Advertisement

ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು

05:05 PM Aug 08, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಳವಾದರೂ ಸಮಾಜದಲ್ಲಿ ಆಳವಾಗಿ ಬೇರೂರಿರುವ ವರದಕ್ಷಿಣೆ ಪಿಡುಗಿಗೆ ಕಡಿವಾಣ ಬಿದ್ದಿಲ್ಲ. ಈ ಪಿಡುಗಿಗೆ ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 2,821 ಮಹಿಳೆಯರು ಬಲಿಯಾಗಿದ್ದಾರೆಂಬ ಸಂಗತಿ ಬಹಿರಂಗಗೊಂಡಿದೆ.

Advertisement

ಪತಿ ಮಹಾಶಯರು ತವರಿನಿಂದ ವರದಕ್ಷಿಣೆ ತರುವಂತೆ ಪತ್ನಿಯರಿಗೆ ಚಿತ್ರ ವಿಚಿತ್ರ ಕಿರುಕುಳ ನೀಡುವ ಪ್ರವೃತ್ತಿ ಮುಂದುವರಿ ದಿದೆ. ಪತಿಯ ಕುಟುಂಬಸ್ಥರ ಹಣದ ವ್ಯಾಮೋಹಕ್ಕೆ ಮಹಿಳೆಯ ಬಾಳು ನರಕದ ಕೂಪವಾಗುತ್ತಿದೆ. ವರದಕ್ಷಿಣೆ ಕಿರುಕುಳಕ್ಕೆ ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಶೋಷಣೆಗೊಳಗಾಗುತ್ತಿದ್ದು, ಕಳೆದ 11 ವರ್ಷಗಳಲ್ಲಿ 19,479 ಕೇಸ್‌ಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿರುವುದು ಈ ಅಂಶಗಳಿಗೆ ಪುಷ್ಠಿ ನೀಡುತ್ತದೆ. ಇನ್ನು ಶೇ.85 ಕೇಸ್‌ಗಳು ಬೆಳಕಿಗೆ ಬರುತ್ತಿಲ್ಲ. ಉಳಿದಂತೆ ಶೇ.5 ನೈಜ ಕೇಸ್‌ಗಳಲ್ಲಿ ಸಂತ್ರಸ್ತೆಯರು ತಮಗಾದ ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದು, ಈ ಪೈಕಿ ಉನ್ನತ ಹುದ್ದೆಯಲ್ಲಿರುವ ವಿದ್ಯಾವಂತರ ಪಾಲೇ ಅಧಿಕವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

ಮನಃಶಾಸ್ತ್ರಜ್ಞರ ಮೊರೆ: ವರದಕ್ಷಿಣೆ ಪಿಡುಗಿಗೆ ಒಳಗಾದ ಶೇ.20 ಮಹಿಳೆಯರು ಖನ್ನತೆಗೆ ಒಳಗಾಗಿದ್ದು, ಸದ್ಯ ಮನಃಶಾಸ್ತ್ರಜ್ಞರ ಮೊರೆ ಹೋಗುತ್ತಿದ್ದಾರೆ. ವರದಕ್ಷಿಣೆ ಬಗ್ಗೆ ಪ್ರಶ್ನಿಸಿದರೆ ವಿಚ್ಛೇದನ ಕೊಡುವುದಾಗಿ ಪತಿ ಬೆದರಿಕೆ ಹಾಕುತ್ತಾರೆ ಎಂಬುದು ಠಾಣೆ ಮೆಟ್ಟಿಲೇರಿದ ಬಹುತೇಕ ಮಹಿಳೆಯರ ಅಳಲು. ವರದಕ್ಷಿಣೆ ಸಲುವಾಗಿ ಕೌಟುಂಬಿಕ ಕಲಹ ಪ್ರಕರಣ ದುಪ್ಪಟ್ಟಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ನಿಯಂತ್ರಣಕ್ಕೆ ಬಂದಿಲ್ಲ: 2010 ರಿಂದ 2022 ಜುಲೈವರೆಗೆ ರಾಜ್ಯಾದ್ಯಂತ 19,479 ವರದಕ್ಷಿಣೆ ಪ್ರಕರಣ ದಾಖಲಾಗಿದ್ದು, ಈ ಪೈಕಿ ಆತ್ಮಹತ್ಯೆ, ಬೆಂಕಿ ಗಾಹುತಿ, ಹಲ್ಲೆ ಸೇರಿ ಇನ್ನಿತರ ದೌರ್ಜನ್ಯಕ್ಕೊಳಗಾಗಿ 2,821 ಮಹಿಳೆಯರು ಮೃತಪಟ್ಟಿದ್ದಾರೆ. 2010-11ರಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 2,287 ವರ ದಕ್ಷಿಣೆ ಕೇಸ್‌ ದಾಖಲಾಗಿದ್ದು, ಈ ಪೈಕಿ 515 ಮಹಿಳೆಯರು ಸಾವನ್ನಪ್ಪಿದ್ದಾರೆ. 2020-21ರಲ್ಲಿ ಇದರ ಪ್ರಮಾಣ 3,233ಕ್ಕೆ ಏರಿಕೆಯಾಗಿದ್ದು, 332 ಮಹಿಳೆಯರು ಬಲಿಯಾಗಿದ್ದಾರೆ. ಇನ್ನು ಕಳೆದ 6 ತಿಂಗಳಲ್ಲಿ 1,089 ದೂರುಗಳು ಬಂದಿದ್ದು, 76 ವಿವಾಹಿತೆಯರು ದೌರ್ಜನ್ಯಕ್ಕೊಳ ಗಾಗಿ ಪ್ರಾಣ ಬಿಟ್ಟಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನಡೆಯುತ್ತಿದ್ದ ವರದಕ್ಷಿಣೆ ಪಿಡುಗು ಇನ್ನೂ ಅಷ್ಟೇ ಪ್ರಮಾಣದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಈ ಅಂಕಿ ಅಂಶಗಳು ಪುಷ್ಟಿ ನೀಡುತ್ತವೆ.

ಜಾಮೀನು ರಹಿತ ಶಿಕ್ಷೆ: ವರದಕ್ಷಿಣೆ ಪಿಡುಗಿನ ನಿಯಂತ್ರಣಕ್ಕಾಗಿ 1961ರÇÉೇ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ತರಲಾಗಿದೆ. 1984ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ. ವರದಕ್ಷಿಣೆ ಪ್ರಕರಣ ಸಾಬೀತಾದರೆ ಜಾಮೀನು ರಹಿತ ಶಿಕ್ಷೆ ನೀಡಲಾಗುತ್ತದೆ. ವರದಕ್ಷಿಣೆ ತೆಗೆದುಕೊಳ್ಳುವ ಹಾಗೂ ನೀಡುವ ಅಪರಾಧಕ್ಕೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ, ಡೌರಿ ಕೇಳಿದರೆ ಕನಿಷ್ಠ 2 ವರ್ಷ ಸೆರೆಮನೆ ವಾಸ ಶಿಕ್ಷೆ ವಿಧಿಸಲು ಅವಕಾಶವಿದೆ. ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು, ಅವರ ಪಾಲಕರು, ಸಂಬಂಧಿ, ಮಾನ್ಯತೆ ಪಡೆದಿರುವ ಸ್ವಯಂ ಸೇವಾ ಸಂಘ, ಸಂಸ್ಥೆಗಳು ಈ ಬಗ್ಗೆ ಪೊಲೀಸರಿಗೆ ಲಿಖೀತ ದೂರು ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಷ್ಟೆಲ್ಲ ಕಠಿಣ ಕಾನೂನುಗಳಿದ್ದರೂ ಈ ಪಿಡುಗನ್ನು ನಿವಾರಿಸುವು ದಿರಲಿ, ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ವರದಕ್ಷಿಣೆ ಕಿರುಕುಳಕ್ಕೊಳಗಾದ ಮಹಿಳೆಯರು ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ●ಪಾಟೀಲ್‌ ವಿನಾಯಕ ವಸಂತರಾವ್‌, ಡಿಸಿಪಿ

●ಅವಿನಾಶ್‌ ಮೂಡಂಬಿಕಾನ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next