Advertisement

ಡಾ|ಅಂಬೇಡ್ಕರ್‌ ಜಯಂತಿ: ಸಿದ್ಧತೆ ಪರಿಶೀಲನೆ

03:37 PM Mar 13, 2017 | Team Udayavani |

ಚಿತ್ತಾಪುರ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಮಾ.18ರಂದು ನಡೆಯಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ಕಾರ್ಯಕ್ರಮದ ವೇದಿಕೆ ಸಿದ್ಧತೆ ಕಾರ್ಯಗಳನ್ನು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಖಾತೆ ಸಚಿವಪ್ರಿಯಾಂಕ ಖರ್ಗೆ ಪರಿಶೀಲಿಸಿದರು. ನಂತರ ಮಾತನಾಡಿದರು.

Advertisement

ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಧಿಕಾರಿಗಳು ಯಾವುದೇ ಒತ್ತಡಕ್ಕೆ ಸಿಲುಕದೆ ಕೆಲಸ ನಿರ್ವಹಿಸಬೇಕು. ಎಲ್ಲರ ಸಮನ್ವಯ ಮುಖ್ಯ. ಸಮಿತಿ ಪದಾಧಿಧಿಕಾರಿಗಳು ಪರಸ್ಪರ ಸಹಕರಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು. 

ತಾಲೂಕಿನ ಎಲ್ಲ ಜಾತಿ ಜನಾಂಗದವರು ಸೇರಿಕೊಂಡು ಇಡೀ ರಾಜ್ಯದಲ್ಲಿಯೇ ಆಗದ ರೀತಿಯಲ್ಲಿ ಪಟ್ಟಣದಲ್ಲಿ ಮಾದರಿ ರೀತಿಯಲ್ಲಿ ಅಂಬೇಡ್ಕರ ಅವರ ಜಯಂತಿಯನ್ನು ಅದ್ಧೂರಿಯಾಗಿಆಚರಿಸಲು ಸಮಿತಿ ಎಲ್ಲ ಕಾರ್ಯಕರ್ತರು ಸಹಕರಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಮುಂಜಾಗ್ರತೆ ಕ್ರಮವಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸಂಸಂದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಿ. ಪರಮೇಶ್ವರ, ಎಚ್‌. ಆಂಜನೇಯ, ಎಚ್‌.ಸಿ. ಮಹಾದೇವಪ್ಪ, ಬಸವರಾಜ ರಾಯರಡ್ಡಿ, ಡಾ| ಶರಣಪ್ರಕಾಶ ಪಾಟೀಲ, ಶಾಸಕರಾದ ಖಮರುಲ್‌ ಇಸ್ಲಾಂ, ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ, ಡಾ| ಉಮೇಶ ಜಾಧವ, ಜಿ.ರಾಮಕೃಷ್ಣ, ಡಾ| ಅಜಯ್‌ ಸಿಂಗ್‌ ಸೇರಿದಂತೆ ಇತರರು ಕಾರ್ಯಕ್ರಮಕ್ಕೆ ಬರಲಿದ್ದಾರೆ.

ಆದ್ದರಿಂದ ಜಾಗರೂಕತೆಯಿಂದ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು. ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಜಿಪಂ ಮಾಜಿ ಸದಸ್ಯ ಅಜೀಜ್‌ ಸೇಠ ರಾವೂರ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪೂಜಾರಿ, ಸೈಯ್ಯದ್‌ ಜಫರುಲ್‌ ಹಸನ್‌,

Advertisement

ನಾಗರಾಜ ಕಡಬೂರ, ಮುಖಂಡರಾದ ರಾಜಶೇಖರ, ಶಿವಕುಮಾರ ಸುಲ್ತಾನಪುರ, ಭೀಮು ಹೋತಿನಮಡಿ, ಶಂಕರ ಚವ್ಹಾಣ, ಮಲ್ಲಿಕಾರ್ಜುನ ಮುಡಬೂಳಕರ್‌, ಸಲೀಂ, ಶರಣು ಡೋಣಗಾಂವ, ರಾಜು ಸ್ವಾಮಿ, ತಾಲೂಕು ಅಧಿಕಾರಿಗಳಾದ ತಹಶೀಲ್ದಾರ ಮಲ್ಲೇಶಾ ತಂಗಾ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಜಗದೇವಪ್ಪ ಪಾಳಾ, ತಾಪಂ ಇಒ ಲಕ್ಷಣ ಶೃಂಗೇರಿ, ಹಣಮಂತರೆಡ್ಡಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next