Advertisement
ಜೈಪುರದಲ್ಲಿ ನಡೆದ ನ್ಯಾಶನಲ್ ಕೋ-ಆಪರೇಟಿವ್ ಬ್ಯಾಂಕುಗಳ ಸಮಾವೇಶದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಪುಣೆ ಕೋ- ಆಪರೇಟಿವ್ ಫೆಡರೇಶನ್ ಅಧ್ಯಕ್ಷೆ ಶೋಭಾ ತಾç ಅವರಿಂದ ಸ್ವೀಕರಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರದ್ದು. ಬ್ಯಾಂಕ್ ತನ್ನ 102 ಶಾಖೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುತ್ತಿದೆ. ಸಹಕಾರಿ ಸ್ವಾಮ್ಯದ ಎಸ್‌ಸಿಡಿಸಿಸಿ ಬ್ಯಾಂಕನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನಾಗಿ ರೂಪುಗೊಳಿಸಿದ ಡಾ| ರಾಜೇಂದ್ರ ಕುಮಾರ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವರು. ಕೋ-ಆಪರೇಟಿವ್ ಬ್ಯಾಂಕ್ ಅಸೋಸಿಯೇಷನ್ ಸೋಲಾಪುರದ ಅಧ್ಯಕ್ಷ ರಾಜಗೋಪಾಲ್, ಆದರ್ಶ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದನ್‌ಗೊàಪಾಲ್ ಸ್ವಾಮಿ, ಮಾಸ್ಟರ್ ಕಾರ್ಡ್ ಇಂಡಿಯಾದ ಮ್ಯಾನೇಜಿಂಗ್ ನಿರ್ದೇಶಕ ಮನೋಜ್ ಅಗ್ರವಾಲ್ ಮತ್ತು ಬ್ಯಾಂಕಿಂಗ್ ಫ್ರೊಂಟಿಯರ್ ಮ್ಯಾಗಜಿನ್‌ನ ಪ್ರಕಾಶಕ ಬಾಬು ನಾಯರ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Related Articles
ದ.ಕ. ಜಿ. ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಸ್ಕಾ éಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಟೀಚರ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಕೆ.ಸಿ. ರಾಜೇಶ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement