Advertisement
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ| ಎಸ್.ಎಂ. ಜಾಮದಾರ ಅವರಿಗೆ ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ ಮತ್ತು ಶಾಲಾ ಕೊಠಡಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.
Related Articles
Advertisement
ತೋಂಟದ ಶ್ರೀಗಳ ಕುರಿತಾದ `ಕರುಣಾಮಯಿ’, `ಮಾತೃಹೃದಯಿ’ ಹಾಗೂ ವಚನ ಸಾಹಿತ್ಯ ಅಧ್ಯಯನಗಳ ಸಮೀಕ್ಷೆ, ಲಿಂಗಾಯತ ಧರ್ಮದ ತತ್ವ ಸಿದ್ಧಾಂತ, ಕನ್ನಡ ಸಾಹಿತ್ಯದಲ್ಲಿ ಸತ್ಯೇಂದ್ರ ಚೋಳ ಎಂಬ ಗ್ರಂಥಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿವೆ. ಜೊತೆಗೆ ಪಾಲಾ-ಬದಾಮಿ ರಸ್ತೆಗೆ ಹೊಂದಿಕೊಂಡಿರುವ ಸಂಸ್ಥೆಯ ನಿವೇಶನದನಲ್ಲಿ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಲಿದೆ ಎಂದು ಆಡಳಿತಾಧಿಕಾರಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಡಾ| ಎಸ್.ಬಿ. ಶೆಟ್ಟರ್, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ, ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಮಂಜುನಾಥ ಕೊಟ್ನೆಕಲ್, ಸಂತೋಷ ಕಬಾಡರ, ಅಶೋಕ ಹಾದಿ, ಉಮೇಶ ನಾಲವಾಡದ ಇದ್ದರು.
ಶ್ರೀಗಳ ಹೆಸರಿನಲ್ಲಿ ಕಸಾಪ ದತ್ತಿನಿಧಿ ಪುರಸ್ಕಾರ
ಕನ್ನಡದ ಕುಲಗುರುಗಳೆಂದೇ ಖ್ಯಾತರಾಗಿದ್ದ ಡಾ| ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕವಿಗಳು-ಕಲಾವಿದರು ಹಾಗೂ ಸಾಧಕರಿಗೆ ಪ್ರತಿ ವರ್ಷ ಪುರಸ್ಕಾರ ನೀಡಲು ದತ್ತಿನಿಧಿಯನ್ನು ಸ್ಥಾಪಿಸಲು ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸಮಿತಿಯವರು ಒಪ್ಪಿಕೊಂಡಿದ್ದು, ಮುಂದಿನ ವರ್ಷದಿಂದ ಡಾ| ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ 10 ಸಾವಿರ ರೂ. ಮೊತ್ತ ದತ್ತಿನಿಧಿ ಪ್ರಶಸ್ತಿಯನ್ನು ಸಾಧಕರಿಗೆ ಕೊಡಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ತಿಳಿಸಿದರು.