Advertisement

Drugs ಕೇಸಲ್ಲಿ ಸಿಲುಕಿಸಲು ಸಂಚು: ನಾಲ್ವರು ಪೊಲೀಸರ ಅಮಾನತು

01:06 AM Sep 01, 2024 | Team Udayavani |

ಮುಂಬಯಿ: ಡ್ರಗ್ಸ್‌ ದಾಳಿಯಲ್ಲಿ ವ್ಯಕ್ತಿಯೊಬ್ಬನನ್ನು ಆರೋಪಿ ಯನ್ನಾಗಿ ಬಿಂಬಿಸಲು ಯತ್ನಿಸಿದ ನಾಲ್ವರು ಪೊಲೀಸರನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಈ ಕೃತ್ಯ ಸಿಸಿಟಿವಿ­ಯಲ್ಲಿ ಸೆರೆಯಾಗಿದ್ದು, ಅದರಿಂದಲೇ ಅವರು ಸಿಕ್ಕಿಬಿದ್ದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ನಡೆದಿದ್ದ ದಾಳಿ ವೇಳೆ ಪೊಲೀಸರು ಡೇನಿಯಲ್‌ ಎಂಬವವನನ್ನು ವಶಕ್ಕೆ ಪಡೆದಿ­ದ್ದರು. ಆದರೆ ಸಿಸಿಟಿವಿಯ ದೃಶ್ಯದಲ್ಲಿ ಪೊಲೀಸರು ಡೇನಿ­ಯಲ್‌ ಜೇಬಿನೊಳಗೆ ಏನನ್ನೋ ಇಡುತ್ತಿರುವುದು ಕಂಡುಬಂ­ದಿದೆ. ಡ್ರಗ್ಸ್‌ ಸಂಬಂಧಿತ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಡೇನಿಯಲ್‌ ಆರೋಪಿಸಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next