Advertisement

ಸುಳ್ಯ: ಒಳಚರಂಡಿ ದುರಸ್ತಿ ಕಾರ್ಯ ಆರಂಭ

03:20 AM Jul 05, 2017 | Team Udayavani |

ಸುಳ್ಯ: ಸುಳ್ಯ ನಗರದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ್ಗೆ ಬ್ಲಾಕ್‌ ಆಗುತ್ತಿರುವ ಒಳಚರಂಡಿ ದುರಸ್ತಿ ಕಾರ್ಯಕ್ಕಾಗಿ ಮಂಗಳವಾರ ಮಂಗಳೂರಿನಿಂದ ಸಕ್ಕಿಂಗ್‌ ಯಂತ್ರ ತರಿಸಿ ದುರಸ್ತಿ ಕಾರ್ಯ ನಡೆಸಲಾಯಿತು. ಬ್ಲಾಕ್‌ ಆಗಿರುವ ಮ್ಯಾನ್‌ಹೋಲ್‌ಗ‌ಳಿಗೆ ಪೈಪುಗಳನ್ನು ಇಳಿಸಿ ಬ್ಲಾಕ್‌ ಆಗಿರುವುದನ್ನು ಪರಿಶೀಲಿಸಲಾಯಿತು. ಒಂದು ವಾರದಿಂದ ನಗರ ಪಂಚಾಯತ್‌ ನಗರದ ಮುಖ್ಯ ರಸ್ತೆಯಲ್ಲಿರುವ 9 ಮ್ಯಾನ್‌ಹೋಲ್‌ಗ‌ಳನ್ನು ತೆರೆದು ಸರಿಪಡಿಸುವ ಕಾರ್ಯ ನಡೆಸುತ್ತಿತ್ತು. ಆದರೆ ಡಾಮರಿನಡಿ ಮುಚ್ಚಿಹೋಗಿದ್ದ ಕೆಲವು ಮ್ಯಾನ್‌ಹೋಲ್‌ಗ‌ಳನ್ನು ತೆರೆದು ಸಕ್ಕಿಂಗ್‌ ಯಂತ್ರ ಮೂಲಕ ದುರಸ್ತಿ ಕಾರ್ಯ ಕೈಗೊಂಡಿತು.

Advertisement

ಕಾಮಗಾರಿ ಸಂದರ್ಭ ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷೆ ಶೀಲಾವತಿ, ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್‌ ಕಲ್ಲಗದ್ದೆ, ನಗರ ಪಂಚಾಯತ್‌ ಸದಸ್ಯರಾದ ಗಿರೀಶ್‌ ಕಲ್ಲಗದ್ದೆ, ಎಂಜಿನಿಯರ್‌ ಶಿವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next