Advertisement

ಪರಿಹಾರದ ಹಣ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ : ಡಾ.ರಂಗನಾಥ್

08:15 PM Dec 18, 2021 | Team Udayavani |

ಕುಣಿಗಲ್ : ಪರಿಹಾರದ ಹಣವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಕೊಳ್ಳಬೇಕು, ಮಕ್ಕಳು ಮರಿ, ಸಂಬAಧಿಕರು ಸ್ನೇಹಿತರಿಗೆ ಕೊಟ್ಟು ಹಾಳಾಗಬೇಡಿ ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ತಿಳಿಸಿದರು.

Advertisement

ತಾಲೂಕು ಆಡಳಿತ ಶನಿವಾರ ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ೧೯ ವೈರಾಣ್‌ನಿಂದ ಮೃತ ವ್ಯಕ್ತಿಗಳ ವಾರಸುದಾರರಿಗೆ ಹಾಗೂ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.

ಕೊರೊನಾ ಹಾಗೂ ಲಾಕ್‌ಡೌನ್ ನಿಂದ ಜನರು ಆನೇಕ ಸಮಸ್ಯೆಗಳು ಎದರಿಸಿದರು, ಯುವ ಜನಾಂಗ, ವಯೋವೃದ್ದರು ಸೇರಿದಂತೆ ತಾಲೂಕಿನಲ್ಲಿ ಸುಮಾರು ೩೦೦ ಜನರು ಮೃತಪಟ್ಟರು, ಇವರಲ್ಲಿ ಕೆಲ ರೋಗಿಗಳು ನನ್ನ ಕಣ್ಣ ಮುಂದೆಯೇ ಸಾವನ್ನಪ್ಪಿದನ್ನು ಇದನ್ನು ನೋಡಿ ನನ್ನ ಮನಸ್ಸಿಗೆ ಅತ್ಯಂತ ನೋವು ಉಂಟಾಯಿತು, ನಾನೋಬ್ಬ ವೈದ್ಯನಾಗಿದ್ದೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಹೇಗಾದರೂ ಮಾಡಿ ರೋಗಿಗಳ ಪ್ರಾಣ ಉಳಿಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದೆ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ, ಈ ನಿಟ್ಟಿನಲ್ಲಿ ನಾನು ಮತ್ತು ಸಂಸದ ಡಿ.ಕೆ.ಸುರೇಶ್ ಸ್ನೇಹಿತ ಸಹಕಾರ ಹಾಗೂ ನಮ್ಮ ಸ್ವಂತಿಕೆಯ ಹಣ ಖರ್ಚು ಮಾಡಿ ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಸ್ಯಾನಿಟೈಜರ್, ಮಾಸ್ಕ್, ಹೆಲ್ತ್ ಕಿಟ್, ಖಾಸಗಿ ಆಸ್ಪತ್ರೆ ಸಹಕಾರಿಂದ ಆಕ್ಸಿಜರ್ ಬೆಡ್‌ಗಳ ಸ್ಥಾಪನೆ ಹಾಗೂ ಬೆಂಗಳೂರು, ತುಮಕೂರು ಸೇರಿದಂತೆ ಇತರೆಡೆಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಆರೋಗ್ಯ ಸೌಲಭ್ಯವನ್ನು ಕಲ್ಪಿಸಿಕೊಟ್ಟೇವು ಎಂದು ಹೇಳಿದರು.

ಆಹಾರ ಧಾನ್ಯ ವಿತರಣೆ : ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಸುಮಾರು ಮೂರು ತಿಂಗಳ ಕಾಲ ಲಾಕ್ ಡೌನ್ ಮಾಡಿತ್ತು ಇದರಿಂದ ರೈತರು ಬೆಳೆದ ಆಹಾರ ಪದಾರ್ಥಗಳು ಮಾರಾಟ ಮಾಡದೇ ರೈತರು ಸಂಕಷ್ಟಕ್ಕೆ ಸಿಲುಕಿದರೂ ಇತ್ತಾ ವ್ಯಾಪಾರ ವಹಿವಾಟು ಇಲ್ಲದೆ, ಸಣ್ಣ ಪುಟ್ಟ ವ್ಯಾಪಾರಸ್ಥರು ಹಾಗೂ ಬಡ ವರ್ಗದ ಜನರು ಆಹಾರ ಕೊರತೆ ಸಮಸ್ಯೆ ಎದರಿಸುತ್ತಿದ್ದರು ಸಮಸ್ಯೆಯನ್ನು ಅರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಡಿ.ಕೆ.ಚಾರಿಟಬಲ್ ಟ್ರಸ್ಟ್ ವತಿಯಿಂದ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಜೋತೆಗೆ ಅಕ್ಕಿ, ಸಕ್ಕರೆ, ಬೆಲ್ಲ, ಅಡಿಗೆ ಎಣ್ಣೆ, ಗೋಡಿ ಇಟ್ಟು, ಬೇಳೆ ಸೇರಿದಂತೆ ಆಹಾರ ಪದಾರ್ಥವನ್ನು ಸುಮಾರು ೭೦ ಸಾವಿರ ಕುಟುಂಬಗಳಿವೆ ವಿತರಿಸಿ ಬಡವರ ನೋವಿಗೆ ಸ್ಪಂಧಿಸಿದೆವು ಎಂದು ತಿಳಿಸಿದರು.

ಪರಿಹಾರ ವಿತರಣೆ : ಕೋವಿಡ್‌ನಿಂದ ತಾಲೂಕಿನಲ್ಲಿ 300 ಅಧಿಕ ಮಂದಿ ಸಾವನಪ್ಪಿದ್ದಾರೆ ಆದರೇ ಸರ್ಕಾರದ ಲೆಕ್ಕದಲ್ಲಿ 300 ಜನ ಸೇರ್ಪಡೆಯಾಗಿಲ್ಲ, ಹೀಗಾಗಿ 30 ಜನರಿಗೆ ತಲಾ ಒಂದು ಲಕ್ಷ ರೂ ನಂತೆ 30 ಲಕ್ಷ ರೂಗಳು ಮೊದಲನೇ ಕಂತಿನಲ್ಲಿ ಚೆಕ್ ನೀಡಲಾಗುತ್ತಿದೆ, ಉಳಿದ ಮೃತರ ಬಗ್ಗೆ ತಾಂತ್ರಿಕದೋಷದಿಂದ ನೀಡಲಾಗಿಲ್ಲ ಮುಂದಿನ ದಿನದಲ್ಲಿ ಇದನ್ನು ಸರಿಪಡಿಸಿ ಉಳಿದ ಮೃತ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ಕೊಡಿಸಲು ಸರ್ಕಾರದೊಂದಿಗೆ ಮಾತು ಕತೆ ನೆಡೆಸಿ ಕೊಡಿಸುವುದ್ದಾಗಿ ಭರವಸೆ ನೀಡಿದ ಶಾಸಕರು ಈ ಭಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ತಾಲೂಕಿನಲ್ಲಿ ಸುಮಾರು ೯೮ ಮನೆಗಳು ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಹೀಗಾಗಿ ಮೊಲದ ಹಂತದಲ್ಲಿ ಮನೆ ಕಳೆದು ಕೊಂಡ ಕುಟುಂಬಗಳಿಗೆ 50 ಸಾವಿರ ರೂನಂತೆ 56 ಮನೆಗಳಿಗೆ 28 ಲಕ್ಷ ರೂ ನೀಡಲಾಗಿದೆ, ಉಳಿದ ಮನೆಗಳಿಗೆ ಎರಡನೇ ಕಂತಿನಲ್ಲಿ ನೀಡಲಾಗುವುದು ಈ ಹಣವನ್ನು ಸದ್ಬಳಕ್ಕೆ ಮಡಿಕೊಳ್ಳುವಂತೆ ತಿಳಿಸಿದರು.

Advertisement

ಅಭಿನಂದನೆ : ಮಳೆ ಹಾನಿಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳ ಹಾಗೂ ಕೋವಿಡ್‌ನಲ್ಲಿ ಮೃತಪಟ್ಟ ವ್ಯಕ್ತಿಗಳ ಸಂಬAಧಿಕರಿಗೆ ಪರಿಹಾರ ಹಣ ವ್ಯವಸ್ಥೆ ಮಾಡುವಲ್ಲಿ ತಾಲೂಕು ತಹಶೀಲ್ದಾರ್ ಮಹಬಲೇಶ್ವರ ಹಾಗೂ ಅವರ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿದೆ ಈಗಾಗಿ ತಾಲೂಕು ಆಡಳಿತಕ್ಕೆ ಶಾಸಕರು ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next