ಸುಳ್ಯ: ಜಾನಪದ ಕ್ಷೇತ್ರದ ಬೆಳವಣಿಗೆ ಹಾಗೂ ಪ್ರಚಾರಕ್ಕೆ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಕಣ್ಣೂರು ಹೇಳಿದರು.
ಬೆಳ್ಳಾರೆ ಸನಿಹದ ಪೆರುವಾಜೆಯ ಆಂಜನೇಯ ಕೃಪಾ ನಿವಾಸದಲ್ಲಿ ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡಿದ ಗೌರವ ಪ್ರಶಸ್ತಿ ಡಾ| ಬಿ.ಎಸ್. ಗದಗೀ ಮಠ ತಜ್ಞ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಜಾನಪದ ಅಕಾಡೆಮಿ ಸದಸ್ಯ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಕರ್ನಾಟಕದ ಪ್ರಥಮ ಶಾಸನ ಆದ ಹಲಿ¾ಡಿ ಶಾಸನದ ಓಲೆ ಗರಿ ಗ್ರಂಥ ನಕಲನ್ನು ಪಾಲ್ತಾಡಿ ಅವರಿಗೆ ನೀಡಿ ಮಾತನಾಡಿ, ಪಾಲ್ತಾಡಿ ಅವರು ಜನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪ್ರಶಂಸಿಸಿದರು. ಕನ್ನಡದ ಲಿಪಿ ಶಿಲ್ಪಿ ಅತ್ತಾವರ ಅನಂತಾಚಾರ್ಯರ ಬಗ್ಗೆ ಸಂಶೋಧನೆ ಮಾಡಿ ಗ್ರಂಥ ರಚನೆ ಮಾಡಿದ ಏಕೈಕ ವ್ಯಕ್ತಿ ಇವರು ಎಂದು ಶ್ಲಾ ಸಿದರು.
ಗೌರವ ಪ್ರಶಸ್ತಿಯು 50,000 ರೂ. ನಗದು ಒಳಗೊಂಡಿದೆ.
ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಪತ್ನಿ ಸುಮಾ ಆರ್. ಆಚಾರ್, ಸಹ ಪ್ರಾಧ್ಯಾಪಕಿ ಸುಪ್ರಿಯಾ ಪಿ.ಆರ್., ಸಹ ಪ್ರಾಧ್ಯಾಪಕ ಕಾಂತರಾಜು, ನಿಶ್ವನ ಹಾಗೂ ಅವಲೋಕಿತ ಉಪಸ್ಥಿತರಿದ್ದರು. ಪುತ್ತೂರು ತುಳು ಕೂಟದ ಅಧ್ಯಕ್ಷ ವಿಜಯಕುಮಾರ ಭಂಡಾರಿ ಹೆಬ್ಟಾರಬೈಲು ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಸಿದ್ರಾಮ ಶಿಂಧೆ ವಂದಿಸಿದರು. ಸಹಾಯಕ ಎಚ್. ಪ್ರಕಾಶ್ ನಿರೂಪಿಸಿದರು.