Advertisement

DRDO;ಖಾಸಗಿ ಕ್ಷೇತ್ರಕ್ಕೆ 7 ಹೊಸ ರಕ್ಷಣ ಪ್ರಾಜೆಕ್ಟ್ ಹಂಚಿಕೆ

01:25 AM Jul 12, 2024 | Team Udayavani |

ಹೊಸದಿಲ್ಲಿ: ರಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಿಸುವ ನಿಟ್ಟಿನಲ್ಲಿ 7 ಹೊಸ ಯೋಜನೆಗಳಿಗೆ ಡಿಆರ್‌ಡಿಒ ಅನುಮೋದನೆ ನೀಡಿದೆ. ಈ ಪೈಕಿ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಬಹೂಪಯೋಗಿ ವಿಶೇಷ ಡ್ರೋನ್‌ಗಳ ಅಭಿವೃದ್ಧಿಯೂ ಸೇರಿದೆ. ರಹಸ್ಯವಾಗಿ ಮಾಹಿತಿ ಸಂಗ್ರಹಣೆ, ಶತ್ರು ರಾಷ್ಟ್ರಗಳ ಮೇಲೆ ನಿಗಾ ವಹಿಸಲು ಇದು ಸಹಕಾರಿಯಾಗಲಿದೆ.

Advertisement

ಪುಣೆಯಲ್ಲಿರುವ ಸಾಗರ್‌ ಡಿಫೆನ್ಸ್‌ ಎಂಜಿನಿಯರಿಂಗ್‌ ಪ್ರೈ.ಲಿಮಿಟೆಡ್‌ಗೆ ಈ ವಿಶೇಷ ಡ್ರೋನ್‌ ಸಿದ್ಧಪಡಿಸುವ ಹೊಣೆ ವಹಿಸಲಾಗಿದೆ. ರೇಡಾರ್‌ ಸಿಗ್ನಲ್‌ ಪ್ರೊಸೆಸರ್‌, ವಿಮಾನ ಗಳಿಗೆ ಸಂಬಂಧಿಸಿದಂತೆ ಇರುವ ಐಸ್‌ ಡಿಟೆಕ್ಷನ್‌ ಸೆನ್ಸರ್‌, ದೂರದಿಂದಲೇ ಅಪಾಯಕಾರಿ ವಸ್ತುಗಳನ್ನು ಗುರುತಿಸಿ ನಾಶ ಮಾಡುವ ವ್ಯವಸ್ಥೆಗಳನ್ನು ಕೊಚ್ಚಿ ಯಲ್ಲಿರುವ ಐಆರ್‌ಒವಿ ಟೆಕ್ನಾಲಜೀಸ್‌ ಪ್ರೈ.ಲಿ ಎಂಬ ಸ್ಟಾರ್ಟ್‌ಅಪ್‌ ಸಂಸ್ಥೆ ನಿರ್ಮಿಸಿಕೊಡಲಿದೆ.

ಇದಲ್ಲದೆ ರೇಡಾರ್‌ ಸಿಗ್ನಲ್‌ ಪ್ರೊಸೆ ಸರ್‌, ದೇಶದ ವಿವಿಧ ಪ್ರಾದೇಶಿಕ ವ್ಯವಸ್ಥೆ ಗಳಿಗೆ ಅನುಗುಣವಾಗಿ ನ್ಯಾವಿಗೇಶನ್‌ ವ್ಯವಸ್ಥೆ ಅಭಿವೃದ್ಧಿಪಡಿಸುವ ಜವಾಬ್ದಾರಿನೋಯ್ಡಾದಲ್ಲಿರುವ ಆಕ್ಸಿಜನ್‌ 2 ಇನ್ನೊ ವೇಷನ್‌ ಪ್ರೈ, ಸಂಸ್ಥೆಗೆ ವಹಿಸಲಾಗಿದೆ. ರಕ್ಷಣ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿ ಸಲು ಈ ಅನುಮೋದನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next