Advertisement

Ranji Trophy;ಮಧ್ಯಪ್ರದೇಶ ಬೃಹತ್‌ ಮೊತ್ತ:ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ 91 ರನ್‌

12:52 AM Oct 14, 2024 | Team Udayavani |

ಇಂದೋರ್‌: ಇಲ್ಲಿನ ಹೋಳ್ಕರ್‌ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್‌ “ಸಿ’ ಬಣದ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮಧ್ಯಪ್ರದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಪೇರಿಸಿದೆ. ರವಿವಾರ 3ನೇ ದಿನದಾಟದ ಅಂತ್ಯಕ್ಕೆ ಮಧ್ಯಪ್ರದೇಶ 8 ವಿಕೆಟಿಗೆ 425 ರನ್‌ ಬಾರಿಸಿದೆ. ಸಂಜೆ ವೇಳೆ ಮಳೆ ಸುರಿದು ಪಂದ್ಯ ಕೆಲಕಾಲ ನಿಲುಗಡೆಯಾಗಿತ್ತು.

Advertisement

232 ರನ್ನಿನಿಂದ ದಿನದಾಟ ಆರಂಭಿಸಿದ ಮಧ್ಯಪ್ರದೇಶಕ್ಕೆ ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ ಸಿಂಗ್‌ ಭಾಟಿಯಾ 91, ರಜತ್‌ ಪಾಟೀದಾರ್‌ 31, ಸಾರಾಂಶ್‌ ಜೈನ್‌ 51 ರನ್‌ ಸೇರಿಸಿ ಆಧರಿಸಿದರು. ತಂಡ 8 ವಿಕೆಟಿಗೆ 425 ರನ್‌ ಪೇರಿಸಿದ್ದು, ಶುಭಂ, ಆವೇಶ್‌ ಖಾನ್‌ ಕ್ರೀಸ್‌ನಲ್ಲಿ ಉಳಿದಿದ್ದಾರೆ.

ಕರ್ನಾಟಕದ ವಾಸುಕಿ ಕೌಶಿಕ್‌, ವೈಶಾಖ್‌ ಮತ್ತು ಹಾರ್ದಿಕ್‌ ರಾಜ್‌ ತಲಾ 2 ವಿಕೆಟ್‌ ಪಡೆದರು. ಸೋಮವಾರ ಕೊನೆಯ ದಿನ ವಾಗಿದ್ದು ಕರ್ನಾಟಕ ಇನ್ನಷ್ಟೇ ಆಡಬೇಕಾಗಿದೆ. ಪಂದ್ಯದ ದ್ವಿತೀಯ ದಿನ ಹೊರಮೈದಾನ ಒದ್ದೆಯಾಗಿದ್ದರಿಂದ ಆಟ ನಡದಿರಲಿಲ್ಲ.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‌ 8 ವಿಕೆಟಿಗೆ 425 (ಶುಭಂ ಶರ್ಮ 143 ಬ್ಯಾಟಿಂಗ್‌, ಹರ್‌ಪ್ರೀತ್‌ 91).

Advertisement

Udayavani is now on Telegram. Click here to join our channel and stay updated with the latest news.

Next