Advertisement

ಡಾ|ಸಿಂಗ್‌ ಬಯಸಿದರಷ್ಟೇ ಪ್ರದರ್ಶನ: ನಟ ಖೇರ್‌

12:30 AM Dec 30, 2018 | |

ಹೊಸದಿಲ್ಲಿ: “ದ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರವನ್ನು ಬಿಡುಗಡೆಗೂ ಮುನ್ನ ತಮಗೆ ತೋರಿಸಬೇಕೆಂದು ಮಾಜಿ ಪ್ರಧಾನಿ
ಡಾ| ಮನಮೋಹನ್‌ ಸಿಂಗ್‌ ಆಗ್ರಹಿಸಿದರೆ ಮಾತ್ರವೇ, ಅವರಿಗೆ ವಿಶೇಷ ಪ್ರದರ್ಶನ ಏರ್ಪಡಿಸುತ್ತೇವೆ. ಅವರನ್ನು ಬಿಟ್ಟು ಬೇರ್ಯಾರಿಗೂ ಅಂಥ ಕೋರಿಕೆ ಸಲ್ಲಿಸುವ ಅಧಿಕಾರವಿಲ್ಲ ಎಂದು ಹಿರಿಯ ನಟ ಅನುಪಮ್‌ ಖೇರ್‌ ತಿಳಿಸಿದ್ದಾರೆ. 

Advertisement

ಚಿತ್ರದ ಬಿಡುಗಡೆಗೂ ಮುನ್ನ ತಮಗಾಗಿ ಚಿತ್ರದ ಪ್ರೀಮಿಯರ್‌ ಶೋ ಏರ್ಪಡಿಸ ಬೇಕೆಂದು ಮಹಾರಾಷ್ಟ್ರದ ಯುವ ಕಾಂಗ್ರೆಸ್‌ ಮಂಡಿಸಿರುವ ಬೇಡಿಕೆಗೆ ತುಸು ಖಾರ ವಾಗಿಯೇ ಪ್ರತಿಕ್ರಿಯಿಸಿರುವ ಖೇರ್‌, ಒಮ್ಮೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ ದೊರೆತಾದ ಮೇಲೆ ಯಾರಾರಿಗೋ ಚಿತ್ರ ವನ್ನು ನಾವೇಕೆ ತೋರಿಸಬೇಕು? ಇದು ಪುಸ್ತಕ ಆಧಾರಿತ ಚಿತ್ರ. ಆ ಪುಸ್ತಕ ನೈಜ ಘಟನೆಗಳ ಆಧಾರಿತ. ಹಾಗಿರುವಾಗ ವಿವಾದ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಸಲುವಾಗಿ ಚಿತ್ರದ ಪರ ನಿಂತಿದ್ದಾರೆ ಎಂಬ ಆರೋಪಗಳನ್ನು ಖೇರ್‌ ತಳ್ಳಿಹಾಕಿದ್ದು, ಚುನಾವಣೆ ಹೊಸ್ತಿಲಲ್ಲೇ ಚಿತ್ರ ಬಿಡುಗಡೆ ಮಾಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಚಿತ್ರ ನಿರ್ಮಾಪಕರ ನಡೆಯನ್ನು ಸಮರ್ಥಿಸಿ ಕೊಂಡಿದ್ದಾರೆ.

ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನೆಮಾವು ಒಂದು ಗಿಮಿಕ್‌ ಅಷ್ಟೆ. ಇಂಥ ಸಿನಿಮಾಗಳಿ ಗಾಗಿ ಆಡಳಿತಾರೂಢ ಬಿಜೆಪಿ ಹಣವನ್ನು ದುರ್ಬಳಕೆ ಮಾಡುತ್ತಿದೆ. ಅವರಿಗೇನು ಬೇಕೋ ಅದನ್ನು ಮಾಡಿಕೊಳ್ಳಲಿ. ಅಂಥ ಸಿನೆಮಾ ಬರುತ್ತದೆ, ಹೋಗುತ್ತದೆ. ಅದರ ಬಗ್ಗೆ ಕಮೆಂಟ್‌ ಮಾಡಲು ನಾವು ಇಚ್ಛಿಸುವುದಿಲ್ಲ.
ಅಹ್ಮದ್‌ ಪಟೇಲ್‌, ಕಾಂಗ್ರೆಸ್‌ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next