Advertisement
ಬೇಸಗೆಯಲ್ಲಿ ಕಸ-ಕಡ್ಡಿ, ತ್ಯಾಜ್ಯ ಸೇರಿಕೊಂಡು ಮಳೆ ನೀರಿನ ಹರಿವಿಗೆ ಅಡ್ಡಿಯುಂಟಾಗಿದ್ದು , ಕೆಲವೆಡೆ ಚರಂಡಿ ಬಂದ್ ಆಗಿರುವ ಸ್ಥಿತಿಯಲ್ಲಿದೆ. ಇದು ಕೃತಕ ನೆರೆ ಭೀತಿಯನ್ನು ತಂದೊಡ್ಡುವ ಆತಂಕವನ್ನು ಸೃಷ್ಟಿಸಿದೆ. ಸುಳ್ಯದಲ್ಲಿ ಹಳ್ಳ, ತೋಡು, ಕಾಲುವೆಗಳಿಂದ ನೀರು ಪೇಟೆಗೆ ನುಗ್ಗುವ ಭೀತಿ ಇಲ್ಲದಿದ್ದರೂ ಇರುವ ಚರಂಡಿಯಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾದಲ್ಲಿ ನೀರು ರಸ್ತೆಗೆ ನುಗ್ಗುವ ಆತಂಕ ಇದೆ.
Related Articles
Advertisement
ಅಪಾಯಕ್ಕೆ ಆಹ್ವಾನ
ಪೇಟೆಯಲ್ಲಿ ಚರಂಡಿಯ ಮೇಲ್ಭಾಗಕ್ಕೆ ಅಳವಡಿಸಿರುವ ಸ್ಲ್ಯಾಬ್ ಕೆಲವೆಡೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಕೆಲವೆಡೆ ಕಬ್ಬಿಣದ ಸರಳುಗಳು ಮೇಲೆದ್ದು ಕಾಣಿಸುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಕೆಲವೆಡೆ ಸ್ಲ್ಯಾಬ್ ತೆಗೆದಿದ್ದರೆ ಅದನ್ನು ಅಳವಡಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬ ದೂರು ವ್ಯಕ್ತವಾಗಿದೆ.
ದುರಸ್ತಿ ನಡೆಯಲಿ
ಇದೀಗ ಸಂಜೆ ಮಳೆ ಸುರಿಯುತ್ತಿದ್ದು, ಚರಂಡಿ, ಕಾಲುವೆಗಳ ದುರಸ್ತಿ ಕಾರ್ಯ ನಡೆಸಲು ಸೂಚನೆ ನೀಡಿದಂತಾಗಿದೆ. ಸ್ಥಳೀಯಾಡಳಿತ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕಿದೆ. ಕೆಲವೆಡೆ ಚರಂಡಿಗೂ ಕಾಯಕಲ್ಪ ನೀಡಿ ನೀರಿ ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕಸ-ಕಡ್ಡಿ, ಗಿಡ-ಗಂಟಿ ತೆರವು, ಮಣ್ಣು ತೆರವು ಕಾರ್ಯ ನಡೆಯಬೇಕಿದೆ. ಮಳೆಗಾಲದ ಮೊದಲು ದುರಸ್ತಿ ಕಾರ್ಯ ನಡೆಸಿದರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.