ತುಮಕೂರು: ಖಾತೆ ಬದಲಾವಣೆ ಮಾಡಿರುವುದ ರಿಂದ ಗೊಂದಲ ಉಂಟಾಗಿರುವುದು ನಿಜ. ಆದರೆ, ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ನಗರದಲ್ಲಿ ಮಂಗಳವಾರ ಸಂಜೆ ದೊಡ್ಡ ಮನೆ ನರ್ಸಿಂಗ್ ಹೋಂನಲ್ಲಿ ನೂತನ ವಾಗಿ ಸ್ಥಾಪಿಸಲಾಗಿ ರುವ ಕೀಲು ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿ ದರು.
ಖಾತೆ ಬದಲಾವಣೆಯಿಂದ ಉಂಟಾ ಗಿರುವ ಗೊಂದಲ ಬಗೆಹರಿಯುತ್ತದೆ. ಮುಖ್ಯಮಂತ್ರಿಗಳು ಎಲ್ಲ ರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಸರ್ಕಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ, ಖಾತೆ ಮುನಿಸಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಜಾರಿಗೆ ತಂದಿರುವ ರೈತಪರ ಕಾಯ್ದೆ ಎನ್ನುವ ಉದ್ದೇಶದೊಂದಿಗೆ ಕೆಲವರು ಮುಂದಾಗಿ ದ್ದಾರೆ. ಗಣರಾಜ್ಯೋತ್ಸವದಂತಹ ಮಹತ್ವದ ದಿನದಂದು ರೈತ ಸಂಘಟನೆಗಳು ಹಿಂಸಾ ಚಾರಕ್ಕೆ ಇಳಿಯಬಾರದಿತ್ತು. ಇದು ಕಪ್ಪು ಚುಕ್ಕೆ ಎಂದರು.
ಇದನ್ನೂ ಓದಿ:ಚುನಾವಣೆ ಗೆಲ್ಲಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ: ಶ್ರೀರಾಮುಲು ವಾಗ್ದಾಳಿ
ಜನರಿಗೆ ಉತ್ತಮ ಸೇವೆ: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ದೊಡ್ಡಮನೆ ನರ್ಸಿಂಗ್ ಹೋಂ ಮುಂದಾಗಿದ್ದು, 50 ವರ್ಷ ವೈದ್ಯ ಸೇವೆ ಸಲ್ಲಿಸಿರುವ ಡಾ.ಹನುಮಕ್ಕ ಅವರ ಸೇವೆ ಅನನ್ಯ ಎಂದರು. ದೊಡ್ಡಮನೆ ನರ್ಸಿಂಗ್ ಹೋಂ ಉದ್ಘಾಟನೆ ಗೊಂಡು 26 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸ ದಾಗಿ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದ್ದು ಮಾ.31ರವರೆಗೆ ಉಚಿತ ತಪಾಸಣೆ ಹಮ್ಮಿಕೊಳ್ಳಲಾ ಗಿದೆ. ಸಾರ್ವಜನಿಕರು ಉಪಯೋಗ ಪಡಿಸಿಕೊಳ್ಳಬೇಕು ಎಂದು ಡಾ.ಕೆ. ವಿಜಯಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಸಿಗುತ್ತಿದ್ದ ಟ್ರೋಮಾ ಚಿಕಿತ್ಸೆಯನ್ನು ತುಮಕೂರಿನಲ್ಲಿ ಕಡಿಮೆ ದರದಲ್ಲಿ ನೀಡುವ ದೃಷ್ಟಿಯಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಡಾ.ಹನುಮಕ್ಕ, ಡಾ.ವಿಜಯ ಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕೃಷ್ಣಪ್ಪ, ಜಯಲಕ್ಷ್ಮಿ, ಐಶ್ವರ್ಯ ದೊಡ್ಡಮನೆ, ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಸುರೇಶ್‌ಗೌಡ, ವಿದ್ಯೋದಯ ಕಾನೂನು ಕಾಲೇಜಿನ ಮುಖ್ಯಸ್ಥ ಶೇಷಾದ್ರಿ, ಆಡಿಟರ್ ರಾಮಚಂದ್ರಪ್ಪ, ಬೋರೇ ಗೌಡ, ಮುರುಗಪ್ಪ ಇದ್ದರು.