Advertisement

ದೇವಾಡಿಗ ಪ್ರೀಮಿಯರ್‌ ಲೀಗ್‌ :ಅನುಧ್ಯಾ- ಅಸಲ್ಫಾ ತಂಡಕ್ಕೆ ಟ್ರೋಫಿ

04:10 PM Jun 16, 2017 | Team Udayavani |

ಮುಂಬಯಿ: ದೇವಾಡಿಗ ಪ್ರೀಮಿಯರ್‌ ಲೀಗ್‌ (DPL) ಕ್ರಿಕೆಟ್‌  ಪಂದ್ಯಾಟವು ಜೂ.  4 ರಂದು ಕಾಂದಿವಲಿ ಪಶ್ಚಿಮದ ಪೊಯ್ಸರ್‌  ಜಿಮಾVನ ಮೈದಾನದಲ್ಲಿ ನಡೆಯಿತು. ದೇವಾಡಿಗ ಸಂಘ ಮುಂಬಯಿ ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ ಅನುಧ್ಯಾ-ಅಸಲ್ಫಾ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

Advertisement

ದೇವಾಡಿಗ ಸಂಘ ಮುಂಬಯಿ ದೇವಾಡಿಗ ಯುವ ವಿಭಾಗ ಮತ್ತು ದೇವಾಡಿಗ ನ್ಪೋರ್ಟ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಈ ಪಂದ್ಯಾಟವನ್ನು ಆಯೋಜಿಸಿದ್ದು, ಸಂಘದ 9 ಪ್ರಾದೇಶಿಕ ಸಮನ್ವಯ ಸಮಿತಿಗಳ 9 ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾಟವನ್ನು ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾಗ  ವಾಸು ಎಸ್‌. ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಗೋಪಾಲ್‌ ಎಂ. ಮೊಲಿ, ಕೆ. ಕೆ. ಮೋಹನ್‌ದಾಸ್‌, ಹಿರಿಯಡ್ಕ ಮೋಹನ್‌ದಾಸ್‌, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷೆ  ಜಯಂತಿ ಎಂ. ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷ ಎಚ್‌. ಜಯ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾಂತಾ ಗೋಪಾಲ್‌ ಮೊಯ್ಲಿ, ಯುವ ಸಮಿತಿಯ ಮಾರ್ಗದರ್ಶಕ ನರೇಶ್‌ ಎಸ್‌.  ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ  ಕೃಷ್ಣ ಬಿ. ದೇವಾಡಿಗ ಅವರು ಉಪಸ್ಥಿತರಿದ್ದರು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ರವಿ ಎಸ್‌. ದೇವಾಡಿಗ ಅವರು, ದೇವಾಡಿಗ ಯುವ ವಿಭಾಗ ಮತ್ತು ದೇವಾಡಿಗ ನ್ಪೋರ್ಟ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಈ ದೇವಾಡಿಗ ಪ್ರೇಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟಕ್ಕೆ ಶುಭಾಶಯ ಕೋರಿದರು.  ಇಂತಹ ಚಟುವಟಿಕೆಗಳಿಂದ ಸಮಾಜ ಭಾಂದವರು ಸಮೀಪಕ್ಕೆ ಬಂದು ಅವರಲ್ಲಿ ಒಗ್ಗಟ್ಟು, ಒಮ್ಮತ, ಬಂಧುತ್ವ ಬೆಳೆದು ಸಂಘದ ಬಲವರ್ಧನೆಯಾಗುವುದು. ಇಂತಹ ಕಾರ್ಯಕ್ರಮಗಳಿಗೆ ಸಂಘವು ಯಾವಾಗಲೂ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಅಲ್ಲದೆ  ಫೇರ್‌  ಪ್ಲೇ ಅವಾರ್ಡ್‌ನ್ನು  ಟೀಮ… ಅನುಧ್ಯಾ ಅಸಲ್ಫಾ ಪಡೆಯಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಡೊಂಬಿವಲಿ ವಾರಿಯರ್ಸ್‌ ತಂಡದ ಹರೀಶ್‌  ದೇವಾಡಿಗ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಅನುಧ್ಯಾ ತಂಡದ  ಸಂತೋಷ್‌ ದೇವಾಡಿಗ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಡೊಂಬಿವಲಿ ವಾರಿಯರ್ಸ್‌ನ  ಹರೀಶ್‌ ದೇವಾಡಿಗ ಮತ್ತು ಪುನೀತ್‌ ದೇವಾಡಿಗ ಹಾಗೂ  ಅನುಧ್ಯಾ ತಂಡದ ಲತೇಶ್‌ ದೇವಾಡಿಗ, ಲವೇಶ್‌ ದೇವಾಡಿಗ, ಸಂತೋಷ್‌ ದೇವಾಡಿಗ, ಪ್ರವೀಣ್‌  ದೇವಾಡಿಗ, ಪ್ರೇರಣಾ ಮೀರಾರೋಡ್‌ ತಂಡದ ಆನಂದ ದೇವಾಡಿಗ, ಜೋಗೇಶ್ವರಿ ತಂಡದ  ನಿಶಾಂತ್‌  ದೇವಾಡಿಗ ಅವರು ಪಡೆದರು. ಎಲ್ಲ ತಂಡಗಳಿಗೆ ಭಾಗವಹಿಸುವಿಕೆ ಪ್ರಶಸ್ತಿ ನೀಡಲಾಯಿತು.

Advertisement

ಪಂದ್ಯಾಟದ ಯಶಸ್ಸಿಗಾಗಿ ಯುವ ಸಮಿತಿಯ ಮಾರ್ಗದರ್ಶಕ  ಪ್ರವೀಣ್‌ ನಾರಾಯಣ ಇವರು ಅನುಧ್ಯಾ-ಅಸಲ್ಫಾ ತಂಡವನ್ನು ಪ್ರಾಯೋಜಿಸಿ ಸಹಕರಿಸಿದರು. ದೇವಾಡಿಗ ಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರದೀಪ್‌ ದೇವಾಡಿಗ  ಉಪ ಕಾರ್ಯಾಧ್ಯಕ್ಷ

ಹರೀಶ್‌ ದೇವಾಡಿಗ ಮತ್ತು ಪ್ರಣೀತ್‌ ದೇವಾಡಿಗ ಕಾರ್ಯದರ್ಶಿಗಳಾದ ಸೌಮ್ಯಾ ಲತಾ ದೇವಾಡಿಗ ಮತ್ತು ಆತೀಷ್‌ ದೇವಾಡಿಗ, ನಿತೇಶ್‌ ದೇವಾಡಿಗ, ಅಕ್ಷಯ ದೇವಾಡಿಗ ಮತ್ತು ಯುವ ವಿಭಾಗದ ಸದಸ್ಯರು ಹಾಗೂ ಕ್ರೀಡಾ ಸಮಿತಿಯ ಸದಸ್ಯರು, ಕ್ರೀಡಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಎಚ್‌. ಜಯ ದೇವಾಡಿಗ ಮತ್ತು ಸತೀಶ್‌  ಕಣ್ವತೀರ್ಥ ಶ್ರಮಿಸಿದರು.
ಗಿರೀಶ್‌ ದೇವಾಡಿಗ ಮತ್ತು ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಪ್ರಣೀತ್‌ ದೇವಾಡಿಗ, ಪ್ರಯೋಜಕರಾಗಿ ಪ್ರಫುಲ್ಲಾ ವಾಸು ದೇವಾಡಿಗ, ಅಕ್ಷತಾ ಕುಡಿ³$ ಪಣಂಬೂರು, ಜಯಂತಿ ಎಂ. ದೇವಾಡಿಗ, ಥಾಣೆ- ಸಿಟಿ, ಮೀರಾ ರೋಡ್‌, ನವಿಮುಂಬಯಿ, ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿ ಸಹಕರಿಸಿದರು. ಸತೀಶ್‌ ಕಣ್ವತೀರ್ಥ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ  ಶೈಲೇಶ್‌ ದೇವಾಡಿಗ ಮತ್ತು  ದೀಕ್ಷಿತ್‌  ದೇವಾಡಿಗ ಅವರು ವೀಕ್ಷಕ ವಿವರಣೆಗಾರರಾಗಿ ಹಾಗೂ ಸ್ಕೋರರ್‌ಗಳಾಗಿ ಸಹಕರಿಸಿದರು. 

ಪಂದ್ಯಾಟದಲ್ಲಿ ಪ್ರಾದೇಶಿಕ ಸಮನ್ವಯ ಸಮಿತಿಗಳಾದ, ಜೋಗೇಶ್ವರಿ, ಬೊರಿವಿಲಿ, ಭಾಂಡೂಪ್‌, ಥಾಣೆ, ನವಿಮುಂಬಯಿ, ಸಿಟಿ, ಡೊಂಬಿವಿಲಿ, ಅಸಾಲ್ಫಾ, ಮೀರಾ ರೋಡ್‌ ವಲಯಗಳಿಂದ ಆರಿಸಿದ ಆಟಗಾರರ ತಂಡವು ಭಾಗವಹಿಸಿತು. ಫೈನಲ್‌ನಲ್ಲಿ ಅನುಧ್ಯಾ- ಅಸಲ್ಫಾ ತಂಡವು ಡೊಂಬಿವಿಲಿ ವಾರಿಯರ್ಸ್‌ ತಂಡವನ್ನು ಎದುರಿಸಿ ಅನುಧ್ಯಾ ಅಸಲ್ಫಾ ತಂಡವು    ಡಿಪಿಎಲ… 2017 ರ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ಟ್ರೋಫಿಯನ್ನು ಡೊಂಬಿವಿಲಿ ವಾರಿಯರ್ಸ್‌ ತಂಡ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next