ಬಾಗಲಕೋಟೆ: ಡಾ. ಗಿರಡ್ಡಿ ಕನ್ನಡದ ಶ್ರೇಷ್ಠ ವಿಮರ್ಶಕ, ಕಥೆಗಾರ, ಸಮನ್ವಯ ತೂಕದ ಈ ನೆಲದ ವಿಮರ್ಶಕ, ಅತ್ಯುತ್ತಮ ಪ್ರಾಧ್ಯಾಪಕರಾಗಿದ್ದವರು. ಅನೇಕ ಬಾರಿ ಬಿವಿವಿ ಸಂಘದ ವಿವಿಧ ಕಾಲೇಜುಗಳ ಸಾಹಿತ್ಯ ಕಾರ್ಯಕ್ರಮಕ್ಕೆ ನಿರಂತರವಾಗಿ ಆಗಮಿಸಿ ‘ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರ’ದಲ್ಲಿ ಉಪನ್ಯಾಸ ನೀಡುತ್ತಿದ್ದುದು ಇಂದಿಗೂ ಸದಸ್ಯರಲ್ಲಿ, ಪ್ರಾಧ್ಯಾಪಕರಲ್ಲಿ ಹಚ್ಚು ಹಸಿರಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ
ಹೇಳಿದ್ದಾರೆ.
ಡಾ|ಗಿರಡ್ಡಿಯವರ ಅಗಲಿಕೆ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ. ಬಿವಿವಿ ಸಂಘದ ಬಗ್ಗೆ ಅಭಿಮಾನ ಹೊಂದಿದ್ದ ಇವರ ಅಗಲಿಕೆ ದುಃಖ ತಂದಿದೆ ಎಂದು ತಿಳಿಸಿದ್ದಾರೆ.
ಡಾ|ಗಿರಡ್ಡಿ ಗೋವಿಂದರಾಜ ಅವರ ನಿಧನಕ್ಕೆ ಡಾ|ವೀರಣ್ಣ ಚರಂತಿಮಠ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ವೈದ್ಯಕೀಯ ಮಹಾವಿದ್ಯಾಲಯಗಳ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಆಡಳಿತಾಧಿ ಕಾರಿ ಎನ್.ಜಿ. ಕರೂರ ಹಾಗೂ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.