Advertisement

World Cup ಅಂತೂ ದ್ರಾವಿಡ್‌ಗೆ ಸಿಕ್ತು: ಆಟಗಾರನಾಗಿ, ನಾಯಕನಾಗಿ ವಿಫ‌ಲ, ಕೋಚ್‌ ಆಗಿ ವಿಜಯ

12:46 AM Jun 30, 2024 | Team Udayavani |

“ದ ವಾಲ್‌’ ಎಂದೇ ಖ್ಯಾತರಾದ ರಾಹುಲ್‌ ದ್ರಾವಿಡ್‌ ಅಂತೂ ವಿಶ್ವಕಪ್‌ಗೆ ಮುತ್ತಿಕ್ಕಿದ್ದಾರೆ. ಆಟಗಾರನಾಗಿ, ನಾಯಕನಾಗಿ ಗೆಲ್ಲಲಾಗದ ಟ್ರೋಫಿ ಯನ್ನು ದ್ರಾವಿಡ್‌ ಭಾರತ ತಂಡದ ತರಬೇತುದಾರಾಗಿ ಗೆದ್ದಿದ್ದಾರೆ.

Advertisement

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಭಾರತ 2007ರಲ್ಲಿ ಟಿ20 ವಿಶ್ವಕಪ್‌ ಗೆದ್ದಾಗ, ದ್ರಾವಿಡ್‌ ಟಿ20 ತಂಡದಲ್ಲಿರಲಿಲ್ಲ. 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಾಗಲೂ ರಾಹುಲ್‌ ಕೇವಲ ಟೆಸ್ಟ್‌ ಮಾತ್ರ ಆಡುತ್ತಿದ್ದರು. ಅಲ್ಲದೇ ವೆಸ್ಟ್‌ ಇಂಡೀಸ್‌ನಲ್ಲಿ 2007ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರಾಹುಲ್‌ ದ್ರಾವಿಡ್‌ ನಾಯಕರಾಗಿದ್ದರು, ಆದರೆ ಭಾರತ ತಂಡ ಹೀನಾಯವಾಗಿ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿತ್ತು.

ದ್ರಾವಿಡ್‌ ಭಾರತ ತಂಡದ ಕೋಚ್‌ ಆದ ಬಳಿಕ ಭಾರತ ಏಕದಿನ ವಿಶ್ವಕಪ್‌ ಹಾಗೂ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ತಲುಪಿದ್ದರೂ ಕಪ್‌ ಗೆಲ್ಲಲಾಗಿರಲಿಲ್ಲ. ನಾಯಕನಾಗಿ ವೆಸ್ಟ್‌ ಇಂಡೀಸ್‌ನಲ್ಲಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ದ್ರಾವಿಡ್‌ ಈಗ ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ. ಇದು ಭಾರತದ ತರಬೇತುದಾರನಾಗಿಯೂ ದ್ರಾವಿಡ್‌ಗೆ ಕೊನೆಯ ವಿಶ್ವಕಪ್‌ ಆಗಿದ್ದು, ಅಭಿಯಾ ನವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಟಿ20 ವಿಶ್ವಕಪ್‌ ವಿಜೇತರು
2007: ಪಾಕಿಸ್ಥಾನ ವಿರುದ್ಧ ಭಾರತಕ್ಕೆ 5 ರನ್‌ ಜಯ
2009: ಶ್ರೀಲಂಕಾ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ
2010: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ
2012: ಶ್ರೀಲಂಕಾ ವಿರುದ್ಧ ವೆಸ್ಟ್‌ಇಂಡೀಸ್‌ಗೆ 36 ರನ್‌ ಜಯ
2014: ಭಾರತದ ವಿರುದ್ಧ ಶ್ರೀಲಂಕಾಕ್ಕೆ 6 ವಿಕೆಟ್‌ ಜಯ
2016: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ಇಂಡೀಸ್‌ಗೆ 4 ವಿಕೆಟ್‌ ಜಯ
2021: ನ್ಯೂಜಿಲ್ಯಾಂಡ್‌ ವಿರುದ್ಧ ಆಸ್ಟ್ರೇಲಿಯಾಗೆ 8 ವಿಕೆಟ್‌ ಜಯ
2022: ಪಾಕಿಸ್ಥಾನ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್‌ ಜಯ

2024: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 7 ರನ್‌ ಜಯ
ಕಳೆದ ಜೂನ್‌ನಿಂದ ಈ ಜೂನ್‌ವರೆಗೆ 3 ಫೈನಲ್‌ ಆಡಿದ ಭಾರತ 2023ರ ಜೂನ್‌ ತಿಂಗಳಿಂದ ಈ ವರ್ಷ ಜೂನ್‌ ತಿಂಗಳ ನಡುವೆ ಭಾರತ ಮೂರು ಫೈನಲ್‌ ಆಡಿದಂತಾಗಿದೆ. 2023ರ ಜೂ. 7ರಿಂದ 11ರ ವರೆಗೆ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯ ವಿರುದ್ಧ 209 ರನ್‌ಗಳಿಂದ ಸೋತು ಹೋಯಿತು. ಅದೇ ವರ್ಷ ನ. 19ರಂದು ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್‌ಗಳಿಂದ ಸೋತು ಹೋಗಿತ್ತು. ಈ ವರ್ಷ ಪ್ರಸ್ತುತ ಜೂನ್‌ ತಿಂಗಳ 29ರಂದು ಭಾರತ, ದ.ಆಫ್ರಿಕಾ ವಿರುದ್ಧ ಫೈನಲ್‌ ಆಡಿದೆ.

Advertisement

ಮೊದಲು ಟೆಸ್ಟ್‌  , ಅನಂತರ ಏಕದಿನ, ಈಗ ಟಿ20 ವಿಶ್ವಕಪ್‌ ಫೈನಲ್‌ ಕಳೆದ ವರ್ಷ ಜೂನ್‌ನಿಂದ ಈ ವರ್ಷ ಜೂನ್‌ವರೆಗೆ ಭಾರತ 3 ಭಿನ್ನ ಮಾದರಿಯ ವಿಶ್ವಕಪ್‌ ಫೈನಲ್‌ಗ‌ಳಲ್ಲಿ ಆಡಿದೆ. ಕಳೆದ ವರ್ಷ ಜೂನ್‌ನಲ್ಲಿ ಟೆಸ್ಟ್‌ ವಿಶ್ವಕಪ್‌, ಅದೇ ವರ್ಷ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಡಿತು. ಇದೀಗ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡಿದೆ.

Advertisement

Udayavani is now on Telegram. Click here to join our channel and stay updated with the latest news.

Next