Advertisement
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ಯೋಗದಲ್ಲಿ ಆಯೋಜಿಸಿದ್ದ ಸಿದ್ದಮಾದೇಶ ಮತ್ತು ಪಿ.ಲಂಕೇಶರ ತೆರೆಗಳು ನಾಟಕಗಳ ಪ್ರದರ್ಶನಕ್ಕೆಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಹೆಚ್ಚು ಪರಿಣಾಮಕಾರಿ ಎಂದರು.
Related Articles
Advertisement
ಈ ಹಿಂದೆ ಸ್ವಾತಂತ್ಯ ಹೋರಾಟಗಳ ಸಂದರ್ಭದಲ್ಲಿಯೂ ಜನರಿಗೆ ನಾಟಕಗಳ ಮೂಲಕವೇ ಸಂದೇಶಗಳನ್ನು ತಲುಪಿಸುವ ಕೆಲಸ ಮಾಡಿರುವುದನ್ನು ನಾವು ಇತಿಹಾಸದಲ್ಲಿ ಕಾಣುತ್ತವೆ. ಸಂಸ್ಕಾರ ಮತ್ತು ಸಂಸ್ಕೃತಿ ಎರಡು ನಾಟಕಗಳಿಂದ ಪಡೆಯುಬಹುದು ಎಂದು ಅವರು ಹೇಳಿದರು.
ಕವಿ ಡಾ.ಜಿ.ಹನುಮಂತರಾಯ ಪಾಲಸಂದ್ರ ಮಾತನಾಡಿ, ಪಿ.ಲಂಕೇಶ್ ತಮ್ಮ ನಾಟಕಗಳ ಮೂಲಕ ಪ್ರಸ್ತುತ ವಿದ್ಯಮಾನಗಳಿಗೆ ಜನರನ್ನು ಮುಖಾ ಮುಖೀಯಾಗಿಸುವ ಕೆಲಸ ಮಾಡುತ್ತಿದ್ದರೂ, ಅವರ ತೆರೆಗಳು ನಾಟಕ 70ರ ದಶಕದಲ್ಲಿ ರಚನೆಯಾದರೂ ಇಂದಿಗೂ ಪ್ರಸ್ತುತವೆನಿಸುತ್ತದೆ. ಸಾರ್ವಜನಿಕ ಸಮಸ್ಯೆಗಳಿಗೆ ಕನ್ನಡಿಯಾಗುವ ನಾಟಕಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ರಂಗಾಸಕ್ತರನ್ನು ಸಂಘಟಿಸಿ: ಸಾಹಿತಿ ಶೈಲಾ ನಾಗರಾಜು ಮಾತನಾಡಿ, ನಾಟಕಗಳನ್ನು ಜನಮುಖೀಯಾಗಿಸುವ ಕೆಲಸ ಮಾಡಿದ ರೀತಿಯಲ್ಲಿ ರಂಗಾಸಕ್ತರನ್ನು ಸಂಘಟಿಸುವ ಅನಿವಾರ್ಯ ಪರಿಸ್ಥಿತಿ ಇಂದು ಕಲಾವಿದರಿಗೆ ಬಂದೊದಗಿದೆ. ರಂಗದ ಮೇಲೆ ಮತ್ತು ರಂಗದ ಹಿಂದೆ ಕೆಲಸ ಮಾಡುವುದರ ಜೊತೆಗೆ, ಸಾಮಾಜಿಕ ಜಾಲತಾಣ, ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಹೆಚ್ಚು ಜನರನ್ನು ತಲುಪಿದರೆ ನಾಟಕದ ಆಶಯಗಳು ಸಫಲವಾಗುತ್ತವೆ ಎಂದು ಹೇಳಿದರು.
ವೇದಿಕೆಯಲ್ಲಿ ಬೆಳಗುಂಬ ಜಿಪಂಸದಸ್ಯ ನರಸಿಂಹಮೂರ್ತಿ, ರಂಗನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ, ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ಸಂಚಾಲಕ ಶಿವಕುಮಾರ್ ತಿಮ್ಮಲಾಪುರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಹೊರೆಯಾಲ ದೊರೆಸ್ವಾಮಿ ಅವರು ರಚಿಸಿರುವ ಸಿದ್ದಮಾದೇಶ ಮತ್ತು ಪಿ.ಲಂಕೇಶರ ತೆರೆಗಳು ನಾಟಕಗಳು ಪ್ರದರ್ಶನಗೊಂಡವು.