕಷ್ಟವಿಲ್ಲ. 5.99 ಇಂಚು ಎಫ್ಎಚ್‌ಡಿ ಫುಲ್ ವ್ಯೂ ಡಿಸ್‌ಪ್ಲೇ ಇದೆ.
ಕಾರ್ನರ್‌ಗಳು ರೌಂಡ್ ಆಗಿವೆ. ಹೀಗಾಗಿ ಬಿದ್ದಾಗ, ಉಜ್ಜಿದಾಗ ಅಂಚು ಬೇಗ ಅಂದಕೆಡುವುದಿಲ್ಲ. ಸಾಮಾನ್ಯ ಫೋನ್‌ನ ಹಾಗೆಯೇ ಬದಿಯಲ್ಲಿ ಪವರ್ ಮತ್ತು ವಾಲ್ಯೂಮ್ ಕೀಗಳಿವೆ. ಕೈಗಳಿಗೆ ಸುಲಭವಾಗಿ ಸಿಗುತ್ತವೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ ಮಧ್ಯದಲ್ಲಿದೆ. ಇದರ ಕೆಳಗೆ ಆಸಸ್ ಲೋಗೋ ಇದೆ. ಕ್ಯಾಮೆರಾ ಹಾಗೂ ಫ್ಲಾಶ್ ಒಂದು ಮೂಲೆಯಲ್ಲಿರುವುದರಿಂದ ಹಿಂಭಾಗದಲ್ಲಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಒಂಟಿಯಾದಂತೆ ಅನಿಸುತ್ತದೆ. ಜೊತೆಗೆ, ಒಟ್ಟಾರೆ ಸ್ಮಾರ್ಟ್‌ಫೋನ್‌ನ ಹಿಂಭಾಗ ಅದೇಕೋ ಅಲೈನ್x ಆದಂತೆ ಕಾಣಿಸುವುದಿಲ್ಲ. ಆದರೆ ಇದರ ಒಂದು ಅನುಕೂಲವೆಂದರೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೇಲೆ ಬೆರಳಿಡುವಾಗ ತಪ್ಪಾಗಿ ಫ್ಲಾಶ್ ಮೇಲೆ ಬೆರಳಿಡುವ ಪ್ರಮೇಯ ಇರುವುದಿಲ್ಲ. ಡಿಸ್‌ಪ್ಲೇ ಆಕರ್ಷಕವಾಗಿದೆ. ಕಡಿಮೆ ಸೂರ್ಯನ ಬೆಳಕಿದ್ದರೂ ಸ್ಕ್ರೀನ್ ಸಾಕಷ್ಟು ಪ್ರಖರವಾಗಿಯೇ ಇರುತ್ತದೆ. ವ್ಯೂವಿಂಗ್ ಆಂಗಲ್ ಕೂಡ ಚೆನ್ನಾಗಿಯೇ ಇದೆ. ಅಂದರೆ ಸ್ಮಾರ್ಟ್‌ಫೋನನ್ನು ಯಾವ ಕೋನದಿಂದ ನೋಡಿದರೂ ಪೇಲವವಾಗುವುದಿಲ್ಲ. ನೈಟ್ ಮೋಡ್ ಇರುವುದು ವಿಶೇಷ. ಜೊತೆಗೆ ಸೆಟ್ಟಿಂಗ್‌ನಲ್ಲಿ ಕಲರ್ ಟೆಂಪರೇಚರನ್ನೂ ಹೊಂದಿಸಿಕೊಳ್ಳಬಹುದು. ಇದೇ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸ್ನ್ಯಾಪ್‌ಡ್ರ್ಯಾಗನ್ 636
ಚಿಪ್‌ಸೆಟ್ ಇದರಲ್ಲೂ ಇದೆ. ಅಚ್ಚರಿಯ ಸಂಗತಿಯೆಂದರೆ ಆಸಸ್‌ನ ಯೂಸರ್ ಇಂಟರ್‌ಫೇಸ್ ಕೈಬಿಟ್ಟು, ಆಂಡ್ರಾಯ್ಡ ಸ್ಟಾಕ್ ಇಂಟರ್‌ಫೇಸನ್ನೇ ಇದರಲ್ಲಿ ಬಳಸಲಾಗಿದೆ. ಹೀಗಾಗಿ ಅಪ್ಲಿಕೇಶನ್‌ಗಳ ಬಳಕೆ ಹಿತಕರವಾಗಿದೆ. ಹಿಂಭಾಗದಲ್ಲಿ 13 ಎಂಪಿ ಹಾಗೂ 5 ಎಂಪಿ ಕ್ಯಾಮೆರಾಗಳಿವೆ. ಫೋಟೋಗಳು ಅಷ್ಟೇನೂ ಆಕರ್ಷಕವಲ್ಲದಿದ್ದರೂ, ಈ ಶ್ರೇಣಿಯ ಮೊಬೈಲ್‌ಗಳಲ್ಲಿ ಸಾಮಾನ್ಯ ಮಟ್ಟದ್ದಾಗಿವೆ. ಮುಂಭಾಗದಲ್ಲಿ 8ಎಂಪಿ ಕ್ಯಾಮೆರಾ ಇದೆ. ಈ ಮಾಡೆಲ್‌ನ ಆಕರ್ಷಣೆಯ ಅಂಶವೇ 5 ಸಾವಿರ ಎಂಎಎಚ್ ಬ್ಯಾಟರಿ. ಬ್ಯಾಟರಿ ಬಾಳಿಕೆಯೇನೋ ಚೆನ್ನಾಗಿಯೇ ಇದೆ. ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳವರೆಗೆ ಬಂದೀತು. ಆದರೆ ಇಷ್ಟು ಭಾರಿ ಸಾಮರ್ಥ್ಯದ ಬ್ಯಾಟರಿಯ ಜೊತೆಗೆ ಕ್ವಿಕ್ ಚಾರ್ಜರ್ ಇಲ್ಲದ್ದೇ ಕೊರತೆ. ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ಎರಡು ತಾಸಾದರೂ ಬೇಕು. ಬ್ಯಾಟರಿ ಬಾಳಿಕೆ ನಿರೀಕ್ಷಿಸುತ್ತಿದ್ದರೆ ಈ ಸ್ಮಾರ್ಟ್‌ಫೋನ್ ಉತ್ತಮ. – ಕೃಷ್ಣ ಭಟ್