Advertisement

ಡಾ|ಜೋಶಿ ಕಾರ್ಯ ಶ್ಲಾಘನೀಯ

03:06 PM Feb 28, 2017 | |

ಹುಬ್ಬಳ್ಳಿ: ಬಡಜನರಿಗೆ ಉಚಿತವಾಗಿ ನೇತ್ರ ತಪಾಸಣೆ-ಶಸ್ತ್ರಚಿಕಿತ್ಸೆ ಮಾಡುತ್ತಿರುವ ಡಾ| ಎಂ.ಎಂ.ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ರಾಜ್ಯ ಸಚಿವ ಫ‌ಗ್ಗನ್‌ಸಿಂಗ್‌ ಕುಲಾಸ್ತೆ ಹೇಳಿದರು. 

Advertisement

ಡಾ| ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸುವರ್ಣ ಮಹೋತ್ಸವ ಪ್ರಯುಕ್ತ ಗೋಕುಲ ಗಾರ್ಡನ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು 1,80,000 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿರುವುದು ಅದ್ಭುತ ದಾಖಲೆಯಾಗಿದೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಡಾ| ಎಂ.ಎಂ. ಜೋಶಿಯವರು ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಬಡ ಜನರಿಗೆ ಉಚಿತ-ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ| ಎಂ.ಎಂ. ಜೋಶಿ ಮಾತನಾಡಿ, ಬಡವರ ಸೇವೆಯೇ ಜನಾರ್ಧನ ಸೇವೆ ಎಂಬುದು ನನ್ನ ನಂಬಿಕೆ ಎಂದರು. 

ಡಾ| ಶ್ರೀನಿವಾಸ ಜೋಶಿ ಸಂಸ್ಥೆಯ ಪ್ರಗತಿ ಪಥ ಅವಲೋಕಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಆರ್‌ಎಸ್‌ಎಸ್‌ ಅಖೀಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ, ಡಾ| ಕೃಷ್ಣಪ್ರಸಾದ, ಡಾ| ಗುರುಪ್ರಸಾದ, ಡಾ| ಸತ್ಯಮೂರ್ತಿ, ಡಾ| ಉದಪುಡಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next