Advertisement

ಡಾ|ಶಿವಕುಮಾರ ಶ್ರೀ ಸ್ಮರಣೆ

07:05 AM Jan 29, 2019 | Team Udayavani |

ಹರಿಹರ: ಸಿದ್ಧಗಂಗಾ ಮಠದ ಲಿಂ| ಡಾ| ಶಿವಕುಮಾರ ಶ್ರೀಗಳ ಸ್ಮರಣೆ ನಿಮಿತ್ತ ಸೋಮವಾರ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಅನ್ನದಾಸೋಹ ನಡೆಸಲಾಯಿತು.

Advertisement

ಆರಂಭದಲ್ಲಿ ಲಿಂ| ಶ್ರೀಗಳ ಭಾವಚಿತ್ರಕ್ಕೆ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಪುಷ್ಪಾರ್ಚನೆ ಮಾಡಿದರು. ನಂತರ ವಕೀಲರ ಸಂಘದ ಅಧ್ಯಕ್ಷ ನಾಗರಾಜ್‌ ಹಲವಾಗಲು ಮಾತನಾಡಿ, ನಾಡಿನಲ್ಲಿ ತ್ರಿವಿಧ ದಾಸೋಹದ ಕ್ರಾಂತಿಗೆ ಲಿಂ| ಶ್ರೀಗಳ ಕಾಣಿಕೆ ಅಪಾರವಾಗಿದೆ. ಅಂತಹ ಮಹಾನ್‌ ಗುರುವಿನ ಸ್ಮರಣೆ ಮಾಡುವ ಕೆಲಸವನ್ನು ಸಂಘದಿಂದ ಕೈಗೊಳ್ಳಲಾಗಿದೆ. ಪುಷ್ಪಾರ್ಚನೆ ಮಾಡುವುದರ ಜೊತೆಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಆಗಮಿಸಿದ್ದ ಕಕ್ಷಿದಾರರು, ಸಾರ್ವಜನಿಕರಿಗೆ ಅನುಕೂಲವಾಗಿದೆ. ಈ ಮೂಲಕ ಮಹಾತ್ಮರ ಮೌಲ್ಯಗಳನ್ನು ಪ್ರಚಾರಪಡಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷೆ ಶುಭಾ ಕೆ.ಎಸ್‌., ಕಾರ್ಯದರ್ಶಿ ಎಚ್.ಎಚ್. ಲಿಂಗರಾಜ್‌, ಪದಾಧಿಕಾರಿಗಳಾದ ಸುರೇಶ್‌ ಕುಮಾರ್‌ ವೈ, ರಾಘವೇಂದ್ರ, ಪರಶುರಾಮ ಅಂಬೇಕರ್‌, ಆಂಜನೇಯ ಕಡೇಮನಿ ಇತರರಿದ್ದರು.

ದಾವಣಗೆರೆ: ಕಾಡಜ್ಜಿ (ದಾವಣಗೆರೆ ತಾಲ್ಲೂಕು) ಗ್ರಾಮದಲ್ಲಿ ಜ.30ರಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಮನೆಮಾಡಿದ್ದ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಗುರು ನಮನ ಸಲ್ಲಿಸಲಾಗುವುದು. ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ರಾತ್ರಿ 9ಗಂಟೆಗೆ ಭಜನೆ, ಗುರುವಾರ ಬೆಳಿಗ್ಗೆ 9ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಡಜ್ಜಿಯಲ್ಲಿ ಗುರು ನಮನ ಕಾರ್ಯಕ್ರಮ 
ದಾವಣಗೆರೆ:
ಕಾಡಜ್ಜಿ (ದಾವಣಗೆರೆ ತಾಲ್ಲೂಕು) ಗ್ರಾಮದಲ್ಲಿ ಜ.30ರಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಮನೆಮಾಡಿದ್ದ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಗುರು ನಮನ ಸಲ್ಲಿಸಲಾಗುವುದು. ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ರಾತ್ರಿ 9ಗಂಟೆಗೆ ಭಜನೆ, ಗುರುವಾರ ಬೆಳಿಗ್ಗೆ 9ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಕ್ಕರಗೊಳ್ಳದಲ್ಲಿಂದು ಶ್ರೀಗಳ ಭಾವಚಿತ್ರ ಮೆರವಣಿಗೆ
ದಾವಣಗೆರೆ:
ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಜ. 29ರಂದು ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಕೆ.ಪಿ. ಕಲ್ಲಿಂಗಪ್ಪ ತಿಳಿಸಿದ್ದಾರೆ.

Advertisement

ನಡೆದಾಡುವ ದೇವರು, ತ್ರಿವಿಧ ದಾಸೋಹಿಯಾಗಿ ಶಿಕ್ಷಣ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಕಾಣಿಕೆ ನೀಡಿರುವ ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರು ಜ.21ರಂದು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಸರ್ವರೂ ಸೇರಿ ಪುಣ್ಯಸ್ಮರಣೆ ಆಚರಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುಣ್ಯಸ್ಮರಣೆಯ ಅಂಗವಾಗಿ ಮಂಗಳವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ| ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಸರ್ವ ಧರ್ಮದವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಕ್ಕಪಕ್ಕದ ಆವರಗೊಳ್ಳ, ಕೋಡಿಹಳ್ಳಿ, ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ ಗ್ರಾಮಸ್ಥರು ಭಾಗವಹಿಸುವರು ಎಂದು ತಿಳಿಸಿದರು.

ಬೆಳಗ್ಗೆ 11ಕ್ಕೆ ಶ್ರೀ ವಿಘ್ನೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಡಾ| ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ವರ್ಷ ಅವರು ಲಿಂಗೈಕ್ಯರಾದ ಜ.21 ರಂದು ಪುಣ್ಯಸ್ಮರಣೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಪ್ರತಿ ವರ್ಷವೂ ಅವರ ಪುಣ್ಯಸ್ಮರಣೆ ಮಾಡುವ ಮೂಲಕ ಎಲ್ಲರಿಗೂ ಅವರ ಸೇವೆಯನ್ನು ತಿಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕಕ್ಕರಗೊಳ್ಳ ಗ್ರಾಮ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಜಿ. ವೀರೇಶ್‌, ಮುಖಂಡರಾದ ಎಂ. ಮಹೇಶ್ವರಪ್ಪ, ವೈ.ಎಸ್‌. ಪ್ರಸನ್ನಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next