Advertisement

ಚರಂಡಿ ಅವ್ಯವಸ್ಥೆ, ಸಂಚಾರ ಸಂಕಷ್ಟ; ದುರಸ್ತಿಗೆ ಆಗ್ರಹ

07:35 PM Sep 27, 2020 | Suhan S |

ಬಸ್ರೂರು, ಸೆ. 26: ಬಸ್ರೂರು ಬಸ್‌ ನಿಲ್ದಾಣದ ಸಮೀಪದಿಂದ ಗುಂಡಿಗೋಳಿ ಕಡೆಗೆ ಸಂಚರಿಸುವ ರಸ್ತೆಯ ಚರಂಡಿ ಅವ್ಯವಸ್ಥೆಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುವಂತಾಗಿದೆ.

Advertisement

ಗುಂಡಿ ಗೋಳಿ ಕಡೆಗೆ ಹೋಗುವ ರಸ್ತೆಯ ಆರಂಭದಲ್ಲಿ ಸುಮಾರು 150 ಮೀ. ಉದ್ದಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ರಾಜ್ಯ ಹೆದ್ದಾರಿಯಿಂದತಿರುವಿನ ಆರಂಭದಲ್ಲೇ ಚರಂಡಿಗೆ ಹಾಕಲಾದ ಕಲ್ಲುಗಳು ಎದ್ದಿದೆ. ಅದಲ್ಲದೆ ಮಳೆನೀರು ವೇಗವಾಗಿ ಬಂದಾಗ ಈ ತಿರುವಿನ ಪೂರ್ಣ ಜಾಗ ನೀರಲ್ಲಿ ಮುಳುಗಿರುತ್ತದೆ. ಇದರಿಂದ ದ್ವಿಚಕ್ರ ಸೇರಿದಂತೆ ಯಾವ ವಾಹನವೂ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ.

ಕಳೆದ ವರ್ಷದ ಮಳೆಗಾಲದಲ್ಲೂ ಇದೇ ಸ್ಥಿತಿ ಉಂಟಾಗಿತ್ತು. ನಿತ್ಯ ಸಾಗುವ ಪ್ರಯಾಣಿಕರಿಗೆ ಇದನ್ನು ದಾಟುವುದು ಒಂದು ಸವಾಲಾಗಿದೆ. ಸಂಬಂಧಪಟ್ಟ ಇಲಾಖೆ ಆದಷ್ಟು ಶೀಘ್ರ ಈ ತಿರುವಿನ ಸ್ಥಳದಲ್ಲಿ ಕಿತ್ತು ಹೋದ ಚರಂಡಿ, ಎದ್ದು ಬಂದ ಕಲ್ಲುಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾನು ಗುಂಡಿಗೋಳಿಯಿಂದ ಕುಂದಾಪುರದ ಕಚೇರಿ ಕೆಲಸಕ್ಕೆ ದಿನವೂ ಸಾಗುವ ನೌಕರ. ದ್ವಿಚಕ್ರದಲ್ಲಿ ಸಾಗುವಾಗ ಈಗಾಗಲೇ ಎರಡು ಬಾರಿ ಈ ತಿರುವಿನಲ್ಲಿ ಬಿದ್ದಿದ್ದೇನೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಈ ತಿರುವಿನ ಹೊಂಡಬಿದ್ದ ಸ್ಥಳವನ್ನು ಸರಿಪಡಿಸಿದರೆ ಜನರಿಗೆ ಅನುಕೂಲವಾಗಿರುತ್ತದೆ ಎನ್ನುವುದು ಪ್ರಯಾಣಿಕರೊಬ್ಬರ ಅಭಿಪ್ರಾಯ.

ಬಸ್ರೂರು ಬಸ್‌ ನಿಲ್ದಾಣದ ಬಳಿ ಗುಂಡಿಗೋಳಿಗೆ ಹೋಗುವ ತಿರುವಿನಲ್ಲಿ ಕಲ್ಲುಗಳು ಎದ್ದಿದ್ದು, ಸಂಚಾರ ಕಷ್ಟಕರವಾಗಿದೆ. ಶೀಘ್ರ ಈ ತಿರುವಿನಲ್ಲಿ ಎದ್ದ ಕಲ್ಲುಗಳನ್ನು ಸರಿಪಡಿಸಿ ಹೊಂಡ ಮುಚ್ಚಲಾಗುವುದು. -ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಬಸ್ರೂರು ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next