Advertisement

ಸಂಸ್ಕೃತಿ ಕಾಪಾಡುವ ನಾಟಕ ಕಲೆ ಉಳಿಸಿ

10:14 AM Mar 04, 2019 | |

ಕೆ.ಆರ್‌.ಪೇಟೆ: ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿವೆ. ಹಾಗಾಗಿ ಪೌರಾಣಿಕ ನಾಟಕಗಳನ್ನು ಟೀವಿ ಧಾರಾವಾಹಿಗಳ ಹಾವಳಿಯಿಂದ ಸಂರಕ್ಷಣೆ ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾದ
ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹೇಳಿದರು.
 
ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕರ ಸಂಘ ಮತ್ತು ಶ್ರೀ ಶಂಭುಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನದಲ್ಲಿಮಾತನಾಡಿದರು.

Advertisement

ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ನಾಟಕ ಕಲೆಯನ್ನು ಧಾರಾವಾಹಿಗಳ ಹಾವಳಿಯಿಂದ ಉಳಿಸಬೇಕಾದ ಅಗತ್ಯವಿದೆ. ಟೀವಿಗಳಲ್ಲಿ ಬರುವ ಕೆಲವು ಧಾರಾವಾಹಿಗಳು ಸುಖ ಸಂಸಾರಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಫ‌ಲವಾಗಿವೆ. ಬಹುತೇಕ ಧಾರಾವಾಹಿಗಳು ಮನೆಯಲ್ಲಿ ಅಣ್ಣ-ತಮ್ಮಂದಿರ, ಅಕ್ಕ ತಂಗಿಯರ, ಅತ್ತೆ-ಸೊಸೆಯ ಹಾಗೂ ಅಳಿಯ ಮಾವನ ನಡುವೆ ಇರುವ ಸಂಬಂಧಗಳ ನಡುವೆ ಬಿರುಕು ಮೂಡಿಸುವ ಕೆಲಸ ನಡೆಯುತ್ತಿವೆ. ಕೆಲವು ಉತ್ತಮ ಧಾರಾವಾಹಿಗಳು ಇರಬಹುದು ದಿನವಿಡೀ ಕೆಲಸ ಬಿಟ್ಟು ಧಾರಾವಾಹಿ ನೋಡುವ ಚಟ ಒಳ್ಳೆಯದಲ್ಲ ಎಂದರು.

ಈಗ ಪುರುಷರು ಧಾರವಾಹಿಗಳು ದಾಸರಾಗುತ್ತಿರುವುದು ಆತಂಕತಾರಿ ವಿಷಯವಾಗಿದೆ. ಏಕೆಂದರೆ ಒಂದೇ ಕಡೆಯಲ್ಲಿ ಗಂಟೆಗಟ್ಟಲೆ ಕುಳಿತು ಧಾರವಾಹಿಗಳನ್ನು ನೋಡುವುದಿಂದ ಆರೋಗ್ಯ ಕೆಡುತ್ತದೆ. ಆದರೆ ನಾಟಕಗಳು ಉತ್ತಮ ಸಮಾಜಕ್ಕೆ ಮನುಷ್ಯನಲ್ಲಿ ಇರಬೇಕಾದ ಉತ್ತಮ ಗುಣಗಳನ್ನು ತಿಳಿಸಿಕೊಡುತ್ತವೆ. ಕೆಟ್ಟ ಗುಣಗಳನ್ನು ದೂರ ಮಾಡುವಂತಹ ಗುಣವನ್ನು ಬೆಳೆಸುತ್ತವೆ. ಉತ್ತಮ ಗುಣ ಇದ್ದರೆ ಸಮಾಜದಲ್ಲಿ ಒಳ್ಳೆಯ
ಹೆಸರು ಬರುತ್ತದೆ ಎಂದು ತಿಳಿಸಿದರು.

ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ನಾಟಕ ಉದ್ಘಾಟಿಸಿದರು. ಮಂಡ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್‌.ಅಂಬರೀಶ್‌ ಕಲಾವಿದರಿಗೆ ಹಿತವಚನ ಹೇಳಿದರು. ಪುರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್‌, ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಾ.ಬಸ್ತಿರಂಗಪ್ಪ, ಬಜಾಜ್‌ ಶೋರೂಂ ಮಾಲೀಕ ಸಂತೋಷ್‌, ಉದ್ಯಮಿ ಪೂನಾಶಂಕರ್‌, ಶಿಕ್ಷಕ ಎಸ್‌.ಕೆ.ಹೇಮಣ್ಣ, ಸೊಸೈಟಿ ಸಿಇಒ ಎಂ.ಎಸ್‌.ಸತೀಶ್‌,
ಕಲಾವಿದರಾದ ಡಾ.ಸಿ.ಬಿ.ಸುನಿಲ್‌ಕುಮಾರ್‌, ರಂಗಸ್ವಾಮಿ, ಸಿ.ಎಸ್‌.ರೋಹಿತ್‌ಕುಮಾರ್‌,
ಚಟ್ಟೇನಹಳ್ಳಿ ನಾಗರಾಜು ಮತ್ತಿತರರು ಇದ್ದ

Advertisement

Udayavani is now on Telegram. Click here to join our channel and stay updated with the latest news.

Next