Advertisement
ಆದರೆ ಈ ಬಗೆಯ ಮಾರ್ಪಾಡುಗಳಿಗೆ ಸವಾಲಾಗಿ, ಕಾಲದ ಹಂಗಿಲ್ಲದಂತೆ ಕೆಲವು ನಾಟಕಗಳು ಹಠತೊಟ್ಟಂತೆ ಸ್ಥಾಯಿಯಾಗಿ ಉಳಿದುಬಿಡುತ್ತವೆ. ಇದಕ್ಕೆ ಉದಾಹರಣೆ ನರಹರಿ ಶಾಸಿŒಗಳ ರಚನೆಯ “ಸದಾರಮೆ’ ನಾಟಕ.
Related Articles
Advertisement
ದಶಕಗಳು ಉರುಳಿದರೂ ಈ ನಾಟಕ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಲೇ ಇರುವುದಕ್ಕೆ ಇದೇ ಕಾರಣ. ಇದನ್ನು ಪ್ರಯೋಗಿಸುವುದು ಸವಾಲೂ ಹೌದು. ಯಾಕೆಂದರೆ ಆಯಾ ವಿಭಾಗಕ್ರಮಕ್ಕೆ ತಕ್ಕ ನ್ಯಾಯ ಸಲ್ಲಿಸುವವರು ಬೇಕಾಗುತ್ತದೆ.
ಈ ಪ್ರಯೋಗದಲ್ಲಿ ನ್ಯಾಯ ಸಲ್ಲಿಸುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೂಕದ ಪ್ರಮಾಣ ವ್ಯತ್ಯಯಗೊಂಡಿತು. ತಂಡದ ಹಿರಿಯರು ಹಾಸ್ಯ ಸನ್ನಿವೇಶಗಳಲ್ಲಿ ದೃಶ್ಯಗಳಿಗೆ ಜೀವಂತಿಕೆ ತಂದರು. ಲೋಕೇಶ್ ಆಚಾರ್ ಹಾಗೂ ಶ್ರೀನಿವಾಸ್ ಮೇಷ್ಟ್ರ ಜೋಡಿ ಈ ಕೆಲಸವನ್ನು ಸಮರ್ಥವಾಗಿ ಮಾಡಿತು. ಆದರೆ ಅಮೆಚೂರ್‌ಗಳು ಸಂಗೀತ ಪ್ರಧಾನವಾದ ದೃಶ್ಯ ಭಾಗಗಳನ್ನು ನೀರಸಗೊಳಿಸಿದರು. ಸಂಗೀತದಲ್ಲಿ ತಕ್ಕ ಪರಿಶ್ರಮ ಸಾಧಿಸಿಲ್ಲ ಎಂಬುದನ್ನು ಅದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಆದರೆ ಜಯಶ್ರೀ ಅವರು ಸಂಗೀತ, ನೃತ್ಯ, ಹಾಸ್ಯ ಮತ್ತು ಮನರಂಜನೆ ಎಲ್ಲ ಭಾಗಗಳಲ್ಲೂ ತಮ್ಮ ಎಂದಿನ ಪರಿಣತಿ ಕಾಣಿಸಿದರು. ಕಳ್ಳನ ಪಾತ್ರದಲ್ಲಿ ಅವರ ಆಗಮನ ಮತ್ತು ಅದರ ಪ್ರಭಾವಳಿ ತುಂಬ ಗಾಢ ಹಾಗು ಪರಿಣಾಮಕಾರಿಯಾಗಿತ್ತು. ಅಮೆಚೂರ್‌ಗಳ ಸಮಸ್ತ ತಪ್ಪು$ಗಳೂ ಅವರ ನಟನೆಯ ಪ್ರಭಾವಳಿಯಲ್ಲಿ ಮರೆಯಾಗುವಷ್ಟು ಚೆಂದವಾಗಿ ಅವರು ನಟಿಸಿದರು. ಹಾರ್ಮೋನಿಯಂನಲ್ಲಿ ಪರಮಶಿವನ್‌ರವರು ಅಮೆಚೂರ್‌ಗಳ ತಪ್ಪುಗಳನ್ನು ಮನ್ನಿಸುತ್ತಲೇ ನುಡಿಸುತ್ತಿದ್ದದ್ದು ಚೆಂದವಾಗಿಯೂ ಇತ್ತು, ಆಶ್ಚರ್ಯಕರವಾಗಿಯೂ ಇತ್ತು.
ಎನ್.ಸಿ ಮಹೇಶ್