Advertisement

ಡಾ|ಎಂ.ಎನ್‌. ರಾಜೇಂದ್ರ ಕುಮಾರ್‌ಗೆ ಅಂ.ರಾ.ಅವಾರ್ಡ್‌

11:00 PM Dec 28, 2019 | Team Udayavani |

ಮಂಗಳೂರು: ಇನ್‌ಸ್ಟಿಟ್ಯೂಟ್‌ ಆಫ್‌ ಎಕನಾಮಿಕ್‌ ಸ್ಟಡೀಸ್‌ ಹೊಸದಿಲ್ಲಿ ವತಿಯಿಂದ ನಡೆದ ಇಂಡೋ-ಶ್ರೀಲಂಕಾ ಎಕನಾಮಿಕ್‌ ಕೋ-ಆಪರೇಶನ್‌ ಕಾನ್ಫರೆನ್ಸ್‌ನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಡಾ|ಎಂ ಎನ್‌.ರಾಜೇಂದ್ರ ಕುಮಾರ್‌ ಅವರಿಗೆ ಇಂಟರ್‌ನ್ಯಾಶನಲ್‌ ಲೀಡರ್‌ಶಿಪ್‌ ಇನ್ನೋವೇಶನ್‌ ಎಕ್ಸಲೆನ್ಸ್‌ ಅವಾರ್ಡ್‌-2019 ಪ್ರಶಸ್ತಿಯನ್ನು ಶ್ರೀಲಂಕಾದಲ್ಲಿ ಪ್ರದಾನ ಮಾಡಲಾಯಿತು.

Advertisement

ಶ್ರೀಲಂಕಾ ವಿದೇಶಾಂಗ ಸಚಿವ ದಿನೇಶ್‌ ಗುಣವರ್ಧನ ಮತ್ತು ಫ್ರಾನ್ಸ್‌ ಮಿಂಡಾನಾವೊದ ಅಂತಾರಾಷ್ಟ್ರೀಯ ರಾಜಕುಮಾರಿ ಇಸಾಬೆಲ್ಲೆ ಲಾರ್ಗ್‌ ಅವರಿಂದ ಡಾ|ರಾಜೇಂದ್ರ ಕುಮಾರ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಸಹಕಾರ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಡಾ|ಎಂ.ಎನ್‌. ಅವರು ಸತತ 25 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತರುವುದರ ಜೊತೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ.

ಶ್ರೀಲಂಕಾದ ಹೈ ಕಮಿಷನರ್‌ ತರುಣ್‌ ಜಿತ್‌ ಸಿಂಗ್‌ ಸಂಧು, ತಮಿಳುನಾಡು ಸರಕಾರದ ಸಹಕಾರ ಸಚಿವ ಸೆಲ್ಲೂರು ಕೆ.ರಾಜು, ಶ್ರೀಲಂಕಾದ ಸಾಂಸ್ಕೃತಿಕ ಮತ್ತು ಹೌಸಿಂಗ್‌ ಇಲಾಖೆಯ ನಿರ್ದೇಶಕಿ ಅನುಶಾ ಗೋಕುಲಾ ಫೆರ್ನಾಂಡೋ, ಯುಎಸ್‌ಎ ಬ್ರ್ಯಾಂಡ್‌ ಅಂಬಾಸಡರ್‌ ಡಾ| ಹರಿಕೃಷ್ಣ ಮಾರನ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next