Advertisement

ಜೀವಕ್ಕೆ ವರದಕ್ಷಿಣೆಯೇ ಅಪಾಯ!

09:38 AM Nov 28, 2018 | Harsha Rao |

ನ್ಯೂಯಾರ್ಕ್‌: ವಿಶ್ವಾದ್ಯಂತ ಮಹಿಳೆಯರಿಗೆ ಮನೆಯೇ ಅತ್ಯಂತ ಅಪಾಯಕರ ಸ್ಥಳ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆಯನ್ನು ತಪ್ಪಿಸಲು ಕಾನೂನು ತಂದರೂ ಇಂಥ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ ಎಂದಿದೆ. ದೇಶದಲ್ಲಿ ಕೌಟುಂಬಿಕ ಹಿಂಸೆಯಿಂದ ಸಾವಿಗೀಡಾಗುವ ಮಹಿಳೆಯರ ಪೈಕಿ ಶೇ.40ರಿಂದ ಶೇ.50ರಷ್ಟು ಜನರು ವರದಕ್ಷಿಣೆ ಪ್ರಕರಣಗಳಲ್ಲೇ ಸಾವನ್ನಪ್ಪು ತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ವರದಕ್ಷಿಣೆ ಪಿಡುಗನ್ನು ನಿಯಂತ್ರಿಸಲು ಹಲವು ಕಾನೂನುಗಳನ್ನು ಜಾರಿಗೊಳಿಸಿದರೂ 1999 ರಿಂದ 2016ರ ವರೆಗೂ ಈ ಪ್ರಮಾಣ ಇಳಿಮುಖ ಕಂಡಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ. 2016ರ ದತ್ತಾಂಶವನ್ನು ಆಧರಿಸಿ ವಿಶ್ವಸಂಸ್ಥೆ ವರದಿ ರೂಪಿಸಿದ್ದು, ಭಾರತದಲ್ಲಿ ಒಟ್ಟು ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯದ ಪ್ರಮಾಣ ಶೇ. 2.8 ಆಗಿದೆ. ಅಚ್ಚರಿಯ ಸಂಗತಿಯೆಂದರೆ ಕೀನ್ಯಾ (2.6), ತಾಂಜಾನಿಯಾ (2.5), ಅಜರ್‌ಬೈಜಾನ್‌ (1.8) ಹಾಗೂ ಜೋರ್ಡಾನ್‌ (0.8)ನಲ್ಲಿ ಈ ಪ್ರಮಾಣ ಭಾರತಕ್ಕಿಂತ ಕಡಿಮೆ ಇದೆ. ವಿಶ್ವಾದ್ಯಂತ ಕಳೆದ ವರ್ಷ 87 ಸಾವಿರ ಮಹಿಳೆ ಯರ ಕೊಲೆಗಳಾಗಿವೆ. ಆ ಪೈಕಿ ಶೇ.58ರಷ್ಟು ಹತ್ಯೆಗಳು ಸಂಗಾತಿ ಅಥವಾ ಕುಟುಂಬ ಸದಸ್ಯ ರಿಂದಲೇ ನಡೆದಿದೆ ಎಂದೂ ವರದಿ ಹೇಳಿದೆ.

ಅಷ್ಟೇ ಅಲ್ಲ, ವಿಶ್ವದ ವಿವಿಧ ದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ವರದಿ ರೂಪಿಸಿರುವ ವಿಶ್ವಸಂಸ್ಥೆ ಪ್ರಕಾರ, ಹಲವು ದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಕೈಗೊಂಡಿಲ್ಲ. ಕೆಲವು ಮಸೂದೆಗಳು ಹಾಗೂ ಕಾನೂನುಗಳನ್ನು ಜಾರಿಗೆ ತಂದಿರುವುದನ್ನು ಹೊರತುಪಡಿಸಿ ಯಾವುದೇ ಗಂಭೀರ ಕ್ರಮ ಜಾರಿಗೆ ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next