ಲಂಡನ್: ಸ್ವಾತಂತ್ರ್ಯ ವೀರ ಸೇನಾನಿ ಸುಭಾಷ್ ಚಂದ್ರ ಬೋಸರ ಜಯಂತಿಯನ್ನು ಭಾರತ ಸರಕಾರ “ಪರಾಕ್ರಮ ದಿನ’ವಾಗಿ ಆಚ ರಿಸುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್‌ನ ಲಂಡನ್‌ನಲ್ಲಿರುವ ಭಾರ ತೀಯ ಹೈಕಮಿಷನ್ ಕಚೇರಿಯಲ್ಲಿ ವಿಶೇಷ ಚಿತ್ರ ಪ್ರದರ್ಶನದ ಮೂಲಕ ನೇತಾಜಿ ಅವರಿಗೆ ಗೌರವ ಸಲ್ಲಿಸಲಾಯಿತು.
ಇಂಡಿಯಾ ಹೌಸ್‌ನ ಗಾಂಧಿ ಹಾಲ್‌ನಲ್ಲಿ “ಸಂಗ್ರಾಮ್’ ಹೆಸರಿನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಚಿತ್ರ ಪ್ರದರ್ಶನದಲ್ಲಿ ವಿಶ್ವದ ವಿವಿಧೆಡೆ ಇರುವ ಭಾರತೀಯ ಮೂಲದವರು ರಚಿಸಿರುವ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರಿಗಳ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನವನ್ನು ಬ್ರಿಟನ್‌ಗೆ ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಉದ್ಘಾಟಿಸಿದರು. ಇದೇ ವೇಳೆ ಬ್ರಿಟನ್‌ನಲ್ಲಿ ನೆಲೆಸಿರುವ ಬಂಗಾಲಿ ಸಮುದಾಯ ನೇತಾಜಿ ಅವರಿಗೆ ಗೌರವ ನಮನ ಸಲ್ಲಿಸಿತು.