Advertisement

UP ಮತ್ತೊಂದು ಎನ್‌ಕೌಂಟರ್‌; ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ

04:41 PM May 04, 2023 | Team Udayavani |

ಮೀರತ್ : ಉತ್ತರಪ್ರದೇಶದಲ್ಲಿ ಗುರುವಾರ ಮತ್ತೊಂದು ಎನ್‌ಕೌಂಟರ್‌ ನಡೆಸಲಾಗಿದ್ದು, ಯುಪಿ ಎಸ್‌ಟಿಎಫ್‌ನೊಂದಿಗಿನ ಎನ್‌ಕೌಂಟರ್‌ನಲ್ಲಿ ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

Advertisement

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೀರತ್‌ನ ಭೋಲಾ ಝಲ್‌ನಲ್ಲಿ ಸಕ್ರಿಯವಾಗಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದ ನಂತರ ಎಸ್‌ಟಿಎಫ್ ಅನಿಲ್ ದುಜಾನಾನನ್ನು ಸುತ್ತುವರೆದಿದೆ. ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಎನ್‌ಕೌಂಟರ್‌ ಮಾಡಲಾಗಿದೆ.

ಪಶ್ಚಿಮ ಯುಪಿಯ ಕುಖ್ಯಾತ ಕ್ರಿಮಿನಲ್ ಅನಿಲ್ ದುಜಾನಾನನ್ನು 2021 ರಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಬಂಧಿಸಿತ್ತು. ದುಜಾನಾ ವಿರುದ್ಧ 18 ಕೊಲೆಗಳು, ಸುಲಿಗೆ, ಲೂಟಿ, ಭೂಕಬಳಿಕೆ ಮತ್ತು ಇತರವು ಸೇರಿದಂತೆ 62 ಪ್ರಕರಣಗಳು ದಾಖಲಾಗಿವೆ. 2012 ರಿಂದ ಜೈಲಿನಲ್ಲಿದ್ದ, ಆದರೆ 2021 ರಲ್ಲಿ ಜಾಮೀನು ಪಡೆದಿದ್ದ. ನಂತರ, ಹಳೆಯ ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು.

2012 ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ, ಅನಿಲ್ ದುಜಾನಾ ಜೈಲಿನಿಂದ ಇತರ ಅಪರಾಧಿಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಸಾನಾ ಅವರ ಸಹಾಯದಿಂದ ತನ್ನ ಅಪರಾಧ ಸಾಮ್ರಾಜ್ಯವನ್ನು ನಿರ್ವಹಿಸಲು ಪ್ರಾರಂಭಿಸಿದ್ದ. ದುಜಾನಾ ಜೈಲಿನಲ್ಲಿ ಕುಳಿತು ಕೊಲೆ, ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ತನ್ನ ಸಹಾಯಕರನ್ನು ಯೋಜಿಸಿ ನಿರ್ದೇಶಿಸುತ್ತಿದ್ದ.

ದುಜಾನಾ ಕುಟುಂಬ ಸುಂದರ್ ಭಾಟಿ ಗ್ಯಾಂಗ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿತ್ತು. 2012 ರಲ್ಲಿ, ದುಜಾನಾ ಮತ್ತು ಅವನ ಗ್ಯಾಂಗ್ ಸುಂದರ್ ಭಾಟಿ ಮತ್ತು ಅವನ ನಿಕಟ ಸಹಚರರ ಮೇಲೆ AK-47 ರೈಫಲ್‌ನಿಂದ ದಾಳಿ ಮಾಡಿತ್ತು. ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳು ಸರ್ಕಾರಿ ಗುತ್ತಿಗೆಗಳು, ಸ್ಟೀಲ್ ಬಾರ್‌ಗಳ ಕಳ್ಳತನ ಮತ್ತು ಟೋಲ್ ಪ್ಲಾಜಾ ಒಪ್ಪಂದಗಳ ಮೇಲೆ ಆಗಾಗ್ಗೆ ಮುಖಾಮುಖಿಯಾಗುತ್ತಿದ್ದವು. ಭಾಟಿ ಗ್ಯಾಂಗ್‌ನಿಂದ ಬೆದರಿಕೆಯಿಂದಾಗಿ, ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್‌ನಲ್ಲಿ ದುನಾನಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next