Advertisement

“ಅಭ್ಯಾಸ್‌’ಪ್ರಯೋಗಾರ್ಥ ಉಡಾವಣೆ ಯಶಸ್ವಿ

07:53 PM Oct 22, 2021 | Team Udayavani |

ಬಾಲಸೋರ್‌: ಸ್ವದೇಶಿ ನಿರ್ಮಿತ ಹೈಸ್ಪೀಡ್‌ ಎಕ್ಸ್‌ಪೆಂಡೇಬಲ್‌ ಏರಿಯಲ್‌ ಟಾರ್ಗೆಟ್‌(ಹೀಟ್‌) “ಅಭ್ಯಾಸ್‌’ನ ಪ್ರಯೋಗವು ಒಡಿಶಾ ಕರಾವಳಿಯಾಚೆಗಿನ ಚಂದೀಪುರದಲ್ಲಿ ಶುಕ್ರವಾರ ಯಶಸ್ವಿಯಾಗಿ ನೆರವೇರಿದೆ.

Advertisement

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ದಿಂದ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ಬಳಸುವ ವೈಮಾನಿಕ ಟಾರ್ಗೆಟ್‌ ಆಗಿ “ಅಭ್ಯಾಸ್‌’ ಅನ್ನು ಬಳಸಲಾಗುತ್ತದೆ.

ಈ ಟಾರ್ಗೆಟ್‌ ವಿಮಾನದ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ ಹಾಗೂ ರೇಡಾರ್‌, ಎಲೆಕ್ಟ್ರೋ ಆಪ್ಟಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಯಂಥ ವಿವಿಧ ಸೆನ್ಸರ್‌ಗಳ ಮೂಲಕ ಟ್ರ್ಯಾಕ್‌ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿರುವ ಡಿಆರ್‌ಡಿಒದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌(ಎಡಿಇ) ಈ ಅಭ್ಯಾಸ್‌ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next