Advertisement

Dr. Sudhakar ದೊಡ್ಡ ಕಳಂಕಿತ,ಕಾಂಗ್ರೆಸ್ ಗೆ ಸೇರಿಸುವುದಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ

06:18 PM Sep 04, 2023 | Team Udayavani |

ಕೊಪ್ಪಳ: ರಾಜ್ಯದಲ್ಲಿ ಅನ್ಯ ಪಕ್ಷದವರು ಕಾಂಗ್ರೆಸ್ ಸೇರ್ಪಡೆಯಾಗುವ ಅಭಿಪ್ರಾಯ ವ್ಯಕ್ತಪಡಿಸಿ ತಮ್ಮ ಹೇಳಿಕೆ ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಮಾಜಿ ಮಂತ್ರಿ ಡಾ.ಡಿ.ಸುಧಾಕರ್ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರ ನಾವು ಕೇಳಿದ್ದೇವೆ. ಪಕ್ಷದ ವೇದಿಕೆಯಲ್ಲಿ ಅಂತಹ ಚರ್ಚೆ ನಡೆದಿಲ್ಲ. ನಮ್ಮಿಂದಲೂ ಪಕ್ಷ ಆ ರೀತಿ ಅಭಿಪ್ರಾಯ ಪಡೆಯುವ ಕೆಲಸವಾಗಿಲ್ಲ. ಸುಮ್ಮನೆ ಇಂತಹ ವಿಷಯ ಚರ್ಚೆ ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜಕಾರಣದಲ್ಲಿ ಡಾ.ಸುಧಾಕರ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಅಧಿಕಾರ ಅನುಭವಿಸಿದ್ದಾರೆ. ಅವರದ್ದೇ ಪಕ್ಷದವರು ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಇವರು ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷವೂ ಸಹಿತ ಅವರ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆಗೆ ಆದೇಶ ಮಾಡಿದೆ. ಅಂತಹ ವ್ಯಕ್ತಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು, ಸಮರ್ಥನೆ ಮಾಡಿಕೊಳ್ಳಲು ಹೇಗೆ ಸಾಧ್ಯ?. ಅಂಹತ ದೊಡ್ಡ ಕಳಂಕಿತ ವ್ಯಕ್ತಿಯನ್ನು ನಮ್ಮ ಪಕ್ಷ ಸೇರಿಸಿಕೊಳ್ಳುವುದಿಲ್ಲ ಎಂದರು.

ಬಿ.ಎಲ್.ಸಂತೋಷ್ ಅವರು ರಾಜಕೀಯವಾಗಿ ಹೇಳಿಕೆ ನೀಡಿರಬಹುದು. ಪಕ್ಷದಲ್ಲಿ ಹಲವು ಹಿರಿಯರಿದ್ದಾರೆ. ಅವರು ಸಂತೋಷ್ ಅವರ ಹೇಳಿಕೆಯ ಬಗ್ಗೆ ಮಾತನಾಡಲಿದ್ದಾರೆ ಎಂದರು.

ಹೊಸ ವಿವಿ ಮುಚ್ಚುವ ಪ್ರಸ್ತಾಪವಿಲ್ಲ

ಹೊಸ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ವಿವಿಗಳಿಗೆ ಶಕ್ತಿ ತುಂಬುವ ಕುರಿತು ವಿವರವಾಗಿ ಚರ್ಚೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.

Advertisement

ಕೆಲವು ದಿನಗಳ ಹಿಂದೆ ಎಲ್ಲ ವಿವಿಗಳ ಕುಲಪತಿಗಳ ಜೊತೆ ಸಭೆ ನಡೆಸಿದ ವೇಳೆ ಎಲ್ಲ ವಿವಿಗಳಲ್ಲಿ ಆರ್ಥಿಕ ಮುಗ್ಗಟ್ಟು ಇರುವುದು ಕಂಡು ಬಂದಿತು. ಸಿಎಂ ಅವರು ಕುಲಪತಿಗಳ ಅಭಿಪ್ರಾಯ ಪಡೆಯುವ ವೇಳೆ ಹೊಸ ವಿವಿ ಮುಂದುವರೆಸಬೇಕಾ ? ಅಥವಾ ಮುಚ್ಚಬೇಕಾ ? ಎಂದು ಕೇಳಿದಾಗ, ಎಲ್ಲ ಕುಲಪತಿಗಳೂ ವಿವಿಗಳನ್ನು ಮುಂದುವರೆಸಬೇಕೆನ್ನುವ ಅಭಿಪ್ರಾಯ ಕೊಟ್ಟಿದ್ದಾರೆ. ಹಾಗಾಗಿ ಸಿಎಂ ಸಹಿತ ಅನುದಾನ ನೀಡುವ ಜೊತೆಗೆ ಮುಂದೆ ಹೆಚ್ಚಿನ ಕಾಳಜಿ ವಹಿಸುವುದಾಗಿ ತಿಳಿಸಿದ್ದಾರೆ ಎಂದರು.

ಕಳೆದ ಬಿಜೆಪಿ ಸರ್ಕಾರ ಹೊಸ ವಿವಿ ಆರಂಭಿಸುವ ಮೊದಲು ಯಾವುದೇ ಅಧ್ಯಯನ ಮಾಡದೇ ಹೊಸ ವಿವಿ ಘೋಷಣೆ ಮಾಡಿತು. ಕುಲಪತಿಗಳನ್ನು ನೇಮಕ ಮಾಡಿತು. ಆದರೆ ಯಾವುದೇ ಆರ್ಥಿಕ ನೆರವು ಒದಗಿಸಿಲ್ಲ. ೨ ಕೋಟಿ ಕೊಡುವ ಮಾತನ್ನಾಡಿ ಅನುದಾನವನ್ನೂ ಕೊಟ್ಟಿಲ್ಲ. ಇದೆಲ್ಲವನ್ನು ನಾವು ಮೂರು ತಿಂಗಳಲ್ಲಿ ಅಧ್ಯಯನ ಮಾಡಿ ಸಿಎಂ ಗಮನಕ್ಕೆ ತಂದೆವು. ಸಿಎಂ ಸಹಿತ ಎಲ್ಲ ವಿವಿ ಕುಲಪತಿಗಳ ಜೊತೆ ಮಾತನಾಡಿದ್ದಾರೆ. ಒಂದು ವಿವಿಯಿಂದ ಇನ್ನೊಂದು ವಿವಿಯ ಕಾಲೇಜುಗಳನ್ನು ವಿಭಾಗ ಮಾಡಿದೆ. ಹೊಸ ವಿವಿಗಳಲ್ಲಿ ಶೈಕ್ಷಣಿಕ ಪ್ರಕ್ರಿಯೆ ನಡೆಯುತ್ತಿವೆ. ಯಾವುದಕ್ಕೂ ತಡೆ ಕೊಟ್ಟಿಲ್ಲ. ಹೊಸ ವಿವಿಗಳು ತಮ್ಮ ಜವಬ್ದಾರಿ ನಿಭಾಯಿಸುತ್ತಿದ್ದಾರೆ ಎಂದರು.

ಎನ್‌ಇಪಿ ರದ್ದತಿಯ ಜತೆಗೆ ರಾಜ್ಯ ಶಿಕ್ಷಣ ನೀತಿಯ ಕುರಿತು ಎಲ್ಲ ಜಾತಿ ವರ್ಗಗಳ ಆಶೋತ್ತರಗಳು ಹಾಗೂ ಸ್ಥಳೀಯತೆಯನ್ನು ಗಮನದಲ್ಲಿಟ್ಟು ಶಿಕ್ಷಣ ನೀತಿ ರೂಪಿಸುವ ಸಿದ್ದತೆಯಿದೆ. ಕಳೆದ ಸರ್ಕಾರವು ತರಾತುರಿಯಲ್ಲಿ ಎನ್‌ಇಪಿ ಜಾರಿ ಮಾಡಿದೆ. ದೇಶದ ಯಾವುದೇ ರಾಜ್ಯದಲ್ಲಿಯೂ ಸಹ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲೂ ಎನ್‌ಇಪಿ ಜಾರಿಯಾಗಿಲ್ಲ. ಕರ್ನಾಟಕದಲ್ಲಿ ಮಾತ್ರ ಜಾರಿಯಾಗಿತ್ತು. ಇದೆಲ್ಲ ಗಮನ ಹರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿ ಅರಿತು, ಹೊಸ ಶಿಕ್ಷಣ ನೀತಿ ತರಲು ಸಮಿತಿ ಮಾಡಿದ್ದು, ಆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.

ಸಮಿತಿಗೂ ಸಹಿತ ನಿಗಧಿತ ಅವಧಿಯಲ್ಲಿ ಹೊಸ ಶಿಕ್ಷಣ ನೀತಿ ಕೊಡಲು ಸೂಚನೆ ನೀಡುತ್ತೇವೆ. ನಂತರ ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕೆನ್ನುವ ಅಭಿಪ್ರಾಯವನ್ನು ಕೇಳುತ್ತೇವೆ. ಎನ್‌ಇಪಿಯಲ್ಲಿ ಜಾತ್ಯಾತೀತ ತತ್ವಗಳಿಗೆ ವಿರುದ್ದವಾಗಿ ಕೆಲವು ಅಂಶಗಳು ಇರುವುದರಿಂದ ನಾವು ಅದನ್ನು ವಿರೋಧ ಮಾಡುತ್ತೇವೆ. ಏಲ್ಲೆಲ್ಲಿ ನಮ್ಮ ಚರಿತ್ರೆಯನ್ನು ತಿದ್ದುವ ಕೆಲಸ ಆಗಿತ್ತು. ಅದರ ಬಗ್ಗೆ ಆಕ್ಷೇಪ ಇದೆ. ಪ್ರವೇಶ ಹಾಗೂ ನಿರ್ಗಮದಲ್ಲೂ ಕೆಲವೊಂದು ಗೊಂದಲ ಇವೆ. ಇದರಿಂದ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಮೊಟಕು ಗೊಳಿಸುವ ವಿಚಾರ ಕೇಳಿ ಬಂದಿತ್ತು. ಎನ್‌ಇಪಿ ಹಾಗೂ ನಾವು ಸಿದ್ದಪಡಿಸುವ ರಾಜ್ಯ ಹೊಸ ಶಿಕ್ಷಣ ನೀತಿಯಲ್ಲಿ ಹೊಸ ಉದ್ಯೋಗ ಸೃಷ್ಟಿ ಮಾಡುವಂತ ವಿಚಾರಗಳ ಕುರಿತಂತೆ ಕೌಶಲ್ಯಗಳ ಕುರಿತಂತೆಯೂ ಸಿದ್ದತೆ ಮಾಡಲಿದ್ದೇವೆ. ಏಕಾಏಕಿ ಎನ್‌ಇಪಿ ರದ್ದತಿಯಲ್ಲ, ನಿಧಾನವಾಗಿ ರದ್ದು ಮಾಡಲಾಗುವುದು. ಈಗ ವಿದ್ಯಾರ್ಥಿಗಳು ನಿಧಾನವಾಗಿ ಎನ್‌ಇಪಿ ಓದಲಿದ್ದಾರೆ. ಮುಂದಿನ ಹಂತದಲ್ಲಿ ಹೊಸ ಶಿಕ್ಷಣ ನೀತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಕೊರತೆಯಿದೆ. ಭರ್ತಿ ಮಾಡುವ ಕೆಲಸ ನಡೆದಿದೆ. ೨೨೪೨ ಪ್ರಾಧ್ಯಾಫಕರ ನೇಮಕ ವಿಚಾರದಲ್ಲಿ ಪರೀಕ್ಷೆಯಲ್ಲಿ ನಡೆದ ತಪ್ಪಿನಲ್ಲಿ ಒಬ್ಬರಿಂದ ತಪ್ಪಾಗಿ ಸಿಸಿಬಿಯಲ್ಲಿ ತನಿಖೆ ನಡೆದಿದೆ. ಅವರ ಮೇಲೆ ಕಾನೂನು ಮೇಲೂ ಕ್ರಮವಾಗಿದೆ. 371(J)ಅಡಿ ಬಿಜೆಪಿ ಸರ್ಕಾರ ಗೊಂದಲದ ಆದೇಶ ಮಾಡಿದರು. ಇದೊಂದು ಕೆಎಟಿಯಲ್ಲಿ ಈ ಕುರಿತು ತೀರ್ಪು ಬರಬೇಕಿದೆ. ಪದೇ ಪದೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಚಾರ ಕಾನೂನಾತ್ಮಕ ತೊಡಕು ಇದೆ. ಕೋವಿಡ್ ನಂತರದಲ್ಲಿ ಈ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವ
ಕೆಲಸ ನಮ್ಮಿಂದ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next