Advertisement
ಶನಿವಾರ ಅವರು ಪತ್ರಕರ್ತ ರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ, ದ್ವೇಷದ ಸಂದೇಶಗಳನ್ನು ಹರಡಿಸುವುದರಿಂದ ಸಮಾಜದ ಶಾಂತಿ ಕದಡುವ ಅಪಾಯ ವಿದೆ. ಹಾಗಾಗಿ ಇಂತಹ ಸಂದೇಶ ಹಾಕುವವರ ಮೇಲೆ ನಿಗಾ ಇಟ್ಟು ಎಫ್ಐಆರ್ ದಾಖಲಿಸಿಕೊಳ್ಳಲಾಗುವುದು. ಇಂಥವರ ಮೇಲೆ ನಿರಂತರ ನಿಗಾ ಇಡಲು ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ (ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಪುತ್ತೂರು ಮತ್ತು ಬಂಟ್ವಾಳ ಉಪವಿಭಾಗಗಳ ಘಟಕ(ಸೆಲ್)ಗಳನ್ನು ಕೂಡ ಬಲಪಡಿಸ ಲಾಗುವುದು ಎಂದು ಡಾ| ವಿಕ್ರಮ್ ತಿಳಿಸಿದರು.
ರೌಡಿಶೀಟರ್‌ಗಳು, ಜೈಲಿನಿಂದ ಬಿಡುಗಡೆಯಾದವರು, ಅಪರಾಧ ಹಿನ್ನೆಲೆಯಲ್ಲಿರುವವರು, ವದಂತಿ ಗಳನ್ನು ಹಬ್ಬಿಸುವವರು ಮೊದಲಾದ ಸಮಾಜ ಘಾತುಕರ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗುವುದು. ಸದ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾ ಗುವುದು. ಸಂಘಟಿತ ಅಪರಾಧಗಳ ತಡೆಗೂ ವಿಶೇಷ ಗಮನ ನೀಡಲಾಗುವುದು. ಸಾರ್ವಜನಿಕರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದು ಎಸ್‌ಪಿ ಡಾ| ವಿಕ್ರಮ್ ತಿಳಿಸಿದರು. ಗಡಿಭಾಗದಲ್ಲಿ ಸಿಸಿ ಕೆಮರಾ: ಕೇರಳ-ಕರ್ನಾಟಕ ಗಡಿ ಭಾಗದ ರಸ್ತೆಗಳಲ್ಲಿ ಹೆಚ್ಚಿನ ನಿಗಾ ಇಡುವುದಕ್ಕಾಗಿ ಹೆಚ್ಚುವರಿಯಾಗಿ ಸಿಸಿ ಕೆಮರಾ ಅಥವಾ ಇನ್ನಿತರ ಕ್ರಮಗಳ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಯವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಈಗಾಗಲೇ ಇರುವ ಸಿಸಿ ಕೆಮರಾಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗುವುದು ಎಂದು ಡಾ| ವಿಕ್ರಮ್ ತಿಳಿಸಿದರು.
Related Articles
ಪೊಲೀಸ್ ಬೀಟ್ ವ್ಯವಸ್ಥೆ ಬಲವರ್ಧನೆ ಮಾಡಲಾಗುವುದು. ಮುಖ್ಯವಾಗಿ ಹಿರಿಯ ನಾಗರಿಕರು, ಒಂಟಿ ಮನೆಗಳಿರುವ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಕಟ್ಟುನಿಟ್ಟುಗೊಳಿಸಲಾಗುವುದು, ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿ ಗಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸುವ, ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ಡಾ| ಗಾನ ಪಿ. ಕುಮಾರ್ ಉಪಸ್ಥಿತರಿದ್ದರು.
Advertisement
ಬೆಳಗಾವಿ ಮೂಲದವರು ಬೆಳಗಾವಿಯವರಾದ ಡಾ| ವಿಕ್ರಂ ಅಮಟೆ ಬೀದರ್‌ನಲ್ಲಿ ಪಶು ವೈದ್ಯಕೀಯ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದು ಬೆಳಗಾವಿಯಲ್ಲಿ ಪಶು ಸಂಗೋಪನ ಇಲಾಖೆಯಲ್ಲಿ ಅ ಧಿಕಾರಿಯಾಗಿ, ಅನಂತರ ಎಸ್‌ಬಿಐ ಬ್ಯಾಂಕ್‌ನಲ್ಲಿ 2 ವರ್ಷಗಳ ಕಾಲ ತಾಂತ್ರಿಕ ಅ ಧಿಕಾರಿಯಾಗಿದ್ದರು. 2012ರಲ್ಲಿ ಕೆಎಸ್‌ಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರು, ಚಾಮರಾಜನಗರ, ಮಂಗಳೂರು, ಬೆಳಗಾವಿ, ಶಿವಮೊಗ್ಗಗಳಲ್ಲಿ ನಾನಾ ಹುದ್ದೆ ನಿರ್ವಹಿಸಿದ್ದಾರೆ. ಬಳಿಕ ಐಪಿಎಸ್ ಆಗಿ ಪದೋನ್ನತಿ ಹೊಂದಿ ಮೈಸೂರು ವಿಭಾಗದಲ್ಲಿ ಗುಪ್ತವಾರ್ತೆ ಎಸ್‌ಪಿಯಾಗಿದ್ದರು. ಎರಡು ವರ್ಷಗಳ ಹಿಂದೆ ದ.ಕ. ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಕೇಸ್‌ನೊಂದಿಗೆ ಕೌನ್ಸೆಲಿಂಗ್
ಹೆಲ್ಮೆಟ್ ಧರಿಸದೆ ಸಂಚರಿಸುವುದು ಸೇರಿದಂತೆ ವಾಹನ ಸಂಚಾರ ನಿಯಮ ಉಲ್ಲಂ ಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಜತೆಗೆ ಪದೇ ಪದೇ ನಿಯಮ ಉಲ್ಲಂ ಸುವವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ವಿಶೇಷ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸ್ಯಾಟಲೈಟ್ ಪೋನ್ ಬಳಕೆ ತನಿಖೆ
ನಿಷೇಧಿತ ಸ್ಯಾಟಲೈಟ್ ಪೋನ್‌ಗಳ ಬಳಕೆಯಾಗಿರುವ ಮಾಹಿತಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ| ವಿಕ್ರಮ್ ಅವರು, ದ.ಕ. ಜಿಲ್ಲೆ ಸೇರಿದಂತೆ ಹಲವೆಡೆ ಸ್ಟಾಟಲೈಟ್ ಪೋನ್ ಬಳಕೆಯಾಗಿರುವ ಸಿಗ್ನಲ್ ದೊರೆತಿರುವ ಬಗ್ಗೆ ಗುಪ್ತಚರ ಇಲಾಖೆ, ಎನ್‌ಐಎ, ಎಎನ್‌ಎಫ್ ಮತ್ತು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ತಿಳಿಸಿದರು.