Advertisement

ತಣ್ಣಗಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಅಬ್ಬರ

11:42 PM Aug 16, 2019 | Lakshmi GovindaRaj |

ಬಾಗಲಕೋಟೆ: ಮಲಪ್ರಭಾ, ಘಟಪ್ರಭಾ ನದಿಗಳ ಪ್ರವಾಹ ತಗ್ಗಿದ್ದು, ಕೃಷ್ಣಾ ನದಿ ಕ್ರಮೇಣ ಶಾಂತವಾಗುತ್ತಿದೆ. ಗುರುವಾರ 5.38 ಲಕ್ಷ ಕ್ಯೂಸೆಕ್‌ ಇದ್ದ ಒಳ ಹರಿವು, ಶುಕ್ರವಾರ 4.79 ಲಕ್ಷ ಕ್ಯೂಸೆಕ್‌ಗೆ ಇಳಿದಿದೆ. ಹೀಗಾಗಿ, ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕವೂ ನಿಧಾನವಾಗಿ ಕಡಿಮೆಯಾಗುತ್ತಿದೆ.

Advertisement

ಕೃಷ್ಣಾ ನದಿಗೆ ಶುಕ್ರವಾರ 4,79,563 ಕ್ಯೂಸೆಕ್‌ ನೀರು ಹರಿದು ಬರು ತ್ತಿದ್ದರೆ, 5.20 ಲಕ್ಷ ಕ್ಯೂಸೆಕ್‌ ಹೊರ ಬಿಡಲಾಗುತ್ತಿದೆ. ಅಲ್ಲದೇ ಈವರೆಗೆ 3 ನದಿಗಳ ಪ್ರವಾಹದಿಂದ ಜಿಲ್ಲೆಯ 619 ಗ್ರಾಮಗಳಲ್ಲಿ 194 ಗ್ರಾಮ ಗಳು ಬಾಧಿತಗೊಂಡಿವೆ. ಕೃಷ್ಣಾ ನದಿ ಪಾತ್ರದ ಜಲಾವೃತಗೊಂಡ ಗ್ರಾಮಗಳಲ್ಲಿ ನೀರು ಕ್ರಮೇಣ ಇಳಿಮುಖವಾಗುತ್ತಿದ್ದು, ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ನಿಂತಿದೆ.

ಗ್ರಾಮಗಳು ಜಲಾವೃತಗೊಂಡ ಬಳಿಕ ಪರಿಹಾರ ಕೇಂದ್ರದಲ್ಲಿದ್ದ ಜನರು, ತಮ್ಮ ಮನೆಗಳಿಗೆ ಹೋಗಿ ನೋಡಿದರೆ ಗುರುತು ಸಿಗದಷ್ಟು ಹಾನಿಯಾಗಿದೆ. ಮತ್ತೆ ಆರು ಮಂದಿ ಸಾವು: ಪ್ರವಾಹದಿಂದ ಬೇಸತ್ತು ಹುನಗುಂದ ತಾಲೂಕು ರಾಮಥಾಳ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಕುಲ್ಹಳ್ಳಿಯ ಮೀನುಗಾರ ಆತ್ಮಹತ್ಯೆ ಮಾಡಿಕೊಂಡರೆ, ಓರ್ವ ಹಾವು ಕಚ್ಚಿ, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶುಕ್ರವಾರ ಮೀನುಗಾರನೊಬ್ಬ ಮನೆ ಬಿದ್ದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನಿಬ್ಬರು ಅನಾರೋಗ್ಯದಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆದರೆ, ಜಿಲ್ಲಾಡಳಿತ ಈವರೆಗೆ ಪ್ರವಾಹ ಬಾಧಿತವಾಗಿ ಮೂವರು ಮೃತಪಟ್ಟಿರುವುದು ಎಂದು ದೃಢಪಡಿಸಿದ್ದು, ಆತ್ಮಹತ್ಯೆ ಮಾಡಿಕೊಂಡ ಇಬ್ಬರು, ಮೆಟಗುಡ್ಡದ ಪರಿಹಾರ ಕೇಂದ್ರದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಯ ಸಾವನ್ನು ಪ್ರವಾಹ ಬಾಧಿತದಿಂದ ಸಾವು ಎಂದು ಪರಿಗಣಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next