ಮಹದೇವಪುರ: ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದರೆ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ರೋಗಶಾಸ್ತ್ರ ಶಸ್ತ್ರಕ್ರಿಯಾ ಸಲಹಾತಜ್ಞ ಡಾ. ರಾಜಶೇಖರ್ ಸಿ.ಜಾಕಾ ಅಭಿಪ್ರಾಯ ಪಟ್ಟರು.
ವೈಟ್ ಫೀಲ್ಡ್ ಸಮೀಪವಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಗಳ ಪ್ರಗತ್ಯಾತ್ಮಕ ಚಿಕಿತ್ಸಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಐಸಿಎಂಅರ್ ನ ಇತ್ತಿಚೀನ ಸಮೀಕ್ಷೆ ಪ್ರಕಾರ 9ರಲ್ಲಿ ಒಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. 2020ರಿಂದ 2025ರ ಹೊತ್ತಿಗೆ ಈ ಪ್ರಕರಣಗಳು ಶೇ.12.8ರಷ್ಟು ಹೆಚ್ಚಾಗಬಹುದು ೪೦ ರಿಂದ ೬೪ ವಯಸ್ಸಿನವರಲ್ಲಿ ಬಹುತೇಕ ಪ್ರಕರಣಗಳು ಹೆಚ್ಚಾಗಬಹುದು ಎಂದು ತಿಳಿಸಿದರು.
ಪುರುಷರಲ್ಲಿ ಶ್ವಾಸಕೋಶ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.
ನಮ್ಮ ಅಹಾರ ಪದ್ದತಿ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಹಾಗೂ ಸಿರಿಧಾನ್ಯಗಳ ಸೇವನೆ ಹಾಗೂ ಪ್ರತಿನಿತ್ಯ ೩ರಿಂದ ೪ ಕಿಲೋ ಮೀಟರ್ ನಡಿಗೆ ,ಮತ್ತು ಧೂಮಪಾನ, ಮದ್ಯಪಾನ ಸೇವನೆ ಮಾಡದಿರುವುದರಿಂದ ಶೇಕಡಾ ೩೦ ರಷ್ಟು ಕ್ಯಾನ್ಸರ್ ಕಾಯಿಲೆ ಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಮಣಿಪಾಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವಿಧಾನಗಳಿಂದ ಹಾಗೂ ರೊಬೋಟಿಕ್ ಮೂಲಕ ಚಿಕಿತ್ಸೆ ಕಲ್ಪಿಸಲಾಗುವುದು ಇದರಿಂದ ರೋಗಿಗಳು ಜೀವ ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.