ಗಂಗಾವತಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮ ಸಮಾಜದ ಕನಸು ಕಂಡು ಸಂವಿಧಾನದ ಮೂಲಕ ಅನುಷ್ಠಾನ ಮಾಡಿದ ಮಹಾ ಮಾನವತಾವಾದಿಯಾಗಿದ್ದಾರೆಂದು ಡಿ.ವೈ.ಎಸ್. ಪಿ.ರುದ್ರೇಶ್ ಉಜ್ಜನಕೊಪ್ಪ ಹೇಳಿದರು.
ಅವರು ಮಂಗಳವಾರ ನಗರದ ಡಾ. ಬಿ.ಆರ್ .ಅಂಬೇಡ್ಕರ್ ವೃತ್ತದಲ್ಲಿ ಕಂಪ್ಲಿ-ಗಂಗಾವತಿ ಅಂಬೇಡ್ಕರ್ ಸಂದೇಶಗಳ ಜಾಗೃತಿಗಾಗಿ ಯುವಕರ ಮ್ಯಾರಥಾನ್ ಓಟ ಮುಕ್ತಾಯಗೊಳಿಸಿ ಮಾತನಾಡಿದರು.
ಅಂಬೇಡ್ಕರ್ ಶೋಷಿತ ಸಮುದಾಯದ ಪ್ರತಿನಿಧಿಯಾಗಿ ಭಾರತ ನವ ನಿರ್ಮಾಣ ಭಾರತದ ಶಿಲ್ಪಿಯಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡು ಸದೃಢ ಆರೋಗ್ಯದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ಉನ್ನತ ಹುದ್ದೆಗಳನ್ನು ಪಡೆದು ಜನಸಾಮಾನ್ಯ ಸೇವೆ ಮಾಡುವಂತೆ ಆಗಬೇಕು. ಹಾಗೆಯೇ ಆದರೆ ಅಂಬೇಡ್ಕರ್ ಅವರು ಯುವಕರ ಬಗ್ಗೆ ಕಂಡ ಕನಸು ನನಸಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಕುಮಾರ್, ಸುನಿಲ್ ಕುಮಾರ್, ಅನಿಲ್ ಕುಮಾರ್, ಸುದೀಪ್, ಸಿದ್ದು ಹರೀಶ್, ಮೆಹಬೂಬ್ ಮುಖಂಡರಾದ ಕೆ. ಅಂಬಣ್ಣ ದೇವರಾಜ್. ಸೇರಿದಂತೆ ಅನೇಕ ಮುಖಂಡರಿದ್ದರು.