ಚಿಕ್ಕಬಳ್ಳಾಪುರ : ಅಖಂಡ ಕೋಲಾರ ಜಿಲ್ಲೆಯಿಂದ ಪ್ರತ್ಯೇಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ ಬಳಿಕ ನೆನೆಗುದಿದೆ ಬಿದ್ದಿದ್ದ ಜಿಲ್ಲಾ ಹಾಲು ಒಕ್ಕೂಟವನ್ನು ಪ್ರತ್ಯೇಕ ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಸಕ್ತಿವಹಿಸಿದ್ದಾರೆ ಅದಕ್ಕೆ ವಿರೋಧಿಸಲು ನಂಜೇಗೌಡ್ರೂ ಯಾರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ಹಾಲಿನ ಒಕ್ಕೂಟ ಆಗಬೇಕೆಂಬ ಸುಮಾರು ವರ್ಷಗಳ ಬೇಡಿಕೆ ಮತ್ತು ಕನಸು ನನಸು ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಶೇಷ ಕಾಳಜಿ ಮತ್ತು ಆಸಕ್ತಿವಹಿಸಿದ್ದಾರೆ ಇಂತಹ ಸಂದರ್ಭದಲ್ಲಿ ಜಿಲ್ಲೆಗೆ ಪ್ರತ್ಯೇಕವಾಗಿ ಒಕ್ಕೂಟವಾದರೆ ಹಾಲು ಉತ್ಪಾದಕರಿಗೆ ತೊಂದರೆಯಾಗುತ್ತದೆ ಅದಕ್ಕಾಗಿ ಸಿಎಂ-ಸಹಕಾರ ಸಚಿವರ ಬಳಿ ನಿಯೋಗ ಹೋಗುತ್ತೇವೆ ಎಂದಿರುವ ನಂಜೇಗೌಡ್ರೂ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸೆ:16 ರ ಮುಷ್ಕರದ ಭಾಗವಾಗಿ ಕಾರ್ಮಿಕರಿಂದ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ
ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರತ್ಯೇಕವಾಗಿ ಹಾಲು ಒಕ್ಕೂಟವನ್ನು ಬೇಕೆಂದು ಜಿಲ್ಲೆಯ ಜನರ ಆಸೆ ಮತ್ತು ಕನಸು ಆಗಿದೆ ಸುಮಾರು ವರ್ಷಗಳಿಂದ ನೆನೆಗುದಿಗೆ ಬೇಡಿಕೆಗೆ ಸಿಎಂ ಮರುಜೀವ ನೀಡಲು ಮುಂದಾಗಿದ್ದಾರೆ ಅಂತಹದರಲ್ಲಿ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ಆದರೇ ಹಾಲು ಉತ್ಪಾದಕರಿಗೆ ತೊಂದರೆ ಆಗುತ್ತಿದೆ ಅದಕ್ಕಾಗಿ ಸಿಎಂ ಬಳಿ ನಿಯೋಗ ಹೋಗುವುದಾಗಿ ಕೆಲವರು ಹೇಳಿದ್ದಾರೆ ಸಿಎಂ ಬಳಿ ತೆರಳಲು ಸ್ವಾತಂತ್ರ್ಯರಿದ್ದಾರೆ ಅವರು ಯಾರು ಎಲ್ಲಿಗೆ ಬೇಕಾದರೂ ನಿಯೋಗ ಹೋಗಲಿ ಎಲ್ಲರು ಸ್ವಾತಂತ್ರ್ಯ ಇದ್ದಾರೆ ಹೋಗಲಿ ಯಾಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಆಗಬಾರದೆಂದು ಹೋಗುತ್ತಾರೆ ಜಿಲ್ಲೆಯ ಜನತೆಗೆ ಆಗಬೇಕೆಂದು ಇದೇ ಯಾರು ರೀ ಅವರು ನಂಜೇಗೌಡ್ರು ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್,ನಗರಸಭೆಯ ಅಧ್ಯಕ್ಷ ಡಿ.ಎಸ್.ಆನಂದ್‍ರೆಡ್ಡಿ(ಬಾಬು) ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಒಪೆಕ್, ಒಪೆಕ್+ ನಾಳೆ ಸಭೆ : ತೈಲೋತ್ಪನ್ನ ಹೆಚ್ಚಳಕ್ಕೆ ನಿರ್ಧಾರ..?