Advertisement

ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ಬಲಿ

12:22 PM Dec 23, 2021 | Team Udayavani |

ಹಾಸನ: ವಿವಾಹವಾದ 20 ದಿನಗಳೊಳಗೇ ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಯುವತಿಯೊಬ್ಬಳು ಬಲಿಯಾಗಿರುವ ಪ್ರಕರಣ ಹಾಸನದ ಸಲೀಂ ನಗರದಲ್ಲಿ ನಡೆದಿದೆ. ಅರಕಲಗೂಡು ತಾಲೂಕು, ಮಲ್ಲಿಪಟ್ಟಣ ಹೋಬಳಿ, ಹೊಳಲಗೋಡು ಗ್ರಾಮದ ಮುಕ್ತಾರ್‌ಖಾನ್‌ ಎಂಬವರ 4ನೇ ಮಗಳು ಫಿಜಾಖಾನಂ (22) ಎಂಬಾಕೆಯನ್ನು ಹಾಸನದ ಸಲೀಂ ನಗರ ವಾಸಿ ಶಾಗಿಲ್‌ ಎಂಬಾತ ಡಿ.2 ರಂದು ವಿವಾಹವಾಗಿದ್ದ.

Advertisement

ಮದುವೆ ಸಂದರ್ಭದಲ್ಲಿ ಮುಸ್ಲಿಂ ಸಂಪದಾಯದ ಪ್ರಕಾರ 2.50 ಲಕ್ಷ ರೂ. ನಗದು, ಮತ್ತು ಆಭರಣಗಳನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಒಂದು ವಾರದ ಹಿಂದೆ ಫಿಜಾಖಾನಂ ಮತ್ತು ಶಾಗಿಲ್‌ ಮಧುಚಂದ್ರಕ್ಕೂ ಹೋಗಿ ಬಂದಿದ್ದರು. ತವರು ಮನೆಯಿಂದ 5 ಲಕ್ಷ ರೂ. ವರದಕ್ಷಿಣೆ ತರುವಂತೆ ಫಿಜಾಖಾನಂಗೆ ಶಾಗಿಲ್‌ ಮನೆಯವರು ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ.

ಶಾಗಿಲ್‌ನ ಅಣ್ಣ ಸಜೀಲ್‌ ಅಹಮ್ಮದ್‌ ಎಂಬಾತ ಫಿಜಾಖಾನಂಳ ಸಹೋದರ ಸಲ್ಮಾನ್‌ ಗೆ ಮಂಗಳವಾರ ಬೆಳಗ್ಗೆ ಫೋನ್‌ ಮಾಡಿ ಫಿಜಾಖಾನಂ ಬೆಳಿಗ್ಗೆ ಸ್ನಾನಮಾಡಲುಹೋದಾಗ ಸ್ನಾನದಮನೆಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದ. ತವರು ಮನೆಯವರು ಬರುವ ವೇಳೆಗೆ ಫಿಜಾಖಾನಂ ಶವ ನಗರದ ಎಸ್‌ಎಸ್‌ಎಂ ಆಸ್ಪತ್ರೆಯಲ್ಲಿತ್ತು.

ವರದಕ್ಷಿಣೆ ಆಸೆಯಿಂದ ಶಾಗಿಲ್‌ಗೆ ಮತ್ತೂಂದು ಮದುವೆ ಮಾಡುವ ದುರುದದೇಶದಿಂದಲೇ ಆತನ ಸಹೋದರರಾದ ಸುಹಿಲ್‌ ಅಹಮ್ಮದ್‌ ಮತ್ತು ಸಜೀಲ್‌ ಅಹಮ್ಮದ್‌ ಅವರು ಉದ್ದೇಶಪೂರ್ವಕವಾಗಿ ಫಿಜಾಖಾನಂ ಸ್ನಾನ ಮಾಡಲು ಹೋದಾಗ ಗ್ಯಾಸ್‌ ಗೀಜರ್‌ ಆನ್‌ ಮಾಡಿಹೊರಗಡೆಯಿಂದ ಚಿಲಕ ಹಾಕಿ ಆಕೆ ಸ್ನಾನದ ಮನೆಯಲ್ಲಿಯೇ ಸಾಯುವಂತೆ ಮಾಡಿದ್ದಾರೆ. ಮೂವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತಳ ತಂದೆ ಮುಕ್ತಾರ್‌ ಖಾನ್‌ ಅವರು ಹಾಸನದ ಪೆನ್‌ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next