ಬೆಳ್ಳಾರೆಯಿಂದ ಪೆರುವಾಜೆ ಮುಂದಕ್ಕೆ ಕಾಪುಕಾಡಿನ ಮಧ್ಯೆ ಈ ರಸ್ತೆ ಹಾದು ಹೋಗಿದೆ. ಇಲ್ಲಿ ರಸ್ತೆ ದಾಟಲು ಎಂಟೆದೆ ಬೇಕು ಅನ್ನುವ ಸ್ಥಿತಿ ಇದೆ. ಕಾಪು ಕಾಡಿನ ಎರಡು ಬದಿಗಳಲ್ಲಿ ಹತ್ತಾರು ಮರಗಳು ರಸ್ತೆಗೆ ಬುಡ ಸಹಿತ ವಾಲಿ ನಿಂತಿದೆ. ಅಲ್ಲಲ್ಲಿ ಕಾಡಿನ ಬದಿಗಳಲ್ಲಿ ಭೂ ಕುಸಿತ ಉಂಟಾಗಿದ್ದು ಒಸರು ನೀರು ತುಂಬಿ ಯಾವ ಕ್ಷಣದಲ್ಲಾದರೂ ಇಲ್ಲಿ ಮರ ಬೀಳುವ ಅಪಾಯ ಇದೆ.
Advertisement
ರಸ್ತೆಗೆ ನುಗ್ಗುವ ನೀರುಮಾಪ್ಲಮಜಲು ಬಳಿ ಪ್ರತೀ ಮಳೆಗಾಲದಲ್ಲಿಯು ಭಾರೀ ಮಳೆಯ ಸಂದರ್ಭ ಗೌರಿ ಹೊಳೆಯ ನೀರು ರಸ್ತೆಗೆ ನುಗ್ಗಿ ಕೆಲವು ತಾಸು ಸಂಚಾರ ಸ್ಥಗಿತವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಸವಣೂರಿನಿಂದ ಕಾಪು ತನಕ ಪುತ್ತೂರು ಲೋಕೋಪಯೋಗಿ ಇಲಾಖೆ, ಕಾಪುಕಾಡಿನಿಂದ ಬೆಳ್ಳಾರೆ ತನಕ ಸುಳ್ಯ ಉಪವಿಭಾಗಕ್ಕೆ ಸೇರಿರುವ ರಸ್ತೆ ಇದಾಗಿದ್ದು ಮಾಪ್ಲಮಜಲು ಸ್ಥಳ ಸುಳ್ಯ ಉಪ ವಿಭಾಗದ ವ್ಯಾಪ್ತಿಯಲ್ಲಿದೆ. ಈ ಹಿಂದೆ 3.5 ಕೋ. ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಅಭಿವೃದ್ಧಿ ಕೆಲಸ ನಡೆದಿತ್ತು. ಆ ವೇಳೆ ರಸ್ತೆಯನ್ನು ಎತ್ತರಿಸಿ, ಹೊಳೆ ಬದಿಗೆ ತಡೆಗೋಡೆ ನಿರ್ಮಿಸುವಂತೆ ಜನರು ಬೇಡಿಕೆ ಇಟ್ಟಿದ್ದರೂ ಇಲಾಖೆ ಅದಕ್ಕೆ ಸ್ಪಂದನೆ ನೀಡಿರಲಿಲ್ಲ. ತಗ್ಗು ರಸ್ತೆಗೆ ಡಾಮರು ಹಾಕಲಾಗಿತ್ತು. ಇದರ ಪರಿಣಾಮ ಹೊಳೆ ಭಾಗದಲ್ಲಿ ಕುಸಿತ ಕಂಡಿದ್ದು ರಸ್ತೆಯ ಒಂದು ಬದಿ ಬಿರುಕು ಬಿಟ್ಟಿದೆ.
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ
ಯಾತ್ರಾರ್ಥಿಗಳಿಗೆ ಕಡಿಮೆ ದೂರ, ಅವಧಿಯಲ್ಲಿ ಬೆಳ್ಳಾರೆ -ಪೆರುವಾಜೆ -ಸವಣೂರು ಸಂಪರ್ಕ ರಸ್ತೆ ಮೂಲಕ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ
ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತೆರಳಲುಈ ರಸ್ತೆಯನ್ನು ಬಳಸುತ್ತಾರೆ. ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಕಡಬ ತಾಲೂಕು ಕೇಂದ್ರ, ಆಲಂಕಾರು, ನೆಲ್ಯಾಡಿ ಮೊದಲಾದೆಡೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
Related Articles
Advertisement
– ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು ಉಪವಿಭಾಗ
ಉಸ್ತುವಾರಿ ಸಚಿವರಿಗೆ ತಿಳಿಸಲಾಗುವುದುರಸ್ತೆಗೆ ನೀರು ನುಗ್ಗುವ ಗೌರಿ ಹೊಳೆ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ನಿಂದ ಮನವಿ ಮಾಡಿದ್ದರೂ ಲೋಕೋಪಯೋಗಿ ಇಲಾಖೆ ಸ್ಪಂದನೆ ನೀಡಿಲ್ಲ. ಮರಗಳು ರಸ್ತೆ ಬೀಳಲು ಅಣಿಯಾಗಿದ್ದು ಇದರ ತೆರವಿಗೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. -ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷ, ಪೆರುವಾಜೆ ಗ್ರಾ.ಪಂ. – ಕಿರಣ್ ಪ್ರಸಾದ್ ಕುಂಡಡ್ಕ