Advertisement
ದೇಶದಲ್ಲಿ ಗರಿಷ್ಠ ಬಿಲಿಯನೇರ್‌ಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನಕ್ಕೆ ಜಾರಿದೆ.ಮುಂಬಯಿಯಲ್ಲಿ ಈ ಬಾರಿ 58 ಶತ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 92 ಶತಕೋಟ್ಯಧೀಶರನ್ನು ಹೊಂದಿದೆ. ಬೀಜಿಂಗ್ 91 ಶತಕೋಟ್ಯಧೀಶರನ್ನು ಒಳಗೊಳ್ಳುವ ಮೂಲಕಅಗ್ರಸ್ಥಾನದಿಂದ ಕೆಳಗಿಳಿದಿದೆ. ಇನ್ನು ಮುಂಬಯಿ ಯಲ್ಲಿ 386 ಮಂದಿ ಶ್ರೀಮಂತರಿದ್ದಾರೆ. ಈ ಮೂಲಕ ದೇಶದಲ್ಲಿರುವ ಶ್ರೀಮಂತರ ಪೈಕಿ ಶೇ. 25 ಮಂದಿ ಮುಂಬಯಿಯಲ್ಲೇ ವಾಸವಿದ್ದಾರೆ ಎನ್ನಲಾಗಿದೆ. ಶ್ರೀಮಂತರು ವಾಸಕ್ಕೆ ಆದ್ಯತೆ ನೀಡುವ ದೇಶದ ನಗರಗಳ ಸಾಲಿನಲ್ಲೂ ಮುಂಬಯಿ ಅಗ್ರಸ್ಥಾನ ಪಡೆದುಕೊಂಡಿದೆ.
ಹಿಮ್ಮೆಟ್ಟಿಸಿದ ಹೈದರಾಬಾದ್
ದೇಶದಲ್ಲಿ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪೈಕಿ ಅಗ್ರ 3ನೇ ಸ್ಥಾನದಲ್ಲಿದ್ದ ಬೆಂಗಳೂರನ್ನು ಹೈದರಾಬಾದ್ ಈ ಬಾರಿ ಹಿಮ್ಮೆಟ್ಟಿಸಿದೆ. 18 ಮಂದಿ ಶತಕೋಟ್ಯಧಿಪತಿಗಳ ಹೊಸ ಸೇರ್ಪಡೆಯೊಂದಿಗೆ ಹೈದರಾಬಾದ್‌ನಲ್ಲಿರುವ ಶ್ರೀಮಂತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 27 ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾದರೂ ಒಟ್ಟು ಶ್ರೀಮಂತರ ಸಂಖ್ಯೆ 100ನ್ನಷ್ಟೇ ತಲುಪಿದೆ. ಕರ್ನಾಟಕಕ್ಕೆ 6ನೇ ಸ್ಥಾನ
ಶ್ರೀಮಂತರು ವಾಸವಿರುವ ಭಾರತದ ಅಗ್ರ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 6ನೇ ಸ್ಥಾನ ದೊರೆತಿದೆ. ಮಹಾರಾಷ್ಟ್ರದಲ್ಲಿ 470 ಮಂದಿ, ದಿಲ್ಲಿ 213, ಗುಜರಾತ್ 129, ತಮಿಳುನಾಡು 119, ತೆಲಂಗಾಣ 109, ಕರ್ನಾಟಕ 108 ಮಂದಿ ಶ್ರೀಮಂತರಿಗೆ ಆಶ್ರಯ ನೀಡಿವೆ.